Published : Mar 01, 2025, 04:06 PM ISTUpdated : Mar 01, 2025, 07:15 PM IST
ನಿಮ್ಮ ಮನೆಯಲ್ಲೂ ಮಕ್ಕಳು, ಹಿರಿಯರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ಈ ಆಯುರ್ವೇದ ಪರಿಹಾರಗಳನ್ನು ಟ್ರೈ ಮಾಡಬಹುದು. ಇದು ಶೀಘ್ರದಲ್ಲೇ ಸಮಸ್ಯೆಯಿಂದ ಪರಿಹಾರ ನೀಡುತ್ತೆ.
ಇಂದಿನ ಕಾಲದಲ್ಲಿ, ಫಾಸ್ಟ್ ಫುಡ್ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳು ಸಹ ಮೂಲವ್ಯಾಧಿಯ ಸಮಸ್ಯೆಗಳನ್ನು (piles problem) ಎದುರಿಸುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಒಬ್ಬ ಯಾರದರೂ ಪೈಲ್ಸ್ ನಿಂದ ಬಳಲುತ್ತಿದ್ದರೆ, ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
27
ಹೆಚ್ಚು ಮಸಾಲೆಯುಕ್ತ ಮತ್ತು ಕರಿದ ಆಹಾರಗಳಿಂದಾಗಿ ಮಕ್ಕಳು ಹೆಚ್ಚಾಗಿ ಮಲಬದ್ಧತೆಯಿಂದ (constipation)ಬಳಲುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಇದು ಕೇವಲ ಮಕ್ಕಳಲ್ಲಿ ಕಂಡು ಬರುವ ಸಮಸ್ಯೆ ಅಲ್ಲ; ಕಳಪೆ ಆಹಾರದಿಂದಾಗಿ ಈಗ ಹೆಚ್ಚಿನ ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಲಬದ್ಧತೆಯ ಗಂಭೀರ ಸ್ಥಿತಿಯು ನಂತರ ಪೈಲ್ಸ್ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸೋದ್ರಿಂದ ಕೂಡ ಮಲಬದ್ಧತೆ ಹೆಚ್ಚುತ್ತೆ.
37
ಈ ರೋಗವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಕರಿದ ಆಹಾರಗಳು ಮತ್ತು ಜಂಕ್ ಫುಡ್ (junk foods) ಅನ್ನು ತಪ್ಪಿಸುವುದು. ಸರಿಯಾದ ಪ್ರಮಾಣದ ನೀರನ್ನು ಕುಡಿಯಬೇಕು ಮತ್ತು ದೈಹಿಕವಾಗಿ ಸಕ್ರಿಯರಾಗಿರಬೇಕು. ಪೈಲ್ಸ್ ಎಂಬುದು ಕಳಪೆ ಆಹಾರದಿಂದ ಉಂಟಾಗುವ ಹೊಟ್ಟೆಯ ಕಾಯಿಲೆ ಎಂದು ತಜ್ಞರು ಹೇಳುತ್ತಾರೆ.
47
ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೆಕು ಎಂದು ವೈದ್ಯರು ಹೇಳುತ್ತಾರೆ. ಮೆಕ್ಸಿಕನ್ ಚಿಪ್ಸ್, ಮೈದಾದಿಂದ ಮಾಡಿದ ಕೆಲ ಆಹಾರಗಳು ಗುದ ಪ್ರದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಂಶಗಳನ್ನು ಹೊಂದಿರುತ್ತವೆ. ಇದು ರಕ್ತನಾಳಗಳಲ್ಲಿ ಕಿರಿಕಿರಿ, ತುರಿಕೆ ಮತ್ತು ಊತಕ್ಕೆ ಕಾರಣವಾಗುತ್ತದೆ.
57
ನಿಮಗೂ ಕೂಡ ಇಂತಹ ಸಮಸ್ಯೆಗಳು ಕಂಡು ಬಂದರೆ ಬೇವಿನ ಎಲೆಗಳ (neem leaves)ನೀರನ್ನು ಹಚ್ಚಬಹುದು, ಅಲ್ಲದೇ ಐಸ್ ಕ್ಯೂಬ್ ಗಳನ್ನು ಬ್ಯಾಗ್ ನಲ್ಲಿ ಹಾಕಿ ಅದನ್ನು ಆ ಜಾಗದಲ್ಲಿ ಇಡೋದರಿಂದ, ಅಲ್ಲಿ ಉಂಟಾದ ಮೊಡವೆಗಳನ್ನು ತಗ್ಗಿಸುತ್ತೆ ಹಾಗೂ ಕಿರಿಕಿರಿ, ತುರಿಕೆಯಿಂದ ಆರಾಮ ದೊರೆಯುತ್ತೆ.
67
ಇದಲ್ಲದೇ ಊಟಕ್ಕೆ ಮೊದಲು 1 ಟೀಸ್ಪೂನ್ ಇಸಬಗೋಲು ತೆಗೆದುಕೊಳ್ಳೋದು ಉತ್ತಮ. ಇದು ಕರುಳಿನ ಸುಲಭ ಚಲನೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ. ನಿಮ್ಮ ಆಹಾರದಲ್ಲಿ ಫೈಬರ್ (fiber food) ಪ್ರಮಾಣವನ್ನು ಹೆಚ್ಚಿಸಿ, ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.
77
ಪ್ರತಿದಿನ ವಾಕಿಂಗ್ ಹೋಗುವುದನ್ನು (regular walking) ಅಭ್ಯಾಸ ಮಾಡಿಕೊಳ್ಳಿ, ಆವಾಗ ಪೈಲ್ಸ್ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಇರುತ್ತೆ. ಯೋಗ ಮತ್ತು ಸರಿಯಾದ ಆಹಾರದ ಮೂಲಕ ಪೈಲ್ಸ್ ತಡೆಗಟ್ಟಬಹುದು. ಪೈಲ್ಸ್ ಸಮಸ್ಯೆಯ ಬಗ್ಗೆ ನೀವು ಎಷ್ಟು ಬೇಗ ಗಮನ ಹರಿಸುತ್ತೀರೋ, ಅಷ್ಟು ಬೇಗ ನೀವು ಪರಿಹಾರವನ್ನು ಕಂಡುಕೊಳ್ಳುತ್ತೀರಿ. ಸಾಧ್ಯವಾದಷ್ಟು ಈ ಸಮಸ್ಯೆಗೆ ನೈಸರ್ಗಿಕ ವಿಧಾನಗಳೊಂದಿಗೆ ಚಿಕಿತ್ಸೆ ನೀಡುವುದು ಹೆಚ್ಚು ಪ್ರಯೋಜನಕಾರಿ.