ಮಳೆಗಾಲದ ತುರಿಕೆ: ಬೆಸ್ಟ್ ಈ ಮನೆಮದ್ದುಗಳ ಬಳಕೆ
First Published | Aug 6, 2021, 2:25 PM ISTಪ್ರಸ್ತುತ ದೇಶದಲ್ಲಿ ಮುಂಗಾರು ಮಳೆ ಭಾರಿ ಜೋರಾಗಿಯೇ ಸುರೀತಿದೆ. ಮಳೆಗಾಲದಲ್ಲಿ, ಬೆವರು ಮತ್ತು ಮಳೆ ನೀರಿಗೆ ದೇಹ ಬೇಗ ಒಡ್ಡಿಕೊಳ್ಳುವುದರಿಂದ ಚರ್ಮದ ದದ್ದು ಮತ್ತು ತುರಿಕೆ ಸಮಸ್ಯೆ ಸಾಮಾನ್ಯ. ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತೆ ಮತ್ತು ಜೊತೆಗೆ ಈ ಸಮಯದಲ್ಲಿ ಉಂಟಾಗುವ ಶಾಖ ಬೆವರಲು ಕಾರಣವಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳೆದು, ಇವುಗಳಿಂದಾಗಿ ಚರ್ಮದ ತುರಿಕೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.