ಹೊಸ ಬಟ್ಟೆ ತಗೊಂಡು ಒಗೆಯದೇ ಧರಿಸಬಾರದೇಕೆ..?

First Published Sep 18, 2020, 5:41 PM IST

ಹೊಸ ಬಟ್ಟೆ ತಗೊಂದು ಒಗೆಯದೇ ಧರಿಸ್ತೀರಾ..? ಹೌದು ಅಂತಾದ್ರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಶಾಪಿಂಗ್ ಮಾಡಿದ ಬಟ್ಟೆ ಒಗೆಯದೇ ಧರಿಸಿದ್ರೆ ಖಂಡಿತಾ ನಿಮ್ಮ ಸ್ಕಿನ್‌ಗೆ ಒಳ್ಳೆಯದಲ್ಲ.

ಹೊಸ ಬಟ್ಟೆಗಳು ಬ್ಯಾಕ್ಟಿರಿಯಾ, ಕೀಟಾಣುಗಳನ್ನು ನಿಮ್ಮ ದೇಹಕ್ಕೆ ವರ್ಗಾಯಿಸಬಹುದು. ಇದರಿಂದ ಗಂಭೀರ ಚರ್ಮದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
undefined
ಹೊಸ ಬಟ್ಟೆಗಳು ಕೀಟಾಣುಗಳ ಮನೆ: ಫ್ಯಾಕ್ಟರಿಯಲ್ಲಿ ಬಟ್ಟೆಗಳನ್ನು ತಯಾರಿಸಿದ ನಂತರ ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೇರೆ ಬೇರೆ ರೀತಿಯ ವಾಹನಗಳ ಮೂಲಕ ಟ್ರಾನ್ಸ್‌ಪೋರ್ಟ್ ಮಾಡಲಾಗುತ್ತದೆ.
undefined
ಬಟ್ಟೆ ತಯಾರಿಸಿದ್ದು ಹೇಗೆ..? ಅದು ಎಲ್ಲಿಡಲಾಗಿತ್ತು..? ಯಾರೆಲ್ಲಾ ಮುಟ್ಟಿದ್ರು ಎಂಬುದು ಯಾರಿಗೂ ಗೊತ್ತಿರಲಾರದು. ಹಾಗಾಗಿ ಧರಿಸೋ ಮುನ್ನ ಬಟ್ಟೆ ಒಗೆದು ಧರಿಸೋದು ಜಾಣತನ
undefined
ಬಹಳಷ್ಟು ಜನ ನೀವು ಖರೀದಿಸಿದ ಬಟ್ಟೆ ಟ್ರಯಲ್ ಮಾಡಿರಬಹುದು: ಮಾಲ್‌ಗಳಲ್ಲಿ ಬಟ್ಟೆ ಟ್ರೈ ಮಾಡಿ ಖರೀದಿಸುತ್ತಾರೆ. ಒಂದೇ ಬಟ್ಟೆಯನ್ನು ಒಂದೇ ದಿನದಲ್ಲಿ ಹಲವಾರು ಜನ ಧರಿಸಿ ನೋಡಿರುತ್ತಾರೆ.
undefined
ಅವರಿಂದ ಬಟ್ಟೆಗೆ ಅಂಟಿಯ ಬ್ಯಾಕ್ಟೀರಿಯಾ ನಿಮ್ಮ ದೇಹಕ್ಕೆ ಅಂಟುವ ಸಾಧ್ಯತೆ ಇದೆ. ಇದರಿಂದ ಚರ್ಮ ತುರಿಕೆ, ನೋವು, ಅಲರ್ಜಿ ಕಾಣಿಸಿಕೊಳ್ಳಬಹುದು.
undefined
ಬಟ್ಟೆಯ ಬಣ್ಣಕ್ಕೆ ಬಳಸೋ ಕೆಮಿಕಲ್ಸ್: ಬಟ್ಟೆಗೆ ಆಕರ್ಷಕ ಬಣ್ಣ ನೀಡೋಕೆ ಖಂಡಿತಾ ಕೆಮಿಕಲ್ಸ್ ಬಳಸುತ್ತಾರೆ. ಹಿಂದಿನ ಕಾಲದಂತೆ ಈಗ ಬಟ್ಟೆಗೆ ನೈಸರ್ಗಿಕ ಬಣ್ಣ ಮಾತ್ರ ಕೊಡುವುದಲ್ಲ.
undefined
ನೀವು ಹೊಸ ಬಟ್ಟೆ ಹಾಗೆಯೇ ಧರಿಸಿದಾಗ ಅದರ ರಾಸಾಯನಿಕ ಅಂಶ ನಿಮ್ಮ ತ್ವಚೆಗೆ ತಾಗುತ್ತದೆ. ಮುಖ್ಯವಾಗಿ ಅಂಡರ್‌ ಆಮ್ರ್ಸ್‌ನಂತಹ ಬೆವರು ಹೊರ ಬರುವ ಸ್ಥಳದಲ್ಲಿ ಸಂಪರ್ಕ ಬಂದಾಗ ಇನ್ನಷ್ಟು ಅಪಾಯಕಾರಿ.
undefined
ಬಾಟಂ ಲೈನ್: ಆರಂಭದಲ್ಲಿ ಒಗೆಯದೇ ಬಟ್ಟೆ ಹಾಕೋದ್ರಿಂದ ಗಂಭೀರ ಸಮಸ್ಯೆಯಾಗದು. ಆದರೆ ಕ್ರಮೇಣ ನಿಮ್ಮ ತ್ವಚೆಯಲ್ಲಿ ಆಗೋ ಸಣ್ಣ ಬದಲಾವಣೆ ನಿಮಗೆ ತುಂಬ ಕಿರಿಕಿರಿ ಎನಿಸಬಹುದು.
undefined
ವೈಯಕ್ತಿಕವಾಗಿ ಸುರಕ್ಷತೆ ನೋಡಿದರೆ ಹೊಸ ಬಟ್ಟೆ ವಾಶ್ ಮಾಡಿ ಬಳಸೋದು ಸುರಕ್ಷಿತ. ಮಕ್ಕಳ ತ್ವಚೆ ಸೆನ್ಸಿಟಿವ್ ಆಗಿರೋದ್ರಿಂದ ಅವರ ಬಟ್ಟೆಗಳನ್ನು ಒಗೆಯದೇ ಬಳಸಲೇಬಾರದು.
undefined
click me!