Weight Loss Tips: ಈ ಟಿಪ್ಸ್ ಟ್ರೈ ಮಾಡಿದ್ರೆ ಕೆಲವೇ ದಿನಗಳಲ್ಲಿ ತೂಕ ನಷ್ಟ

First Published | Apr 22, 2022, 4:58 PM IST

How to lose weight: ಜನರು ತಮ್ಮ ತೂಕವನ್ನು ಕಡಿಮೆ ಮಾಡಲು ಯಾರ್ಯಾರೋ ಹೇಳಿದ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ಪ್ರತಿಯೊಬ್ಬರೂ ತಮ್ಮ ದೇಹವನ್ನು ಪರಿಪೂರ್ಣವಾಗಿ ಮತ್ತು ಅದೇ ಸಮಯದಲ್ಲಿ ಫಿಟ್ ಆಗಿ ಕಾಣುವಂತೆ ಮಾಡಬೇಕೆಂದು ಬಯಸುವುದರಿಂದ ಜನರು ತೂಕ ಇಳಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಾರೆ. ಆದರೆ ಜಿಮ್ ನಲ್ಲಿ ಹಲವಾರು ಗಂಟೆಗಳ ಕಾಲ ಕಳೆದ ನಂತರವೂ, ಅನೇಕ ಜನರು ತೂಕವನ್ನು ಕಳೆದುಕೊಳ್ಳುವುದಿಲ್ಲ. ಹಾಗಿದ್ರೆ ಮತ್ತೇನು ಮಾಡೋದು?

ತೂಕ ಇಳಿಕೆ(Weight loss) ಎಂದರೆ ನೀವು ನಿಮ್ಮ ದೇಹಕ್ಕೆ ಯಾವುದೇ ರೀತಿಯ ಶಿಕ್ಷೆಯನ್ನು ನೀಡುವುದು ಎಂದರ್ಥವಲ್ಲ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ನೀವು ಸರಿಯಾದ ರೀತಿಯಲ್ಲಿ ತೂಕವನ್ನು ಕಳೆದುಕೊಂಡರೆ, ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹವು ಸಹ ಆರೋಗ್ಯಕರವಾಗಿರುತ್ತದೆ ಮತ್ತು ಶೀಘ್ರದಲ್ಲೇ ನಿಮ್ಮ ತೂಕ ನಷ್ಟವೂ ಆಗುತ್ತದೆ.

ಯೋಗ(Yoga) ಮಾಡುವುದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ಸಹಾಯ ಮಾಡುವ ಅಂತಹ ಅನೇಕ ಯೋಗ ಭಂಗಿಗಳಿವೆ, ಅವುಗಳನ್ನು ನೀವು ದಿನಚರಿಯಲ್ಲಿ ಅಭ್ಯಾಸ ಮಾಡಿದ್ರೆ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ಇದು ತೂಕ ಕಳೆದುಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ.

Tap to resize

ಪಶ್ಚಿಮೋತ್ಥಾನ(Paschimottanasana) - ಇದು ನಿಮ್ಮ ದೇಹವನ್ನು ಹಿಗ್ಗಿಸಲು ಸಹಾಯ ಮಾಡುವ ಒಂದು ಮುಖ್ಯ ಭಂಗಿಯಾಗಿದೆ. ಇದು ಬೆನ್ನನ್ನು ಸಹ ಬೆಂಬಲಿಸುತ್ತದೆ. ಈ ಆಸನವು ನಿಮ್ಮ ದೈಹಿಕ ನಮ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಧುಮೇಹ ಮತ್ತು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಪಶ್ಚಿಮೋತ್ಥಾನ ಮಾಡುವುದು ಹೇಗೆ?
ಈ ಆಸನವನ್ನು ಮಾಡಲು ನೀವು ನಿಮ್ಮ ದೇಹದ ಮೇಲ್ಭಾಗವನ್ನು ಕೆಳಗಿನ ಭಾಗಕ್ಕಿಂತ ಮೇಲಕ್ಕೆ ಸರಿಸಬೇಕು. ಮೊದಲಿಗೆ, ಕಾಲುಗಳನ್ನು ನೇರವಾಗಿಸಿ ಕುಳಿತುಕೊಳ್ಳಿ ಮತ್ತು ನಂತರ ಮೇಲ್ಭಾಗವನ್ನು ಮುಂದಕ್ಕೆ ಚಲಿಸಿ.ಇದನ್ನು ಮುಂದುವರಿಯಲು ನಿಮ್ಮ ಕೈಗಳು(Hands) ನಿಮ್ಮನ್ನು ಬೆಂಬಲಿಸುತ್ತವೆ. ಅದರ ನಂತರ ನೀವು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ತಿರುಗಬೇಕು. ಈಗ ನೀವು ನಿಮ್ಮ ಕೈಗಳನ್ನು ಮುಂದೆ ತೆರೆದಿಡಬೇಕು ಮತ್ತು ನಿಮ್ಮ ಮೂಗು ಮೊಣಕಾಲುಗಳನ್ನು ಸ್ಪರ್ಶಿಸುತ್ತಿರಬೇಕು.

ಉತ್ತಾನಾಸನ (Uttanasana)  - ಈ ಆಸನವು ಹೊಟ್ಟೆಯ ಕೊಬ್ಬಿನ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು  ಭುಜಗಳನ್ನು ಹಿಗ್ಗಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಇದು ತೊಡೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿಶ್ರಾಂತಿ ಪಡೆಯಲು ಮತ್ತು ನಿಮ್ಮ ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹದ ಆಕಾರವನ್ನು ಸರಿಪಡಿಸಲು ಈ ಯೋಗ ಸಾಕಷ್ಟು ಸಹಾಯ ಮಾಡುತ್ತದೆ.

ಉತ್ತಾನಾಸನ ಮಾಡುವುದು ಹೇಗೆ?
ಈ ಆಸನವನ್ನು ಮಾಡಲು, ನೀವು ನೇರವಾಗಿ ನಿಲ್ಲುವ ಮೂಲಕ ಪ್ರಾರಂಭಿಸಬೇಕು. ಇದಕ್ಕಾಗಿ ನೀವು ನಿಮ್ಮ ಬೆನ್ನನ್ನು ಸ್ಟ್ರೈಟ್(Back Straight) ಮಾಡಬೇಕು. ಆರಂಭದಲ್ಲಿ ಇದು ಕಷ್ಟವೆಂದು ತೋರುತ್ತದೆ, ಆದರೆ ತೂಕ ಇಳಿಸಿಕೊಳ್ಳಲು ಮಾಡಬೇಕಾದ ಅತ್ಯುತ್ತಮ ಆಸನಗಳಲ್ಲಿ ಒಂದಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಇದಕ್ಕಾಗಿ, ನಿಧಾನವಾಗಿ ಬೆನ್ನನ್ನು ಬಾಗಿಸಿ,  ಮೊಣಕಾಲುಗಳನ್ನು ನೇರವಾಗಿ ಇಡಬೇಕು.  ಈಗ ನಿಮ್ಮ ಕೈಗಳಿಂದ ನೆಲವನ್ನು ಅಥವಾ ಪಾದವನ್ನು ಸ್ಪರ್ಶಿಸಲು ಪ್ರಯತ್ನಿಸಿ. 
 

ಅಧೋಮುಖದ ಶವಾಸನ - ಇದು ಹಿಗ್ಗುವಿಕೆ ಮತ್ತು ತೂಕ ಇಳಿಸಲು  ಉತ್ತಮ ಆಸನವಾಗಿದೆ. ಇದು ಡಾಗ್ ಸ್ಟ್ರೆಚ್ ರೀತಿಯಲ್ಲಿಯೇ ಇದೆ. ಈ ಯೋಗ ಭಂಗಿ, ಹೆಚ್ಚಾಗಿ, ದೇಹದ ಸ್ನಾಯುಗಳನ್ನು(Muscles) ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಹರಿವನ್ನು ಸಹ ಹೆಚ್ಚಿಸುತ್ತದೆ. ತೂಕ ಇಳಿಕೆಗೆ ಸಹಾಯಕವಾಗಿದೆ. 

ಅಧೋಮುಖ ಶ್ವಾನಾಸನ ಮಾಡುವುದು ಹೇಗೆ?
ಈ ಆಸನವನ್ನು ಮಾಡಲು, ಮೊದಲನೆಯದಾಗಿ, ನಿಮ್ಮ ಕೈಗಳು ಮತ್ತು ಪಾದಗಳ ಕಾಲ್ಬೆರಳುಗಳ ಹೆಚ್ಚು ಬಲವನ್ನು ಹಾಕಬೇಕು. ಆರಂಭದಲ್ಲಿ, ಮೊಣಕಾಲುಗಳು ಮಾತ್ರ ಇದನ್ನು ಮಾಡಬಲ್ಲವು. ಪಾದಗಳನ್ನು(Feet) ನೆಲಮೇಲೆ ಇಟ್ಟು, ತ್ರಿಕೋನ ಆಕೃತಿಯಲ್ಲಿ ನಿಮ್ಮ ಬೆನ್ನನ್ನು ಬಾಗಿಸಿ ಅಂಗೈ ನೆಲಕ್ಕೆ ತಾಕುವಂತೆ ಇಡಬೇಕು. ನಿಮ್ಮ ಪಾದಗಳು ಮತ್ತು ಕೈಗಳ ಮೇಲೆ ನೀವು ಸಂಪೂರ್ಣ ದೇಹದ ತೂಕವನ್ನು ಹೊಂದಿರಬೇಕು. ಈಗ ನಿಮ್ಮ ಸೊಂಟವನ್ನು ಎತ್ತಿಕೊಳ್ಳಿ. ನೀವು ತಲೆಕೆಳಗಾದ V ಯನ್ನು ಮಾಡಿದಂತೆ ಇರಬೇಕು. ನಂತರ ನಿಮ್ಮ ದೇಹವನ್ನು ಹಿಗ್ಗಿಸಿ ಮತ್ತು ಈ ಯೋಗದ ಸಮಯದಲ್ಲಿ ಮೊಣಕಾಲುಗಳು ಅಥವಾ ಕೈಗಳನ್ನು ಬಗ್ಗಿಸದಂತೆ ನೋಡಿಕೊಳ್ಳಿ.

ತ್ರಿಕೋನಾಸನ - ಇದು ಪೂರ್ತಿ ದೇಹಕ್ಕೆ(body) ಬಲವನ್ನು ನೀಡಲು ಸಹಾಯಕವಾಗಿದೆ. ಯಾಕೆಂದರೆ ಈ ಆಸನವನ್ನು ಪೂರ್ತಿ ದೇಹವನ್ನು ಬಳಸಿ ಮಾಡಲಾಗುತ್ತದೆ. ಇದು ಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ರೀಡ್ ಮೂಳೆಯನ್ನು ಫ್ಲೆಕ್ಸಿಬಲ್ ಮಾಡುತ್ತದೆ. ಇದು ನಿಮ್ಮ ದೇಹದ ಅಂಗಕ್ಕೂ ಸಾಕಷ್ಟು ಒಳ್ಳೆಯದು. 
 

ತ್ರಿಕೋನಾಸನ(Trikonasana) ಮಾಡುವುದು ಹೇಗೆ?
ಈ ಆಸನವನ್ನು ಮಾಡಲು ನೀವು ಆರಂಭದಲ್ಲಿ ನೇರವಾಗಿ ನಿಲ್ಲಬೇಕು. ಎರಡೂ ಕೈಗಳನ್ನು ಭುಜದ ಅಗಲಕ್ಕೆ ನೇರಗೊಳಿಸಿ. ಈಗ ಬಲಗಡೆಗೆ ಬಾಗಿ ಕೈಯನ್ನು ಹೆಬ್ಬೆರಳಿಗೆ ಸೇರಿಸಬೇಕು.  ನೀವು ಸ್ವಲ್ಪ ಸಮಯದವರೆಗೆ ಅದೇ ರೀತಿ ಇರಬೇಕು. ಇದರ ನಂತರ, ಸಾಮಾನ್ಯ ಭಂಗಿಗೆ ಬನ್ನಿ ಮತ್ತು ನಂತರ ದೇಹದ ಇನ್ನೊಂದು ಬದಿಗೆ ಅದೇ ರೀತಿ ಮಾಡಿ.

Latest Videos

click me!