ಮುಖ ಲಕ ಲಕ ಅನ್ನಬೇಕು ಅಂದರೆ ಏನ್ಮಾಡ್ಬೇಕು: ಇಲ್ಲಿದೆ ನಟಿ ಸಾಯಿ ಪಲ್ಲವಿಯ 5 ಬ್ಯೂಟಿ ಟಿಪ್ಸ್‌

First Published | Oct 14, 2024, 11:08 AM IST

‘ಒಂಚೂರೂ ಮೇಕಪ್‌ ಮಾಡದೇ ಮುಖ ತೊಳೆದು ಕಾಜಲ್‌ ಹಾಕ್ಕೊಂಡು ಬಂದು ಕ್ಯಾಮರ ಎದುರು ನಿಂತು ಬಿಡ್ತಾರೆ. ಒಮ್ಮೆ ಆ್ಯಕ್ಷನ್‌ ಅಂದರೆ ಸಾಕು ಪಾತ್ರವೇ ಆಗಿ ಬಿಡುತ್ತಾರೆ.’

ಖ್ಯಾತ ನಿರ್ದೇಶಕರೊಬ್ಬರು ಸಾಯಿ ಪಲ್ಲವಿ ಬಗ್ಗೆ ಆಡಿದ ಮಾತಿದು. ಇಂಥಾ ಸಾಯಿ ಪಲ್ಲವಿ ಬ್ಯೂಟಿಗೆ ಅವರು ತೆಗೆದುಕೊಳ್ಳುವ ಆರೋಗ್ಯಕರ ಆಹಾರವೇ ಕಾರಣವಂತೆ. ಸಾಯಿ ಪಲ್ಲವಿ ನೀಡುವ 5 ಬ್ಯೂಟಿ ಟಿಪ್ಸ್‌ ಇಲ್ಲಿದೆ.

1. ದಿನಾ ಎಕ್ಸರ್‌ಸೈಸ್‌ ಮಾಡೋದು ದೇಹವನ್ನಷ್ಟೇ ನೀಟಾಗಿಡಲ್ಲ, ಮುಖವನ್ನೂ ಅಂದವಾಗಿಡುತ್ತೆ, ದೇಹಕ್ಕೆ ಶಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

Tap to resize

2. ಇಡೀ ದಿನ ನೀರು ಕುಡೀತಿದ್ರೆ ಮುಖ, ದೇಹ ಹೈಡ್ರೇಟ್‌ ಆಗಿ ಫಳ ಫಳ ಹೊಳೀತಿರುತ್ತೆ ಇದರಿಂದ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ

3. ನಾನು ಮೇಕಪ್‌ ಮಾಡಲ್ಲ, ನೀವು ಮಾಡೋದಿದ್ರೆ ನೈಸರ್ಗಿಕ ಉತ್ಪನ್ನಗಳಿಂದ ಮೇಕಪ್‌ ಮಾಡಿದ್ರೆ ಚರ್ಮ ಹಾಳಾಗಲ್ಲ ಎಂದಿದ್ದಾರೆ.

4. ನಾನು ಕೂದಲಿಗೆ ಬಣ್ಣ ಹಚ್ಚಲ್ಲ. ಸ್ನಾನಕ್ಕೆ ಶ್ಯಾಂಪೂ, ಸೋಪು ಬಳಸಲ್ಲ. ಸೀಗೆ ಕಾಯಿ ಪುಡಿಯಂಥಾ ಸಹಜ ಉತ್ಪನ್ನ ಬಳಸುತ್ತೇನೆ. ಇದು ಚರ್ಮವನ್ನು ಡ್ರೈ ಮಾಡಲ್ಲ.

5. ಕೊನೆಯದು ಬಹಳ ಮುಖ್ಯವಾದದ್ದು ಆರೋಗ್ಯಕರ ಆಹಾರ ಸೇವನೆ. ನಮ್ಮ ಮುಖ, ದೇಹವೇ ನಾವೇನನ್ನು ತಿಂತೀವಿ ಅನ್ನೋದನ್ನು ಹೇಳುತ್ತೆ. ಒಳ್ಳೇದನ್ನೆ ತಿನ್ನಿ. ಒಳ್ಳೇದನ್ನೇ ಮಾತಾಡಿ. ಆಗ ಆಂತರ್ಯದಲ್ಲೂ ಬಹಿರಂಗದಲ್ಲೂ ಅಂದವಾಗಿರುತ್ತೀರ.

Latest Videos

click me!