ಈ ಲೇಖನದಲ್ಲಿ ಅನ್ನವನ್ನು ತಿನ್ನೋ ಮೂಲಕ ತೂಕ ಹೆಚ್ಚಿಸೋದು ಹೇಗೆ ಅನ್ನೋದರ ಬಗ್ಗೆ ಮಾಹಿತಿ ನೀಡಲಾಗಿದೆ. ಅನ್ನವನ್ನು ವಿವಿಧ ರೀತಿಯಲ್ಲಿ ತಯಾರಿಸುವ ಕೆಲವು ವಿಧಾನಗಳ ಬಗ್ಗೆ ತಿಳಿಸುತ್ತೇವೆ. ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ. ಆ ಮೂಲಕ ನಿಮ್ಮ ತೆಳ್ಳಗಿನ ಮತ್ತು ದುರ್ಬಲ ದೇಹವನ್ನು ನೀವು ಹೆಚ್ಚು ಸ್ಟ್ರಾಂಗ್ ಆಗುವ ಹಾಗೆ ಮಾಡಬಹುದು. ಆದ್ದರಿಂದ ತೂಕ ಹೆಚ್ಚಿಸಲು ಅನ್ನವನ್ನು ಯಾವ ರೀತಿಯಲ್ಲಿ ತಿನ್ನಬಹುದು ಎಂದು ನೋಡೋಣ?
ತೂಕ ಹೆಚ್ಚಳಕ್ಕಾಗಿ ಅನ್ನ ತಿನ್ನೋದು ಹೇಗೆ?
ಅನ್ನ ತಿನ್ನೋದ್ರಿಂದ ತೂಕ ಹೆಚ್ಚುತ್ತೆ ಅನ್ನೋದು ಗೊತ್ತು. ಆದರೆ ಆರೋಗ್ಯಕರ ತೂಕ ಹೆಚ್ಚಳಕ್ಕಾಗಿ (weight gain) ಅನ್ನವನ್ನು ಸರಿಯಾಗಿ ತಿನ್ನುವುದು ಬಹಳ ಮುಖ್ಯ. ನೀವು ಅನ್ನದೊಂದಿಗೆ ತರಕಾರಿ, ಚೀಸ್ ಅಥವಾ ಬೇಳೆಕಾಳನ್ನು ತಿನ್ನಬಹುದು. ಇದು ನಿಮಗೆ ಕ್ಯಾಲೊರಿಗಳು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಮತ್ತು ಇತರ ಜೀವಸತ್ವಗಳನ್ನು ಸಹ ನೀಡುತ್ತದೆ.
ತೂಕ ಹೆಚ್ಚಳಕ್ಕಾಗಿ ಅನ್ನ ಮತ್ತು ಬೇಳೆ ಸಾರು
ಪ್ರತಿದಿನ ಮಧ್ಯಾಹ್ನದ ಊಟದಲ್ಲಿ ಬೇಳೆ ಮತ್ತು ಅನ್ನವನ್ನು ತಿನ್ನುವುದು ತೂಕ ಹೆಚ್ಚಿಸಲು ಉತ್ತಮ ಮಾರ್ಗ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಅನ್ನ ಮತ್ತು ಬೇಳೆ ಸಾರು ಬೆರೆಸಿ ಸೇವಿಸಬಹುದು. ಇದರಿಂದ ನೀವು ಪ್ರೋಟೀನ್ ಮತ್ತು ಜೀವಸತ್ವ ಸಿಗುತ್ತದೆ. ದಾಲ್ ರೈಸ್ ನಿಯಮಿತವಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ತೂಕ ಹೆಚ್ಚಳಕ್ಕಾಗಿ ಖಿಚಡಿ
ಕಿಚಡಿ ತಿನ್ನುವುದು ತೂಕ ನಷ್ಟಕ್ಕೆ ಕಾರಣವಾಗುವುದಲ್ಲದೆ, ಹೆಚ್ಚಿಸಲು ಸಹ ಕಾರಣವಾಗಬಹುದು. ಕಿಚಡಿ ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಕಿಚಡಿ ತಿಂದ ನಂತರ ನಿಮಗೆ ಹಸಿವಾಗಬಹುದು. ನೀವು ಕಿಚಡಿಗೆ ಹೆಚ್ಚಿನ ಪ್ರಮಾಣದ ಬೇಳೆ ಸೇರಿಸಿ. ತೂಕ ಹೆಚ್ಚಳಕ್ಕಾಗಿ, ನೀವು ರಾಯಿತಾ, ಉಪ್ಪಿನಕಾಯಿ, ತುಪ್ಪ ಮತ್ತು ಸಲಾಡ್ ನೊಂದಿಗೆ ಕಿಚಡಿ ತಿನ್ನಬಹುದು. ನೀವು ಕಿಚಡಿಯನ್ನು ಇಷ್ಟಪಡದಿದ್ದರೆ, ಪಲಾವ್ ಮಾಡಿಯೂ ತಿನ್ನಬಹುದು. ಕಿಚಡಿ ತಿನ್ನುವುದು ಆರೋಗ್ಯಕ್ಕೆ ಒಳಿತು.
ತೂಕ ಹೆಚ್ಚಳಕ್ಕೆ ಬಿರಿಯಾನಿ
ತೂಕ ಹೆಚ್ಚಳಕ್ಕೆ ಬಿರಿಯಾನಿ ಸಹ ಸಹಾಯ ಮಾಡುತ್ತದೆ. ನೀವು ಬಿರಿಯಾನಿಗೆ ಹೆಚ್ಚಿನ ತರಕಾರಿಗಳನ್ನು (vegetables) ಸೇರಿಸಬಹುದು. ನಾನ್-ವೆಜ್ ಬಿರಿಯಾನಿ ತೂಕ ಹೆಚ್ಚಳಕ್ಕೆ ಹೆಚ್ಚು ಪ್ರಯೋಜನಕಾರಿ. ಆದ್ದರಿಂದ ತೂಕವನ್ನು ಹೆಚ್ಚಿಸಲು ನೀವು ಮನೆಯಲ್ಲಿ ತಯಾರಿಸಿದ ಬಿರಿಯಾನಿ ತಿನ್ನಬಹುದು.
ತೂಕ ಹೆಚ್ಚಳಕ್ಕಾಗಿ ಮೀನು ಮತ್ತು ಅನ್ನ
ಮೀನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಹೆಚ್ಚಿಸಲು ಬಯಸಿದರೆ, ನೀವು ಮೀನು ಮತ್ತು ಅನ್ನವನ್ನು ತಿನ್ನಬಹುದು. ಮೀನಿನಲ್ಲಿ ಅಮೈನೋ ಆಮ್ಲ ಇದ್ದು, ಇದು ಕೊಬ್ಬು ಹೆಚ್ಚಾಗಲು ಸಹಾಯ ಮಾಡುತ್ತದೆ. ಸಾಲ್ಮನ್ ಮೀನುಗಳು ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ತೂಕ ಹೆಚ್ಚಳಕ್ಕಾಗಿ ಅನ್ನದ ಖೀರ್
ಅನ್ನದ ಖೀರ್ ತೂಕ ಹೆಚ್ಚಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಅಕ್ಕಿ ಖೀರ್ ತಯಾರಿಸಲು ಸಂಪೂರ್ಣ ಕೊಬ್ಬಿನ ಹಾಲನ್ನು ಬಳಸಿ. ಅಲ್ಲದೆ, ಅದಕ್ಕೆ ಬಾದಾಮಿ, ಒಣದ್ರಾಕ್ಷಿ ಮತ್ತು ಗೋಡಂಬಿ ಇತ್ಯಾದಿಗಳನ್ನು ಸೇರಿಸಿ. ಇವು ಅಕ್ಕಿ ಖೀರ್ ಗೆ ಸಾಕಷ್ಟು ಪೋಷಕಾಂಶಗಳು, ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್ ನೀಡುತ್ತದೆ. ತೂಕವನ್ನು ಹೆಚ್ಚಿಸಲು ನೀವು ವಾರದಲ್ಲಿ 3-4 ದಿನ ಅಕ್ಕಿ ಖೀರ್ ತಿನ್ನಬಹುದು.
ತೂಕ ಹೆಚ್ಚಿಸಲು ದಿನಕ್ಕೆ ಎಷ್ಟು ಅನ್ನ ತಿನ್ನಬೇಕು
ತೂಕ ಹೆಚ್ಚಳಕ್ಕೆ ಅಕ್ಕಿ ಸಹಾಯಕ ಎಂದು ನಮಗೆ ಈಗಾಗಲೇ ತಿಳಿದಿದೆ. ಆದರೆ ತೂಕ ಹೆಚ್ಚಿಸಲು ನೀವು ಎಷ್ಟು ಅಕ್ಕಿಯನ್ನು ತಿನ್ನಬೇಕು? ನೀವು ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಆಹಾರದಲ್ಲಿ 1/3 ಕಪ್ ಅನ್ನ ಸೇರಿಸಬಹುದು. ನೀವು ಬಯಸಿದರೆ ಅದರ ಪ್ರಮಾಣವನ್ನು ಸಹ ಹೆಚ್ಚಿಸಬಹುದು. ಬಿಳಿ ಅಕ್ಕಿಗಿಂತ ಕಂದು ಅಕ್ಕಿ ಹೆಚ್ಚು ಪ್ರಯೋಜನಕಾರಿ.