ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ತರಕಾರಿ ಜ್ಯೂಸ್‌ಗಳು!

First Published Oct 1, 2020, 4:57 PM IST

ತೂಕ ಕಡಿಮೆ ಮಾಡಿಕೊಳ್ಳಲು  ಕ್ರ್ಯಾಶ್ ಡಯಟಿಂಗ್‌ ಅಥವಾ ಅತಿಯಾದ ಕಡಿಮೆ ಕಾರ್ಬ್ ಆಹಾರವನ್ನು ಸೇವಿಸುವುದು ಕಾಮನ್‌ ಆಗಿದೆ. ಆದರೆ ಇದರಿಂದ  ಹಾನಿಯೇ ಹೆಚ್ಚು. ಸ್ಥಿರವಾಗಿ ತೂಕ ಇಳಿಸಿಕೊಳ್ಳಲು ವ್ಯಾಯಾಮ ಹಾಗೂ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಯಾವಾಗಲೂ ಉತ್ತಮ. ಅದಕ್ಕಾಗಿ ತರಕಾರಿ ಜ್ಯೂಸ್‌ಗಳು ಬೆಸ್ಟ್‌. ದೇಹಕ್ಕೆ ಅಗತ್ಯವಾದ ಪೋಷಾಕಂಶಗಳ ಜೊತೆ ವೇಟ್‌ ಲಾಸ್‌ಗೂ ಸಹಾಯ ಮಾಡುತ್ತದೆ.
 

ಕಡಿಮೆ ಕಾರ್ಬೋಹೈಡ್ರೇಟ್ ಆಹಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ನಿರ್ದಿಷ್ಟ ಅಗತ್ಯ ಇರುವ ಜನರಿಗೆ ಇದು ಉಪಯೋಗವಾಗುತ್ತದೆ ಎಂದು ಹೆಚ್ಚಿನ ಸಂಖ್ಯೆಯ ವೈಜ್ಞಾನಿಕ ಸಂಶೋಧನಾ ಅಧ್ಯಯನಗಳು ಹೇಳುತ್ತಿವೆ.
undefined
ಕಡಿಮೆ ಕಾರ್ಬ್ ಆಹಾರವು ತ್ವರಿತ ತೂಕ ಇಳಿಸಿಕೊಳ್ಳಲು ಕಾರಣವಾಗುತ್ತದೆ. ಮಧುಮೇಹ, ಬೊಜ್ಜು, ರಕ್ತದೊತ್ತಡ ಮುಂತಾದ ಕ್ಲಿನಿಕಲ್ ಕಂಡೀಷನ್‌ ಹೊಂದಿರುವ ವ್ಯಕ್ತಿಗಳಿಗೆ ತೂಕ ಇಳಿಸಲು ಸೂಚಿಸಿದಾಗ ಈ ಆಹಾರಗಳು ಸಹಾಯ ಮಾಡುತ್ತವೆ.
undefined
ಕಡಿಮೆ ಎಮ್ಟಿ ಕ್ಯಾಲೊರಿ, ಹೆಚ್ಚಿನ ಲಿಕ್ವಿಡ್‌ ಮತ್ತು ನೆಗೆಟಿವ್‌ ಕ್ಯಾಲೊರಿಗಳನ್ನು ಹೊಂದಿರುವುದರಿಂದ ತರಕಾರಿಗಳು ಬೆಸ್ಟ್‌ ಕಡಿಮೆ ಕಾರ್ಬೋಹೈಡ್ರೇಟ್ ಆಹಾರವಾಗಿದೆ.
undefined
ನೆಗೆಟಿವ್‌ ಕ್ಯಾಲೊರಿ ಎಂದರೆ ತರಕಾರಿಗಳು ಜೀರ್ಣವಾಗುವ ಪ್ರಕ್ರಿಯೆಯಲ್ಲಿ ತರಕಾರಿ ಸ್ವತಃ ದೇಹಕ್ಕೆ ಒದಗಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ. ಇದು ತೂಕ ಕಡಿಮೆಯಾಗಲು ಹೆಲ್ಪ್‌ ಆಗುತ್ತದೆ.
undefined
ದೇಹಕ್ಕೆ ಬೇಕಾಗಿರುವ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವನ್ನು ಪೂರೈಸುವುದರಿಂದ ತರಕಾರಿಗಳು ಲೋ ಕಾರ್ಬ್ ಡಯಟ್‌ನಲ್ಲಿ ಸೇರಿಸಿಕೊಳ್ಳುವುದು ಅಗತ್ಯ.
undefined
ವೇಟ್‌ ಲಾಸ್‌ ಜರ್ನಿಯಲ್ಲಿ ಕಡಿಮೆ ಕಾರ್ಬ್ ಡಯಟ್‌ನಲ್ಲಿ ಸೇರಿಸಬಹುದಾದ ಕೆಲವು ಕಡಿಮೆ ಕ್ಯಾಲೋರಿ ತರಕಾರಿ ಜ್ಯೂಸ್‌ಗಳು ಇಲ್ಲಿವೆ.
undefined
ಕ್ಯಾರೆಟ್ ಆರೆಂಜ್ ಡಿಟಾಕ್ಸ್ ಡ್ರಿಂಕ್: ಬಹುಶಃ ತುಂಬಾ ಕಾಮನ್‌ ಡಿಟಾಕ್ಸ್ ಜ್ಯೂಸ್‌ಗಳಲ್ಲಿ ಒಂದಾಗಿದೆ. ಈ ಕಿತ್ತಳೆ ಮತ್ತು ಕ್ಯಾರೆಟ್‌ನ ರಸ ಬ್ರೇಕ್‌ಫಾಸ್ಟ್‌ಗೆ ಅಥವಾ ವರ್ಕೌಟ್‌ ನಂತರ ಸೇವಿಸುವುದು ಬೆಸ್ಟ್‌ ಹೈಡ್ರೇಷನ್‌ಗೆ ಉತ್ತಮ ಇದು. ಕ್ಯಾರೆಟ್ ಮತ್ತು ಕಿತ್ತಳೆಗಳಲ್ಲಿ ಕ್ರಮವಾಗಿ ವಿಟಮಿನ್ ಎ ಮತ್ತು ಸಿ ಇರುತ್ತವೆ ಹಾಗೂ ಎರಡೂ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ.
undefined
ಬೀಟ್ರೂಟ್ ಶಾಟ್ಸ್‌: ಅತ್ಯಂತ ಪೌಷ್ಟಿಕ ಮತ್ತು ಕಡಿಮೆ ಕ್ಯಾಲೋರಿ ತರಕಾರಿಗಳಲ್ಲಿ ಒಂದು ಬೀಟ್‌ರೂಟ್‌. ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಕ್ರಮದಲ್ಲಿ ಖಡ್ಡಾಯವಾಗಿ ಇರುತ್ತದೆ ಈ ತರಕಾರಿ. ಆಲಿವ್ ಆಯಿಲ್‌, ಬಾಲ್ಸಾಮಿಕ್ ವಿನೆಗರ್ ಮತ್ತು ಉಪ್ಪು ಮತ್ತು ಪೇಪರ್‌ ಜೊತೆ ಎಕ್ಸ್‌ಟ್ರಾ ಫ್ಲೇವರ್‌ಗಾಗಿ ಸ್ಟ್ರಾಬೆರಿಗಳನ್ನು ಸಹ ಆಡ್‌ ಮಾಡಲಾಗುತ್ತದೆ ಈ ರೆಸಿಪಿಗೆ.
undefined
ಸೌತೆಕಾಯಿ ಕಿವಿ ಜ್ಯೂಸ್: ಹೆಚ್ಚಿನ ನೀರಿನ ಅಂಶವಿರುವ ಸೌತೆಕಾಯಿ ಕಡಿಮೆ ಕಾರ್ಬ್ ಡಯಟ್‌ಗೆ ಮಸ್ಟ್‌. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹೊಂದಿರುವ ಕಿವಿ ಹಣ್ಣು ಆರೋಗ್ಯಕರ ದೇಹಕ್ಕೆ ಮುಖ್ಯವಾಗಿದೆ .
undefined
ಟೊಮೆಟೊ ಮತ್ತು ಸೌತೆಕಾಯಿ ರಸ: ಈ ಡಿಟಾಕ್ಸ್‌ ಡ್ರಿಂಕ್‌ ಸಂಜೆ ಸ್ನಾಕ್ಸ್‌ ಸಮಯಕ್ಕೆ ಹೇಳಿ ಮಾಡಿಸಿದ ಪಾನೀಯಾ. ಇದರಲ್ಲಿ ಸೌತೆಕಾಯಿ, ಸ್ವಲ್ಪ ಮೊಸರು ಮತ್ತು ಪುದೀನ ಕೂಡ ಇರುತ್ತದೆ. ಇದಕ್ಕೆ ಬೆಳ್ಳುಳ್ಳಿ ಮತ್ತು ಕಲ್ಲು ಉಪ್ಪು ಹೆಚ್ಚಿನ ರುಚಿ ನೀಡುತ್ತದೆ.
undefined
ಕುಕುಂಬರ್‌ ಶಾಟ್ಸ್‌: ಈ ರುಚಿಕರವಾದ ಡಿಟಾಕ್ಸ್‌ ಡ್ರಿಂಕ್‌ನಲ್ಲಿ ಸೌತೆಕಾಯಿ ಮತ್ತು ಲೆಟಿಸ್ ಜೊತೆ ಬೆಳ್ಳುಳ್ಳಿ, ಪಾರ್ಸ್ಲಿ, ಕೊತ್ತಂಬರಿ ಸೊಪ್ಪು, ಆಲಿವ್ ಅಲೀವ್‌ ಆಯಿಲ್‌ ಹಾಗೂ ಸೀ ಸಾಲ್ಟ್‌ ಒಳಗೊಂಡಿದ್ದು ಡಯಟ್‌ ಅನ್ನು ಇಂಟ್ರೆಸ್ಟಿಂಗ್‌ ಮಾಡುತ್ತದೆ.
undefined
click me!