ಬೇಸಿಗೆಯಲ್ಲಿ ಸೇವಿಸಲೇ ಬೇಕಾದ ಹಣ್ಣಿದು, ತಿಂದ್ರೆ ಎಷ್ಟೊಂದು ಲಾಭ

First Published Mar 6, 2021, 2:23 PM IST

ಸ್ನೇಹಿತರೇ, ಈಗ ಬೇಸಿಗೆ ಕಾಲ ಆರಂಭವಾಗಿದೆ. ಬೇಸಿಗೆಯಲ್ಲಿ ಜನರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ದೇಹವನ್ನು ತಂಪಾಗಿಡಲು ಅನೇಕ ವಸ್ತುಗಳನ್ನು ಬಳಸಲಾಗುತ್ತದೆ. ಆದ್ದರಿಂದ ಇಂದು ಅಂತಹ ಹಣ್ಣಿನ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಬೇಸಿಗೆಯಲ್ಲಿ ಇದರ ಉಪಯೋಗ ಅಪಾರ. ಈ ಹಣ್ಣಿನ ಸೇವನೆ ದೇಹಕ್ಕೆ ತಂಪು ನೀಡುವುದಲ್ಲದೆ, ಶಕ್ತಿಯೂ ತುಂಬುತ್ತದೆ. ಇದರಿಂದ ನೀವು ಆಯಾಸಗೊಳ್ಳುವುದಿಲ್ಲ. ಇಲ್ಲಿ ಹೇಳುತ್ತಿರುವುದು ಕಲ್ಲಂಗಡಿ ಹಣ್ಣಿನ ಬಗ್ಗೆ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಗಳು ಹೇರಳವಾಗಿವೆ:ಕಲ್ಲಂಗಡಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು, ಖನಿಜಗಳು ಮತ್ತು ವಿಟಮಿನ್ ಬಿ, ಸಿ ಮತ್ತು ಡಿ ಗಳು ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಬೇಸಿಗೆಯಲ್ಲಿ ದೇಹಕ್ಕೆ ಇದು ತುಂಬಾ ಅಗತ್ಯ ಎಂದು ಪರಿಗಣಿಸಲಾಗಿದೆ.
undefined
ಕಲ್ಲಂಗಡಿ ಹಣ್ಣಿನ ಬಳಕೆಯಿಂದ ಮನಸ್ಸು ಶಾಂತವಾಗಿ, ದೇಹಕ್ಕೆ ಶಕ್ತಿಯೂ ಸಿಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನಲೇ ಬೇಕೆಂದು ಸಲಹೆ ನೀಡುತ್ತಾರೆ .
undefined
ಕೊಲೆಸ್ಟ್ರಾಲ್ ನಿಯಂತ್ರಣ :ಕಲ್ಲಂಗಡಿ ಹಣ್ಣಿನ ಸೇವನೆಯನ್ನು ನಿಯಮಿತವಾಗಿ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿಲ್ಲ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.
undefined
ಕಲ್ಲಂಗಡಿ ದೇಹದ ಹೈಡ್ರೇಟ್ ಕಾಪಾಡುತ್ತದೆ:ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಇರಬಾರದು. ಏಕೆಂದರೆ ನೀರಿನ ಪ್ರಮಾಣ ಕಡಿಮೆಯಾದ ಕೂಡಲೇ ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ದೇಹವನ್ನು ಹೈಡ್ರೇಟ್ ಆಗಿ ಇಡಲು ಕಲ್ಲಂಗಡಿ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ.
undefined
ಕಲ್ಲಂಗಡಿಯು ಹೊಟ್ಟೆಯನ್ನು ತಂಪಾಗಿಡುತ್ತದೆ ಮತ್ತು ದೇಹವನ್ನು ಪುನಃ ಹೈಡ್ರೇಟ್ ಮಾಡುತ್ತದೆ. ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ.
undefined
ಮಲಬದ್ಧತೆ ಮತ್ತು ಗ್ಯಾಸ್ ಅನ್ನು ನಿವಾರಿಸುತ್ತದೆ :ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಇದು ಪ್ರತಿಯೊಬ್ಬ ಮನುಷ್ಯನನ್ನು ಆತಂಕಕ್ಕೆ ಈಡು ಮಾಡಿದೆ. ಆದರೆ ಕಲ್ಲಂಗಡಿ ಹಣ್ಣಿನ ಸೇವನೆಯು ಗ್ಯಾಸ್ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
undefined
ಕಲ್ಲಂಗಡಿ ಹಣ್ಣನ್ನು ತಿನ್ನುವ ಮೂಲಕ ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ, ಇದು ಜೀರ್ಣಕ್ರಿಯೆಯನ್ನು ಸರಿಯಾಗಿಡುತ್ತದೆ ಮತ್ತು ಮಲಬದ್ಧತೆಯನ್ನು ಉಂಟುಮಾಡುವುದಿಲ್ಲ.
undefined
ರೋಗ ನಿರೋಧಕ ಶಕ್ತಿಯು ಸದೃಢವಾಗಿತ್ತದೆ :ಬೇಸಿಗೆಯಲ್ಲಿ ಫಿಟ್ ಮತ್ತು ಆರೋಗ್ಯವಾಗಿಡಲು ರೋಗನಿರೋಧಕ ಶಕ್ತಿಯನ್ನು ಸದೃಢವಾಗಿಡುವುದು ತುಂಬಾ ಮುಖ್ಯ. ಆದ್ದರಿಂದ ಬೇಸಿಗೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಕಲ್ಲಂಗಡಿ ಉತ್ತಮ ಆಯ್ಕೆಯಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುವ ಕಾರಣ ಇದರ ಬಳಕೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
undefined
ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಶಕ್ತಿ ಬರುತ್ತದೆಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಲ್ಲಿ ಹೊರಬರುವುದರಿಂದ ದೇಹಕ್ಕೆ ಶಕ್ತಿಯ ಕೊರತೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಜನರನ್ನು ಅನಾರೋಗ್ಯಕ್ಕೆ ತುತ್ತಾಗಿಸುತ್ತದೆ. ವಿಟಮಿನ್ ಹೆಚ್ಚಿರುವ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು.
undefined
ಇದು ದೇಹವನ್ನು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಇದರಿಂದ ಆಯಾಸವಾಗುವುದಿಲ್ಲ ಮತ್ತು ಕೆಲಸ ಮಾಡಲು ಸಹ ಸಹಾಯ ಮಾಡುತ್ತದೆ.
undefined
click me!