ಊಟದ ನಂತರ ಬೆಲ್ಲ ತಿನ್ನಬೇಕಾ? ಒಂದ್ವೇಳೆ ತಿಂದರೆ ಏನಾಗುತ್ತೆ?

First Published | Aug 17, 2024, 7:56 PM IST

ಒಂದು ಕಾಲದಲ್ಲಿ ಪೂರ್ವಿಕರು ಊಟ ಮಾಡಿದ ನಂತರ ಬೆಲ್ಲ ತಿನ್ನುತ್ತಿದ್ದರು. ಹೀಗೆ ಊಟದ  ಬಳಿಕ ಬೆಲ್ಲ ತಿನ್ನುವದರಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತಾ?

ತುಂಬಾ ಜನರು ಊಟದ ಬಳಿಕ ಸಿಹಿ ತಿನ್ನಲು ಇಷ್ಟಪಡುತ್ತಾರೆ. ಊಟದ ಬಳಿಕ ಸಿಹಿ ತಿಂದ್ರೆ ತೂಕ ಹೆಚ್ಚಾಗುತ್ತೆ ಎಂದು ಹೇಳುತ್ತಾರೆ. ಇನ್ನು ಕೆಲವರು ಪ್ರತಿ ಅಡುಗೆಯಲ್ಲಿ ಬೆಲ್ಲ ಬಳಕೆ ಮಾಡುತ್ತಾರೆ. ಊಟದ ನಂತರ ಸಣ್ಣದಾದ ಬೆಲ್ಲದ ತುಂಡು ತಿನ್ನವುದು ಆರೋಗ್ಯಕ್ಕೆ ಒಳ್ಳೆಯದು. ಬೆಲ್ಲ ಸೇವನೆಯ ಆರೋಗ್ಯಕರ ಲಾಭಗಳೇನು ಗೊತ್ತಾ?

ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

ಊಟದ ನಂತರ ಬೆಲ್ಲ ತಿನ್ನುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ತೇಜಿತವಾಗುತ್ತವೆ.  ಇದರಿಂದಾಗಿ, ಆಹಾರ ಸುಲಭವಾಗಿ ಬೇಗನೆ ಜೀರ್ಣವಾಗುತ್ತದೆ. ಬೆಲ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
 

Tap to resize

ಬೆಲ್ಲ

ಬೆಲ್ಲದಲ್ಲಿ Anti ಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಸ್‌ಗಳನ್ನು ನಿಯಂತ್ರಿಸುತ್ತದೆ. ಊಟದ ಬಳಿಕ ಬೆಲ್ಲ ಸೇವನೆ ಮಾಡೋದರಿಂದ ಒತ್ತಡ ಕಡಿಮೆಯಾಗುತ್ತದೆ. ಇದರ ಜೊತೆಗೆ ದೀರ್ಘಕಾಲದ ಕಾಯಿಲೆಗಳ ಅಪಾಯಮಟ್ಟವನ್ನು ಬೆಲ್ಲ ಕಡಿಮೆ ಮಾಡುತ್ತದೆ.

ಯಕೃತ್ ಶುದ್ಧೀಕರಣ

ಊಟದ ನಂತರ ಬೆಲ್ಲ ತಿನ್ನುವುದರಿಂದ ದೇಹದಲ್ಲಿನ ಜೀವರಾಸಾಯನಿಕ ಕ್ರಿಯೆ ವೇಗವಾಗಿ,  ಬಲವಾಗಿ ಬದಲಾಗುತ್ತದೆ. ಇದು ತೂಕ ನಿಯಂತ್ರಣವನ್ನು ಸುಲಭಗೊಳಿಸುತ್ತದೆ. ಬೆಲ್ಲದಲ್ಲಿ ನೈಸರ್ಗಿಕವಾದ ನಿರ್ವಿಶೀಕರಣ ಗುಣಗಳಿವೆ. ಇದು ನಮ್ಮ ದೇಹದಲ್ಲಿನ ವಿಷವನ್ನು ತೆಗೆದುಹಾಕಿ ಯಕೃತ್ತನ್ನು ಶುದ್ಧೀಕರಿಸುತ್ತದೆ.
 

ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಬೆಲ್ಲ ಸೇವನೆ ಮಾಡೋದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಏರಿಕೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರು , ಮಕ್ಕಳಿಗೆ ಇದು ಒಳ್ಳೆಯದು. ದೀರ್ಘಕಾಲದ ಮಲಬದ್ಧತೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಯಮಿತವಾಗಿ ಬೆಲ್ಲವನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಯಾಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ, ಇದು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಬೆಲ್ಲದ ಟೀ

ಸಕ್ಕರೆ ಬದಲಾಗಿ ಬೆಲ್ಲದ ಟೀ ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಈ ಹಿಂದೆ ಮನೆಗೆ ಯಾರೇ ಅತಿಥಿಗಳು ಬಂದರೆ ನೀರಿನ ಜೊತೆ ಬೆಲ್ಲ ನೀಡುತ್ತಿದ್ದರು.

Latest Videos

click me!