ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಕುಡಿದ್ರೆ ತೂಕ ಇಳಿಯುತ್ತಂತೆ!

First Published | Jan 9, 2023, 5:34 PM IST

ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಕುಡಿದರೆ, ಅದು ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಇನ್ನು ಅನೇಕ ಪ್ರಯೋಜನಗಳಿವೆ, ತಿಳಿಯಿರಿ.

ಈರುಳ್ಳಿ ಇಲ್ಲದೆ, ಯಾವುದೇ ಅಡುಗೆಯ ರುಚಿಸೋದಿಲ್ಲ. ಇದನ್ನು ದೈನಂದಿನ ಆಹಾರದಲ್ಲಿ ಬಳಸಲಾಗುತ್ತದೆ. ಈರುಳ್ಳಿಯು ರುಚಿಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಆರೋಗ್ಯಕ್ಕೂ ಸಹ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು (onion juice) ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂದು ತಿಳಿಯೋಣ. 
 

ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ಸೋಡಿಯಂ, ಪೊಟ್ಯಾಸಿಯಮ್, ಫೋಲೇಟ್ ಗಳು, ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, ಮೆಗ್ನೀಷಿಯಮ್, ಕಬ್ಬಿಣ ಮತ್ತು ರಂಜಕವಿದೆ. ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ. ಈರುಳ್ಳಿ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿಯೋಣ, 

Tap to resize

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಕುಡಿದರೆ, ಅದು ನಿಮ್ಮ ಕೂದಲಿನ ಆರೋಗ್ಯಕ್ಕೆ (healthy hair) ಒಳ್ಳೆಯದು. ಇದನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗಾಗಿ ನಿಯಮಿತವಾಗಿ ಇದನ್ನು ಕುಡಿಯುವ ಅಭ್ಯಾಸ ಮಾಡಿ.

ಈರುಳ್ಳಿ ರಸ ಕುಡಿಯುವುದರಿಂದ ವೇಗವಾಗಿ ತೂಕ ಕಡಿಮೆಯಾಗುತ್ತದೆ (weight loss). ತಮ್ಮ ಹೆಚ್ಚುತ್ತಿರುವ ತೂಕದ ಬಗ್ಗೆ ತುಂಬಾ ಅಸಮಾಧಾನಗೊಂಡವರು ಖಂಡಿತವಾಗಿಯೂ ಈ ರಸವನ್ನು ಕುಡಿಯಬೇಕು. ನಿಮ್ಮ ತೂಕ ಹೆಚ್ಚಾಗಿದ್ರೆ ನೀವು ಟ್ರೈ ಮಾಡಬಹುದು.

ರಕ್ತದೊತ್ತಡ ರೋಗಿಗಳು ಈರುಳ್ಳಿ ರಸವನ್ನು ಕುಡಿಯಬೇಕು. ಅಧಿಕ ರಕ್ತದೊತ್ತಡದ (high blood pressure) ರೋಗಿಗಳಾಗಿರುವ ಜನರು ಅದರ ರಸವನ್ನು ಕುಡಿಯಬೇಕು. ಇದು ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತದೆ. ನೀವು ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಈರುಳ್ಳಿ  ರಸ ಕುಡಿದು ನೋಡಿ.

ಕ್ವೆರ್ಸೆಟಿನ್, ಆಂಥೋಸಯಾನಿನ್ ಗಳು ಮತ್ತು ಆರ್ಗನೊಸಲ್ಫರ್ ಸೇರಿದಂತೆ ಈರುಳ್ಳಿಯಲ್ಲಿ ಹಲವಾರು ಕ್ಯಾನ್ಸರ್ ನಿರೋಧಕ ಸಂಯುಕ್ತಗಳು ಇವೆ. ಈ ಸಂಯುಕ್ತಗಳು ಹಲವಾರು ರೀತಿಯ ಕ್ಯಾನ್ಸರ್ ಚಿಕಿತ್ಸೆಗೆ (cancer treatment) ಸಹಾಯ ಮಾಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. 

ಜೀರ್ಣಾಂಗ ವ್ಯವಸ್ಥೆಗೆ (digestion system )ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೀಡಾದ ಜನರು,  ಅಂದರೆ ಅಜೀರ್ಣ, ಗ್ಯಾಸ್ ಮೊದಲಾದ ಸಮಸ್ಯೆ ಕಂಡು ಬಂದರೆ ಖಂಡಿತವಾಗಿಯೂ ಅದರ ರಸವನ್ನು ಕುಡಿಯಬೇಕು. ಇದು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಈರುಳ್ಳಿ ಬಲ್ಬ್ ಸಾರ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು (glucose level) ಕಡಿಮೆ ಮಾಡಬಹುದು, ಮತ್ತು ಇದು ಮಧುಮೇಹ ಹೊಂದಿರುವ ಜನರಿಗೆ ಅತ್ಯುತ್ತಮ ಆಹಾರ. ಈರುಳ್ಳಿಯಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ, ಮತ್ತು ಇದು ಮಧುಮೇಹ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. 

ಈರುಳ್ಳಿ ಸೆಲೆನಿಯಂ ಎಂಬ ಪೋಷಕಾಂಶವನ್ನು ಹೊಂದಿರುತ್ತದೆ, ಇದು ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ. ಸೆಲೆನಿಯಂ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಮತ್ತು ಅತಿಯಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿಗ್ರಹಿಸುತ್ತದೆ. ಹಾಗಾಗಿ ಈರುಳ್ಳಿ ಜ್ಯೂಸ್ ಸೇವಿಸುವ ಮೂಲಕ ರೋಗ ಬಾರದಂತೆ ನಿಮ್ಮನ್ನು ನೀವು ರಕ್ಷಿಸಬಹುದು.
 

Latest Videos

click me!