ನೀವು ತೆಳ್ಳಗಿದ್ದೀರಾ? ತೂಕ ಹೆಚ್ಚಿಸಲು ಹಾಲನ್ನು ಈ ರೀತಿ ಕುಡಿಯಿರಿ

First Published | Jan 8, 2023, 5:08 PM IST

ಕೆಲವು ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಲಾಗುತ್ತೆ, ಇದು ದೇಹದ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ. ನೀವು ಸಹ ತೆಳ್ಳಗಿರೋದ್ರಿಂದ ತೊಂದರೆಗೀಡಾಗಿದ್ರೆ, ಈ ರೀತಿಯ ಹಾಲನ್ನು ಕುಡಿಯಲು ಪ್ರಯತ್ನಿಸಬಹುದು. ಇದು ಸುಲಭವಾಗಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ.

ಸ್ಥೂಲಕಾಯದಿಂದ (obesity) ತೊಂದರೆಗೀಡಾದ ಅನೇಕ ಜನರಿದ್ದಾರೆ, ಹಾಗೆಯೇ ದಪ್ಪಗಾಗಲು ಬಯಸುವ ಜನರ ಸಂಖ್ಯೆಯೂ ಕಡಿಮೆಯೇನಿಲ್ಲ . ದೇಹವು ಅಗತ್ಯಕ್ಕಿಂತ ತೆಳ್ಳಗಿದ್ದಾಗ ಮತ್ತು ವೀಕ್ನೆಸ್ ನ ಭಯವಿದ್ದಾಗ ದಪ್ಪಗಾಗುವ ಬಯಕೆ ಜನರಲ್ಲಿ ಬರುತ್ತೆ. ತೂಕ ಹೆಚ್ಚಿಸಲು ಬಯಸುವವರು ತಮ್ಮ ಆಹಾರದಲ್ಲಿ ಹಾಲನ್ನು ಸೇವಿಸಬೇಕು.  ಕೇವಲ ಹಾಲಲ್ಲ, ಹಾಲಿಗೆ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಬಹುದು, ಅದು ತೂಕ ಹೆಚ್ಚಳಕ್ಕೆ (over weight) ಹೆಚ್ಚು ಪರಿಣಾಮಕಾರಿಯಾಗುತ್ತೆ. ಇದು ತ್ವರಿತ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತೆ. 

ಖರ್ಜೂರ (Dates with Milk): ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ಭರಿತ ಖರ್ಜೂರವನ್ನು ತಿನ್ನಲಾಗುತ್ತೆ. ಹಾಲಿನೊಂದಿಗೆ ಖರ್ಜೂರವನ್ನು ಕುಡಿಯೋದರಿಂದ ತೂಕ ಹೆಚ್ಚಾಗಲು ಸಹಾಯ ಮಾಡುತ್ತೆ. ಖರ್ಜೂರವು ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್ ಸಿ  ಸಹ ಹೊಂದಿದೆ.  
 

Tap to resize

ಖರ್ಜೂರದ ಅರೋಗ್ಯ ಪ್ರಯೋಜನದೊಂದಿಗೆ ದಪ್ಪಗಾಗಲು ಖರ್ಜೂರವನ್ನು ಹಾಲಿನಲ್ಲಿ ರಾತ್ರಿ ನೆನೆಸಿ, ಬೆಳಗ್ಗೆ ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಕುದಿಸಿ ನಂತರ  ಒಂದು ಲೋಟಕ್ಕೆ ಹಾಕಿ ಕುಡಿಯಿರಿ.ಸ್ವಲ್ಪ ಸಮಯ ಹೀಗೆ ಮಾಡಿ ನೋಡಿ ನೀವೇ ಅದರ ಮ್ಯಾಜಿಕ್!  

ಬಾಳೆಹಣ್ಣು   (Banana with Milk): ಬಾಳೆಹಣ್ಣು ತೂಕ ನಷ್ಟ ಮತ್ತು ಹೆಚ್ಚಳ ಎರಡರಲ್ಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಹಣ್ಣಾಗಿದೆ. ಒಂದೇ ವ್ಯತ್ಯಾಸವೆಂದರೆ ಅದರ ಪ್ರಮಾಣ. ಒಂದು ದಿನದಲ್ಲಿ ನೀವು ಎಷ್ಟು ಬಾಳೆಹಣ್ಣುಗಳನ್ನು ತಿನ್ನುತ್ತಿದ್ದೀರಿ ಎಂಬುದು ನಿಮ್ಮ ತೂಕದ ಮೇಲೆ ಪರಿಣಾಮ ಬೀರುತ್ತೆ. ಬಾಳೆಹಣ್ಣು ಹೆಚ್ಚಿನ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತವೆ, ಕ್ಯಾಲೋರಿ ಸಹ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಪ್ರತಿದಿನ 2 ಬಾಳೆಹಣ್ಣುಗಳಿಂದ ಮಾಡಿದ ಬಾಳೆಹಣ್ಣಿನ ಶೇಕ್ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತೆ. 

ಒಣದ್ರಾಕ್ಷಿ: ನೀವು ಕ್ಯಾಲೋರಿ ಬರ್ನ್ (calory burn)ಮಾಡೋದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿದ್ರೆ, ಅದು ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತೆ. ಒಣದ್ರಾಕ್ಷಿಗಳ ಬಗ್ಗೆ ಹೇಳೋದಾದ್ರೆ, 100 ಗ್ರಾಂ ಒಣದ್ರಾಕ್ಷಿ 299 ಕ್ಯಾಲೋರಿ ಹೊಂದಿರುತ್ತವೆ, ಇದು ದೈನಂದಿನ ಕ್ಯಾಲೋರಿ ಸೇವನೆಯ ಶೇಕಡಾ 15 ರಷ್ಟಿದೆ.

ಆದ್ದರಿಂದ, ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿದ ನಂತರ, ಈ ಹಾಲಿನ ಸೇವನೆಯು ತೂಕ ಹೆಚ್ಚಳಕ್ಕೆ (weight gain) ಕಾರಣವಾಗಬಹುದು. ಆದರೆ, ಹೆಚ್ಚು ಒಣದ್ರಾಕ್ಷಿ ಸೇವಿಸೋದನ್ನು ತಪ್ಪಿಸಿ ಮತ್ತು ಹಾಲಿಗೆ ಒಣದ್ರಾಕ್ಷಿಯನ್ನು ಸೀಮಿತ ಪ್ರಮಾಣದಲ್ಲಿ ಸೇರಿಸಿ. 

ಅಂಜೂರ  (Anjeer with Milk): ಅಂಜೂರವನ್ನು ಹಾಲಿನೊಂದಿಗೆ ಬೆರೆಸಿ ತಿನ್ನೋದು ಸಹ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅಂಜೂರ ವಿಟಮಿನ್ ಸಿ, ಕೆ, ಎ ಮತ್ತು ಇ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ತಾಮ್ರದ ಉತ್ತಮ ಮೂಲವಾಗಿದೆ. ಹಾಲನ್ನು ಕುದಿಸಿ ಅಂಜೂರವನ್ನು ಹಾಲಿನೊಂದಿಗೆ ಸೇವಿಸಿ ಮತ್ತು ಅದಕ್ಕೆ 2 ರಿಂದ 3 ಅಂಜೂರವನ್ನು ಸೇರಿಸಿ. ಹಾಲನ್ನು ಕುದಿಸಿದ ನಂತರ, ಸ್ವಲ್ಪ ತಣ್ಣಗಾದ ಬಳಿಕ ಕುಡಿಯಿರಿ. 
 

ಬಾದಾಮಿ (Badam Milk): ಬಾದಾಮಿ ಹಾಲನ್ನು ತಯಾರಿಸೋದು ತುಂಬಾ ಸುಲಭ. ಬಾದಾಮಿಯನ್ನು ನೆನೆಸಿಡಿ. ಅದನ್ನು ರುಬ್ಬಿ ಮತ್ತು ಅದಕ್ಕೆ ಹಾಲನ್ನು ಸೇರಿಸಿ. ಕುದಿಸಿದ ಹಾಲನ್ನು ತೆಗೆದುಕೊಳ್ಳುವಾಗ ಹೆಚ್ಚಿನ ಪ್ರಯೋಜನಗಳು ಇರುತ್ತವೆ. ಈ ಹಾಲನ್ನು ತಣ್ಣಗೆ ಕುಡಿಯಬಹುದು. ಬಾದಾಮಿ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಸೂಪರ್ ಫುಡ್ ಆಗಿದ್ದು, ಇದರಿಂದಾಗಿ ಇದು ತೂಕ ಹೆಚ್ಚಳದಲ್ಲಿ ಪರಿಣಾಮಕಾರಿಯಾಗಿದೆ. 

Latest Videos

click me!