ಹಾಗಲಕಾಯಿ ಅಂದಕೂಡಲೇ ಅದರ ಕಹಿಯ ನೆನಪಾಗಿ ಅನೇಕರು ಮುಖ ಹಿಂಡುತ್ತಾರೆ. ಆದರೆ, ಆಯುರ್ವೇದದಲ್ಲಿ 'ರಾಮಬಾಣ' ಎಂದು ಕರೆಸಿಕೊಳ್ಳುವ ಈ ತರಕಾರಿ ಆರೋಗ್ಯದ ಗಣಿಯಾಗಿದೆ. ಹಾಗಲಕಾಯಿಯ ಅದ್ಭುತ ಪ್ರಯೋಜನಗಳು ಮತ್ತು ಅದರ ಕಹಿಯನ್ನು ಹೋಗಲಾಡಿಸುವ 6 ಸರಳ ಸೂತ್ರಗಳು ಇಲ್ಲಿವೆ
ಹಾಗಲಕಾಯಿಯಲ್ಲಿ ಪ್ರೋಟೀನ್, ವಿಟಮಿನ್ ಎ ಮತ್ತು ಸಿ, ಕ್ಯಾಲ್ಸಿಯಂ, ರಂಜಕ ಹಾಗೂ ಕಬ್ಬಿಣಾಂಶಗಳು ಹೇರಳವಾಗಿವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಮೇದೋಜೀರಕ ಗ್ರಂಥಿಯನ್ನು ಉತ್ತೇಜಿಸಿ ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗಲಕಾಯಿಯನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
28
ಅಸ್ತಮಾ ಮತ್ತು ಶ್ವಾಸನಾಳದ ಊತದಂತಹ ತೀವ್ರ ಉಸಿರಾಟದ ತೊಂದರೆ ಇರುವವರು ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಅಲ್ಲದೆ, ಇದರ ರಸ ಸೇವನೆಯಿಂದ ಹೊಟ್ಟೆ ಹುಳುವಿನ ಬಾಧೆಯೂ ನಿವಾರಣೆಯಾಗುತ್ತದೆ.
38
ಹಾಗಲಕಾಯಿಯನ್ನು ಕತ್ತರಿಸಿದ ನಂತರ 30 ರಿಂದ 40 ನಿಮಿಷಗಳ ಕಾಲ ಉಪ್ಪು ನೀರು, ಅರಿಶಿನ ಅಥವಾ ವಿನೆಗರ್ ಮಿಶ್ರಣದಲ್ಲಿ ನೆನೆಸಿಡಿ. ನಂತರ ನೀರನ್ನು ಚೆನ್ನಾಗಿ ಹಿಂಡಿ ತೆಗೆಯುವುದರಿಂದ ಕಹಿ ಅಂಶ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗಲಕಾಯಿಯ ಬೀಜಗಳನ್ನು ತೆಗೆದು, ಬೇಯಿಸುವಾಗ ಬೆಲ್ಲ ಅಥವಾ ಈರುಳ್ಳಿ ಸೇರಿಸಿ ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಂಡರೆ ಕಹಿ ಕಡಿಮೆ ಆಗುತ್ತದೆ.
ಅಡುಗೆ ಮಾಡುವ ಮುನ್ನ ಹೋಳುಗಳನ್ನು 2-3 ಗಂಟೆ ಬಿಸಿಲಿನಲ್ಲಿ ಒಣಗಿಸಿ, ಆ ನಂತರ ಅಡುಗೆಗೆ ಬಳಸಿದರೆ, ಕಹಿ ಇರೋದಿಲ್ಲ.
78
ಕತ್ತರಿಸಿದ ಹಾಗಲಕಾಯಿಗೆ ನಿಂಬೆ ರಸ ಸಿಂಪಡಿಸಿ 20 ನಿಮಿಷ ಬಿಟ್ಟರೆ ಅದರ ಆಮ್ಲೀಯತೆಯು ಕಹಿಯನ್ನು ಹೀರಿಕೊಳ್ಳುತ್ತದೆ. ಹೆಚ್ಚಿನ ಕಹಿ ಉಳಿದುಕೊಳ್ಳೋದಿಲ್ಲ.
88
ಅಡುಗೆ ಮಾಡುವ ಮೊದಲು ಕಹಿ ಹೆಚ್ಚಿಸುವ ಹಾಗಲಕಾಯಿಯ ಬೀಜಗಳನ್ನು ತೆಗೆದುಹಾಕಿ. ಹಾಗಲಕಾಯಿಯ ಕಹಿ ಹೆಚ್ಚಾಗಿ ಬೀಜದಿಂದಲೇ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.