ವೈರಲ್ ಸಮಸ್ಯೆ... ಈ ಆಹಾರ ಕ್ರಮಗಳಿಂದ ಅರೋಗ್ಯ ಉತ್ತಮವಾಗಿರಿಸಿ

Suvarna News   | Asianet News
Published : May 14, 2021, 09:09 AM IST

ಹಾಗೆ ನೋಡಿದರೆ ಇದು ನಿಜವಾಗಿ ಬೇಸಿಗೆ ಕಾಲ. ಆದರೆ ಹವಾಮಾನ ವೈಪರೀತ್ಯ, ಚಂಡಮಾರುತ ಮೊದಲಾದ ಕಾರಣಗಳಿಂದ ಮಳೆಗಾಲ ಸ್ವಲ್ಪ ಬೇಗನೆ ಆರಂಭವಾದಂತೆ ಕಾಣುತ್ತದೆ. ಇನ್ನು ಈ ಮಳೆಗಾಲ ಎಂದ ಕೂಡಲೇ ವೈರಲ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೆಗಡಿ, ಕೆಮ್ಮು, ಜ್ವರ... ಇತ್ಯಾದಿ. ವೈರಲ್‌ ಸಮಸ್ಯೆಯಿಂದ ದೂರ ಇರಬೇಕು ಎಂದಾದರೆ ನೀವು ಈ ಸೂಪರ್‌ ಫುಡ್‌ ಸೇವನೆ ಮಾಡಬೇಕು. ಆ ಏಳು ಆಹಾರಗಳು ವೈರಲ್ ಸಮಸ್ಯೆಗಳಿಂದ ಕಾಪಾಡಲು ನೆರವಾಗುತ್ತದೆ. 

PREV
110
ವೈರಲ್ ಸಮಸ್ಯೆ... ಈ ಆಹಾರ ಕ್ರಮಗಳಿಂದ ಅರೋಗ್ಯ ಉತ್ತಮವಾಗಿರಿಸಿ

ಮಳೆಗಾಲ ಎಂದರೆ ಒಂಥರಾ ಖುಷಿ, ಜೊತೆಗೆ ಅರೋಗ್ಯ ಸಮಸ್ಯೆಗಳು ಸಾಲು ಸಾಲಾಗಿ ಬರುವ ಭಯವೂ ಇರುತ್ತೆ. ಮಳೆಗಾಲದಲ್ಲಿ ಇಮ್ಯೂನ್ ಸಿಸ್ಟಮ್ ಸ್ಟ್ರಾಂಗ್ ಆಗಿರಲು ನೀವು ತಪ್ಪದೇ ಈ ಆಹಾರಗಳನ್ನು ಸೇವಿಸಬೇಕು. ಯಾವುದೆಲ್ಲಾ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ... 
 
210

ಬೆಳ್ಳುಳ್ಳಿ : ಇದರಲ್ಲಿ ಆ್ಯಂಟಿಮೈಕ್ರೋಬಿಯಲ್‌ ಮತ್ತು ಆ್ಯಂಟಿಬ್ಯಾಕ್ಟೀರಿಯಾ ಅಂಶಗಳಿವೆ. ಇದರಿಂದ ಇಮ್ಯೂನಿಟಿ ಬೂಸ್ಟ್‌ ಆಗುತ್ತದೆ. ಅಲ್ಲದೆ ದೇಹ ಆಕ್ಟಿವ್ ಆಗಿರಲು ಸಹಾಯ ಮಾಡುತ್ತದೆ. ಆದುದರಿಂದ ಪ್ರತಿದಿನ ಬೆಳ್ಳುಳ್ಳಿ ಸೇವಿಸಲು ಮರೆಯಬೇಡಿ. 

310

ರಸಂ : ಹುಣಸೆ ಹುಳಿ,ಕರಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಹೀಗೆ ಎಲ್ಲಾ ರೀತಿಯ ಮಸಾಲೆ ಪದಾರ್ಥಗಳನ್ನು ಸೇರಿಸಿದ ರಸಂ ತಯಾರಿಸಿ ಹಾಗೆ ಕುಡಿಯಿರಿ ಅಥವಾ ಊಟದ ಜೊತೆ ಸೇವಿಸಿ, ಇದು ಆರೋಗ್ಯಕ್ಕೆ ಉತ್ತಮವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. 

410

ಹಾಗಲಕಾಯಿ : ಮಳೆಗಾಲದಲ್ಲಿ ಕೆಲವೊಂದು ಕಹಿ ಆಹಾರಗಳು ದೇಹಕ್ಕೆ ಸಿಹಿಯಾಗಿರುತ್ತವೆ. ಹಾಗಲಕಾಯಿ ಅಥವಾ ಕಹಿಬೇವು, ಮೆಂತೆ ಬೀಜ, ತುಳಸಿ, ಅಲೋವೆರಾ, ಬ್ರೊಕೋಲಿ, ವೀಟ್‌ಗ್ರಾಸ್‌ ಸೇವಿಸುವುದರಿಂದ ಇನ್‌ಫೆಕ್ಷನ್‌ ವಿರುದ್ಧ ಹೋರಾಡುತ್ತದೆ.

510

ಸೂಪ್ : ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರಗಳು ದೇಹಕ್ಕೆ ಹಿತ ನೀಡುತ್ತವೆ. ಈ ಸಮಯದಲ್ಲಿ ನೀರಿನ ಅಂಶವನ್ನು ಹೆಚ್ಚು ಸೇವಿಸಿ. ಸೂಪ್‌ ಮಾನ್ಸೂನ್‌ ಸಮಯದಲ್ಲಿ ಸೇವಿಸಲು ಬೆಸ್ಟ್‌. ಕರಿಮೆಣಸಿನ ಪುಡಿ, ಬೆಳ್ಳುಳ್ಳಿ, ಶುಂಠಿ ಹಾಕಿ ಮಾಡಿದ ಸೂಪ್ ಸೇವಿಸಿದರೆ ಶೀತ, ಜ್ವರ ದೇಹದಲ್ಲಿ ನೋವು ದೂರವಾಗುತ್ತದೆ.

610

ಅರಿಶಿನ : ಅರಿಶಿನ ಒಂದು ಪವರ್ ಫುಲ್ ಆಯುರ್ವೇದಿಕ್ ಔಷಧಿ. ಇದನ್ನು ಅನಾದಿ ಕಾಲದಿಂದಲೂ ಸಮಸ್ಯೆ ಪರಿಹಾರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿದಿನ ಹಾಲಿನ ಜೊತೆ ಒಂದು ಚಿಟಿಕೆ ಅರಿಶಿನ ಹಾಕಿ ಸೇವಿಸಿ. ಇದರಿಂದ ಗಂಟಲು ನೋವು, ಕೆಮ್ಮು, ಜ್ವರ ನಿವಾರಣೆಯಾಗುತ್ತದೆ.

710

ಸಿಟ್ರಿಕ್ ಹಣ್ಣುಗಳನ್ನು ಸೇವಿಸಿ: ಹಣ್ಣುಗಳ ಸೇವನೆಯಿಂದ ದೇಹಕ್ಕೆ ಎನರ್ಜಿ ದೊರೆಯುತ್ತದೆ. ವಿಟಾಮಿನ್‌ ಸಿ ಹೆಚ್ಚಾಗಿರುವ ಕಿತ್ತಳೆ, ಮೂಸಂಬಿ, ಆಪಲ್‌, ದಾಳಿಂಬೆ, ಅನಾನಸು, ನಿಂಬೆ ಹಾಗೂ ನೆಲ್ಲಿಕಾಯಿ ಹೆಚ್ಚು ಸೇವನೆ ಮಾಡಿ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ ಇದೆ. ಇವು ಇನ್‌ಫೆಕ್ಷನ್‌ ವಿರುದ್ಧ ಹೋರಾಡಿ ದೇಹಕ್ಕೆ ಶಕ್ತಿ ನೀಡುತ್ತದೆ.

810

ಧಾನ್ಯಗಳು :   ಓಟ್ಸ್‌, ಬ್ರೌನ್‌ ರೈಸ್‌ ಮತ್ತು ಗೋಧಿ ಮೊದಲಾದ ಧಾನ್ಯಗಳನ್ನು ಪ್ರತಿದಿನ ಸೇವಿಸಿ. ಇವು ಇನ್‌ಫೆಕ್ಷನ್‌ ವಿರುದ್ಧ ಹೋರಾಡುತ್ತದೆ.

910

ಶುಂಠಿ : ಹೌದು ಇದು ಮಳೆಗಾಲದಲ್ಲಿ  ಸಹಾಯಕ್ಕೆ ಬರುವಂತಹ ಒಂದು ಮುಖ್ಯ ಔಷಧ. ಕೆಮ್ಮು, ಗಂಟಲು ಕೆರೆತ, ಗಂಟಲು ನೋವು, ಹೀಗೆ ಎಲ್ಲಾ ಸಮಸ್ಯೆ ನಿವಾರಿಸುತ್ತದೆ. 

1010

ಕಷಾಯ : ಮಳೆಗಾಲದಲ್ಲಿ ಅವಾಗವಾಗ ಶುಂಠಿ ಕರಿಮೆಣಸಿನ ಕಷಾಯ, ನೆಲನೆಲ್ಲಿ ಕಷಾಯ, ಅಮೃತ ಬಳ್ಳಿ ಮೊದಲಾದ ಗಿಡ ಮೂಲಿಕೆಗಳ ಕಷಾಯ ಸೇವನೆ ಮುಖ್ಯ. 

click me!

Recommended Stories