ಪ್ರತಿದಿನ ಒಂದು ಆಲೂಗಡ್ಡೆ ಸೇವಿಸುವುದು ಪುರುಷರಿಗೆ ವರದಾನ

First Published Aug 16, 2021, 6:58 PM IST

ಆಲೂಗಡ್ಡೆ ಯಾವುದೇ ತರಕಾರಿಯೊಂದಿಗೆ ಮಿಶ್ರಣ ಮಾಡಬಹುದಾದ ಅಥವಾ ಯಾವುದೇ ರೀತಿಯಲ್ಲಿ ತಿನ್ನಬಹುದಾದ ತರಕಾರಿ. ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೊರೆಯುತ್ತದೆ. ಬಹುಶಃ ಅದಕ್ಕಾಗಿಯೇ ಅದನ್ನು ಇತರ ತರಕಾರಿಗಳೊಂದಿಗೆ ಬೇಗ ಹೊಂದಿಕೊಳ್ಳುತ್ತದೆ. ವೃದ್ಧರು, ಮಕ್ಕಳು, ಮಹಿಳೆಯರ ಜೊತೆಗೆ ಪುರುಷರು ಪ್ರತಿದಿನ ಒಂದು ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೇಯದು.
 

ಮಧ್ಯಮ ಗಾತ್ರದ ಆಲೂಗಡ್ಡೆಯಲ್ಲಿ ಇರುವ ಪೌಷ್ಟಿಕಾಂಶ
ಪ್ರತಿದಿನ 1 ಮಧ್ಯಮ ಗಾತ್ರದ ಆಲೂಗಡ್ಡೆಯನ್ನು ಸೇವಿಸಿದರೆ,  ಸಾಕಷ್ಟು ಪ್ರೋಟೀನ್, ಕಾರ್ಬ್ಸ್, ಫೈಬರ್, ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಸಿಯಮ್, ಮೆಗ್ನೀಸಿಯಮ್, ನಿಯಾಸಿನ್, ಫೋಲೇಟ್ ಇತ್ಯಾದಿಗಳು ಸಿಗುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಪ್ರತಿಯೊಂದು ಪೋಷಕಾಂಶವನ್ನು ಪಡೆಯುವುದು ಮುಖ್ಯ.

ಪುರುಷರಿಗೆ ಪ್ರತಿದಿನ 1 ಆಲೂಗಡ್ಡೆ ಸೇವನೆ ಎಷ್ಟು ಪ್ರಯೋಜನಕಾರಿ? 
ಅನೇಕ ಸಂಶೋಧನೆಗಳ ಪ್ರಕಾರ, ಮಹಿಳೆಯರಿಗಿಂತ ಪುರುಷರು ಅಧಿಕ ರಕ್ತದೊತ್ತಡದ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಅಧಿಕ ರಕ್ತದೊತ್ತಡವು ದೀರ್ಘಾವಧಿಯಲ್ಲಿ ಪ್ರಮುಖ ಹೃದ್ರೋಗಗಳಿಗೆ ಕಾರಣವಾಗಬಹುದು. 

ಪುರುಷರು ಪ್ರತಿದಿನ 1 ಆಲೂಗಡ್ಡೆ ಸೇವಿಸಿದರೆ, ಅವರಿಗೆ ಸಾಕಷ್ಟು ಪೊಟ್ಯಾಸಿಯಮ್ ಸಿಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ದೇಹದಲ್ಲಿ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು ಪೊಟ್ಯಾಸಿಯಮ್ ಸೇವನೆಯು ತುಂಬಾ ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಜೊತೆಗೆ ಆಲೂಗಡ್ಡೆಯಲ್ಲಿರುವ ಕ್ಲೋರೋಜೆನಿಕ್ ಆಮ್ಲ ಮತ್ತು ಕುಕೊಅಮೈನ್ ಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಆಲೂಗಡ್ಡೆ ಮಧುಮೇಹದಲ್ಲಿಯೂ ಪ್ರಯೋಜನಕಾರಿ
ಆಲೂಗಡ್ಡೆಯಲ್ಲಿ ಒಂದು ನಿರ್ದಿಷ್ಟ ರೀತಿಯ ನಿರೋಧಕ ಪಿಷ್ಟವಿದೆ. ಪ್ರತಿರೋಧಕ ಪಿಷ್ಟದ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕ ಶಕ್ತಿ ಕಡಿಮೆಯಾಗಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗಲು ನೆರವಾಗುತ್ತದೆ.

ಆಲೂಗಡ್ಡೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಆಲೂಗಡ್ಡೆಯಲ್ಲಿರುವ ನಿರೋಧಕ ಪಿಷ್ಟವು ಒಡೆಯದೆ ಹೊಟ್ಟೆಯ ದೊಡ್ಡ ಕರುಳನ್ನು ತಲುಪುತ್ತದೆ ಮತ್ತು ಹೊಟ್ಟೆಯಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಆಹಾರವನ್ನು ರೂಪಿಸುತ್ತದೆ. ಇದರಿಂದ  ಹೊಟ್ಟೆಯ ಆರೋಗ್ಯ ಉತ್ತಮವಾಗುವುದು ಮತ್ತು ಜೀರ್ಣಕ್ರಿಯೆ ಉತ್ತಮವಾಗುವುದು.
 

ಆಲೂಗಡ್ಡೆ ಈ ಅರ್ಥದಲ್ಲಿ ಪುರುಷರಿಗೆ ಪ್ರಯೋಜನಕಾರಿ
ಹೆಚ್ಚಿನ ಪುರುಷರು ಕಚೇರಿ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಮನೆಯ ಹೊರಗೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಅಂತವರು ಆಲೂಗಡ್ಡೆಯನ್ನು ಸೇವಿಸಿದರೆ, ಹೊರಗೆ ಕಡಿಮೆ ಹಸಿವನ್ನು ಅನುಭವಿಸುತ್ತಾನೆ ಮತ್ತು ಅನಾರೋಗ್ಯಕರ ಆಹಾರವನ್ನು ತಿನ್ನುವ ಸಾಧ್ಯತೆ ಕಡಿಮೆ. 
 

ಆಲೂಗಡ್ಡೆ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸುತ್ತದೆ ಮತ್ತು ಪ್ರೋಟೀನ್ ಅನ್ನು ಸಹ ಒದಗಿಸುತ್ತದೆ. ಇದನ್ನು ಪ್ರತಿದಿನ ಸೇವಿಸಿದರೂ ಆರೋಗ್ಯಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲ. 

click me!