ಮಧ್ಯಾಹ್ನ ಸರಿಯಾದ ಟೈಂಗೆ ಊಟ ಮಾಡ್ತೀರಲ್ವಾ ?

First Published Aug 15, 2021, 11:31 AM IST

ದೈಹಿಕ ಶಕ್ತಿಗಾಗಿ ಸರಿಯಾಗಿ ತಿನ್ನುವುದು ಬಹಳ ಮುಖ್ಯ. ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಅಥವಾ ತಪ್ಪು ಸಮಯದಲ್ಲಿ ತಿಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ಮತ್ತು ಶಕ್ತಿಯ ಅಗತ್ಯವಿದೆ. ಈ ಲೇಖನದಲ್ಲಿ ಮಧ್ಯಾಹ್ನದ ಊಟವನ್ನು ತಿನ್ನಲು ಸರಿಯಾದ ಸಮಯ ತಿಳಿಯಿರಿ 

ಮಧ್ಯಾಹ್ನ ಯಾವ ಸಮಯದಲ್ಲಿ ತಿನ್ನಬೇಕು?: ಆಹಾರ ಮತ್ತು ಪೌಷ್ಟಿಕಾಂಶದ ಬಗ್ಗೆ ಅನೇಕ ಭಾರತೀಯ ಸೆಲೆಬ್ರಿಟಿಗಳಿಗೆ ಸಲಹೆ ನೀಡಿದ ಪೌಷ್ಟಿಕತಜ್ಞರು ಉತ್ತಮ ಊಟದ ಸಮಯ ಮಧ್ಯಾಹ್ನ 11 ರಿಂದ 1 ರವರೆಗೆ ಎಂದು ಹೇಳುತ್ತಾರೆ. ಈ ಅವಧಿಯ ಮಧ್ಯದಲ್ಲಿ ತಿನ್ನಬೇಕು.

ಸರಿಯಾದ ಸಮಯದಲ್ಲಿ ಊಟ ಮಾಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?
ಯಾವುದೇ ಕಾರಣಕ್ಕಾಗಿ  ಮಧ್ಯಾಹ್ನ 11 ರಿಂದ 1 ರ ನಡುವೆ ಊಟ ಮಾಡಲು ಸಾಧ್ಯವಾಗದಿದ್ದರೆ, ಈ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ನಂತರ  ಸಮಯ ಸಿಕ್ಕಾಗ ಊಟ ಮಾಡಿ. 

ಮದ್ಯಾಹ್ನ ಊಟ ಇಲ್ಲದೇ ಇದ್ದರೆ, ಬೇರೆ ಪೌಷ್ಟಿಕಾಂಶಗಳನ್ನು ಸೇವಿಸುವಂತಹ ಉತ್ತಮ ಅಭ್ಯಾಸ ಅಳವಡಿಸಿಕೊಳ್ಳುವುದರಿಂದ ಆಮ್ಲೀಯತೆ ಮತ್ತು ತಲೆನೋವು ಬರುವುದಿಲ್ಲ.

ಮಧ್ಯಾಹ್ನದ ಊಟ ವನ್ನು ತಿನ್ನುವುದ ಆರೋಗ್ಯ ಪ್ರಯೋಜನಗಳು: ದಿನಕ್ಕೆ ಮೂರು ಊಟ ಬಹಳ ಮುಖ್ಯ. ಮಧ್ಯಾಹ್ನದ ಊಟದಲ್ಲಿ  ಕ್ಯಾಲೊರಿಗಳು, ಪ್ರೋಟೀನ್ ಗಳು, ಕಾರ್ಬ್ಸ್, ಫೈಬರ್, ಕೊಬ್ಬುಗಳು, ವಿಟಮಿನ್ ಗಳು ಇತ್ಯಾದಿಗಳ ಬಗ್ಗೆ ಕಾಳಜಿ ವಹಿಸಬೇಕು. 

ಸಮಯಕ್ಕೆ ಸರಿಯಾಗಿ ಊಟ ಮಾಡುವುದರಿಂದ  ಕಳೆದುಹೋದ  ಶಕ್ತಿಯನ್ನು ಮರಳಿ ತರುತ್ತದೆ.

ಸಮತೋಲಿತ ಊಟವನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ ಮತ್ತು ಮೆಮೊರಿ ಶಕ್ತಿ ಹೆಚ್ಚಿಸುತ್ತದೆ.

ಸರಿಯಾದ ಮಧ್ಯಂತರದಲ್ಲಿ ಆಹಾರವನ್ನು ತಿನ್ನುವುದು  ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿರಿಸುತ್ತದೆ.

ಮಧ್ಯಾಹ್ನದ ಊಟದಲ್ಲಿ ಸೇರಿಸಿದ ಪೋಷಕಾಂಶಗಳ ಸಹಾಯದಿಂದ ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ತಡೆಗಟ್ಟಬಹುದು.

click me!