ಈ ಆಹಾರಗಳನ್ನು ಸೇವಿಸಿ ಬಿಳಿ ಕೂದಲು ಸಮಸ್ಯೆ ನಿವಾರಿಸಿ

First Published Jun 9, 2022, 6:53 PM IST

ಕೂದಲು ಬಿಳಿಯಾಗುವುದು (white hair) ಸಾಮಾನ್ಯ ಸಮಸ್ಯೆಯಾಗುತ್ತಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲು ಕಪ್ಪಾಗಿಸಲು ನೀವು ಏನೇನೋ ಕಸರತ್ತುಗಳನ್ನು ಮಾಡಿರಬಹುದು, ಆದರೂ ಅದು ವರ್ಕ್ ಔಟ್ ಆಗದೇ ಬೇಜಾರಾಗಿದ್ಯಾ? ಹಾಗಿದ್ರೆ ಇಲ್ಲಿದೆ ನೋಡಿ ನಿಮಗಾಗಿ ಅದ್ಭುತ ಟಿಪ್ಸ್ ಗಳು. 

ನಿಮ್ಮ ಕೂದಲನ್ನು ಕಪ್ಪಾಗಿಸುವ ಕೆಲವು ಸಲಹೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ವಾಸ್ತವವಾಗಿ, ಕೂದಲು ಬಿಳಿಯಾಗೋದು ಕೆಲವು ಪೋಷಕಾಂಶಗಳ ಕೊರತೆಯಿಂದಾಗಿ ಉಂಟಾಗುತ್ತೆ. ಆದ್ದರಿಂದ ನಿಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಲು ನೀವು ತಿನ್ನಬಹುದಾದ ಆಹಾರಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತೇವೆ. ಇದರಿಂದ ನೀವು ಸುಂದರವಾದ ಕಪ್ಪು ಕೂದಲನ್ನು ಪಡೆಯಬಹುದು. 

ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಕೆಲವು ಪೋಷಕಾಂಶಗಳನ್ನು ಸೇರಿಸೋದು ಮುಖ್ಯ. ಇದರಿಂದ ನಿಮ್ಮ ಕೂದಲು ಬೆಳ್ಳಗಾಗುವುದಿಲ್ಲ,  ಅನೇಕ ಬಾರಿ ನಿಮ್ಮ ದೇಹವು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುವುದಿಲ್ಲ, ಇದರಿಂದಾಗಿ ಕೂದಲು ಸಮಯಕ್ಕಿಂತ ಮುಂಚಿತವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಕೂದಲನ್ನು ಕಪ್ಪಾಗಿಸಬೇಕು.
 

ಆಹಾರದಲ್ಲಿ ಮೊಟ್ಟೆ ಸೇರಿಸಿ
ಮೊಟ್ಟೆ (egg) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಕೂದಲನ್ನು ಸುಧಾರಿಸಲು ಮತ್ತು ಬಿಳಿ ಕೂದಲನ್ನು ತೊಡೆದುಹಾಕಲು, ನೀವು ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಬೇಕು. ಇದು ಆರೋಗ್ಯಕ್ಕೂ ಉತ್ತಮ.

ಮೊಸರನ್ನು ತಿನ್ನೋದ್ರಿಂದ ಕೂದಲು ಬಿಳಿಯಾಗೋದಿಲ್ಲ
ಮೊಸರು (curd) ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ಅನ್ನು ಹೊಂದಿದೆ, ಇದು ಕೂದಲನ್ನು ಕಪ್ಪಾಗಿಡಲು ಸಹಾಯ ಮಾಡುತ್ತೆ. ನೀವು ಬಯಸಿದರೆ, ಬೇಸಿಗೆಯ ದಿನಗಳಲ್ಲಿ ಲಸ್ಸಿ ತಯಾರಿಸುವ ಮೂಲಕವೂ ಹೆಚ್ಚಿನ ಪೋಷನೆಯನ್ನು ಪಡೆಯಬಹುದು. 

ಆಹಾರದಲ್ಲಿ ಮೆಂತ್ಯ ಸೇರಿಸಿ
ಮೆಂತ್ಯ (fenugreek) ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿ ಕಬ್ಬಿಣ ಮತ್ತು ನಾರಿನಂಶ ಅಧಿಕವಾಗಿದೆ, ಇದು ಕೂದಲಿನಲ್ಲಿ ಮೆಲನಿನ್ ಎಂಬ ಅಂಶವನ್ನು ಹೆಚ್ಚಿಸುತ್ತದೆ. ಮೆಲನಿನ್ ಕೊರತೆಯಿಂದಾಗಿ, ಕೂದಲು ಬೇಗನೆ ಬಿಳಿಯಾಗಲು ಪ್ರಾರಂಭಿಸುತ್ತದೆ. ಹಾಗಾಗಿ, ನೀವು ಮೆಲನಿನ್ ಹೊಂದಿರುವ ವಸ್ತುಗಳನ್ನು ಸೇವಿಸಬೇಕು. 

ಹಸಿರು ತರಕಾರಿಗಳನ್ನು ಸೇವಿಸಿ 
ಇದಲ್ಲದೆ, ಹಸಿರು ತರಕಾರಿಗಳನ್ನು (green vegetables) ಸಹ ಮಿಸ್ ಮಾಡದೇ ನಿಮ್ಮ ಆಹಾರದಲ್ಲಿ ಸೇರಿಸಬೇಕು. ಹಸಿರು ತರಕಾರಿಗಳು ವಿಟಮಿನ್ ಬಿ 6, ವಿಟಮಿನ್ ಬಿ 12 ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತೆ. 

click me!