ಪಾರ್ಶ್ವವಾಯು: ನರ ಸಮಸ್ಯೆ ತಪ್ಪಿಸಲು ಸೇವಿಸಿ ಈ ಆಹಾರ

First Published | Oct 30, 2020, 4:16 PM IST

ನಮ್ಮ ಆರೋಗ್ಯ ಚೆನ್ನಾಗಿರಲು ನರಮಂಡಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ನಿಮ್ಮ ನರಮಂಡಲದ ಆರೋಗ್ಯವನ್ನು ಹೆಚ್ಚಿಸಲು ನೀವು ಬಯಸಿದರೆ ಆಂಟಿಆಕ್ಸಿಡೆಂಟ್ಗಳು, ಜೀವಸತ್ವಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಅಗತ್ಯ ಖನಿಜಗಳನ್ನು ಒಳಗೊಂಡಿರುವ ಆಹಾರವು ಉತ್ತಮ ಆಯ್ಕೆಯಾಗಿದೆ.

ದೇಹದಲ್ಲಿ ಕೇಂದ್ರ ನರಮಂಡಲ( ಸೆಂಟ್ರಲ್ ನರ್ವಸ್ ಸಿಸ್ಟಮ್ ) ಬಹು ಮುಖ್ಯವಾಗಿದೆ ಏಕೆಂದರೆ ಇದು ದೇಹ ಮತ್ತು ಮನಸ್ಸಿನ ಹೆಚ್ಚಿನ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಆದ್ದರಿಂದ, ನಿಮ್ಮ ನರಮಂಡಲವು ಆರೋಗ್ಯಕರ ಮತ್ತು ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಇದನ್ನು ಮಾಡುವ ಒಂದು ಮಾರ್ಗ ನೀವು ತಿನ್ನುವ ಆಹಾರದಲ್ಲಿ ಸರಿಯಾದ ಆಯ್ಕೆ.
undefined
ನರಮಂಡಲಕ್ಕೆ ಉತ್ತಮವಾದ ಅನೇಕ ಆಹಾರಗಳಿವೆ. ಇವುಗಳು ಸುಲಭವಾಗಿ ಲಭ್ಯವಿವೆ ಮತ್ತು ಇದಕ್ಕಾಗಿ ನೀವು ಕೆಲವು ಆಹಾರ ಮಳಿಗೆಗಳಲ್ಲಿ ಯಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಅಂಟಿ ಒಕ್ಸಿಡಂಟ್, ಜೀವಸತ್ವಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಅಗತ್ಯ ಖನಿಜಗಳನ್ನು ಒಳಗೊಂಡಿರುವ ಆಹಾರ ಇಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ನಮ್ಮನ್ನು ಕ್ಷೀಣಗೊಳಿಸುವ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
undefined

Latest Videos


ಅಂತಹ ಉತ್ತಮ ಆರೋಗ್ಯಕರ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವ ಮೂಲಕ, ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಪೋಷಿಸಿ ಮತ್ತು ಒಟ್ಟಾರೆ ಆರೋಗ್ಯ ಮತ್ತು ಫಿಟ್ನೆಸ್ ಹೆಚ್ಚಿಸಿ. ನಿಮ್ಮ ನರಮಂಡಲದ ಆರೋಗ್ಯಕ್ಕೆ ಉತ್ತೇಜನ ನೀಡಲು ನಿಮ್ಮ ದೈನಂದಿನ ಆಹಾರಕ್ರಮಕ್ಕೆ ಸೇರಿಸಬಹುದಾದ ಆಹಾರಗಳು ಇಲ್ಲಿವೆ.
undefined
ಆವಕಾಡೊಗಳು: ಇವುಗಳಲ್ಲಿ ಫೋಲೇಟ್ ಮತ್ತು ವಿಟಮಿನ್ ಕೆ ತುಂಬಿರುತ್ತವೆ, ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮೆಮೊರಿ ಹೆಚ್ಚಿಸಲು ತುಂಬಾನೇ ಸಹಕಾರಿ.
undefined
ಬ್ರೊಕೊಲಿ: ಈ ತರಕಾರಿಯ ಹೆಚ್ಚಿನ ವಿಟಮಿನ್ ಕೆ ಮತ್ತು ಕೋಲೀನ್ ಮಟ್ಟದಿಂದಾಗಿ ನರಮಂಡಲಕ್ಕೆ ಒಳ್ಳೆಯದು. ಇದು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸುತ್ತದೆ. ಮತ್ತು ಆರೋಗ್ಯಕ್ಕೂ ಉತ್ತಮ ಆಹಾರ ಇದಾಗಿದೆ.
undefined
ಬೀಜಗಳು: ಮೆಗ್ನೀಸಿಯಮ್ ಸಮೃದ್ಧವಾಗಿರುವ ಬಾದಾಮಿ, ಗೋಡಂಬಿ, ಹ್ಯಾಜಲನೇಟ್ ಮತ್ತು ವಾಲ್ನೆಟ್ಸ್ ಅನ್ನು ಹೆಚ್ಚು ಸೇವಿಸಿರಿ . ಬ್ರೆಜಿಲ್ ಬೀಜಗಳು ಸೆಲೆನಿಯಂನಿಂದ ತುಂಬಿರುತ್ತವೆ. ಈ ಪೋಷಕಾಂಶಗಳು ನರಮಂಡಲವನ್ನು ಶಾಂತಗೊಳಿಸುತ್ತವೆ.
undefined
ಓಟ್ ಮೀಲ್: ಪ್ರತಿದಿನ ಒಂದು ಬೌಲ್ ಓಟ್ ಮೀಲ್ ತಪ್ಪದೆ ಸೇವಿಸಿದರೆ ಕೇಂದ್ರ ನರಮಂಡಲವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.
undefined
ಗ್ರೀನ್ ಟೀ : ಹಸಿರು ಚಹಾದಲ್ಲಿರುವ ಅಂಟಿ ಒಕ್ಸಿಡಂಟ್ ಗುಣವು ನರಮಂಡಲಕ್ಕೆ ಒಳ್ಳೆಯದು. ಇದು ಮೆದುಳಿನಲ್ಲಿ ಒತ್ತಡ-ಸಂಬಂಧಿತಸಮಸ್ಯೆ, ಅಷ್ಟೇ ಯಾಕೆ ವಯಸ್ಸಾಗುವಿಕೆಯನ್ನು ತಡೆಯುವ ಕ್ಯಾಟೆಚಿನ್ಸ್ ಎಂಬ ಅಂಟಿ ಒಕ್ಸಿಡಂಟ್ ಹೊಂದಿದೆ.
undefined
ನರಮಂಡಲದ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗಳು :ರಕ್ತ ಪೂರೈಕೆಯ ತೊಂದರೆಗಳು (ನಾಡೀಯ ಅಸ್ವಸ್ಥತೆಗಳು).ಗಾಯಗಳು (ಆಘಾತ), ವಿಶೇಷವಾಗಿ ತಲೆ ಮತ್ತು ಬೆನ್ನುಹುರಿಗೆ ಗಾಯಗಳು.ಜನನದ ಸಮಯದಲ್ಲಿ ಕಂಡುಬರುವ ತೊಂದರೆಗಳು
undefined
ಆತಂಕದ ಕಾಯಿಲೆಗಳು, ಖಿನ್ನತೆ ಅಥವಾ ಸೈಕೋಸಿಸ್ನಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು.ಇಂಗಾಲದ ಮಾನಾಕ್ಸೈಡ್, ಆರ್ಸೆನಿಕ್ ಅಥವಾ ಸೀಸದಂತಹ ಜೀವಾಣುಗಳಿಗೆ ಒಡ್ಡಿಕೊಳ್ಳುವುದು.ದೇಹದ ಅಂಗಾಂಗಗಳಲ್ಲಿ ದೌರ್ಬಲ್ಯ, ಪಾರ್ಶ್ವವಾಯು ಸಮಸ್ಯೆ
undefined
click me!