ಮಲಬದ್ಧತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹಗಲಿನಲ್ಲಿ ನರಳುವಂತೆ ಮಾಡುತ್ತೆ ಮತ್ತು ರಾತ್ರಿ ನಿದ್ರೆ ಮಾಡದಂತೆ ಮಾಡುತ್ತೆ. ನಿಮಗೂ ಈ ಸಮಸ್ಯೆ ಕಾಡಿದೆಯೇ? ಯಾವ ಔಷಧಿಯನ್ನು ಸೇವಿಸೋ ಮೂಲಕ ಸಮಸ್ಯೆ ನಿವಾರಿಸಬಹುದು ಎಂದು ನೀವು ಯೋಚನೆ ಮಾಡ್ತಾ ಇದ್ದೀರಾ? ಔಷಧಿ ಬಿಡಿ, ಜ್ಯೂಸ್ (Juice) ಕುಡಿಯುವ ಮೂಲಕ ಮಲಬದ್ಧತೆಯಿಂದ ಪರಿಹಾರ ಪಡೆಯಬಹುದು ಅನ್ನೋದನ್ನ ತಿಳಿಯಿರಿ. ಹೌದು ಮಲಬದ್ಧತೆಯಿಂದ ಬಳಲುತ್ತಿರುವ ಜನರು 5 ಜ್ಯೂಸ್ ಕುಡಿಯಬಹುದು. ಈ ಹಣ್ಣುಗಳ ಜ್ಯೂಸ್ ಸೇವಿಸಿದ್ರೆ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡೋದರ ಜೊತೆಗೆ, ಉತ್ತಮ ಆರೋಗ್ಯವೂ ನಿಮ್ಮದಾಗುತ್ತೆ.
ಮಲಬದ್ಧತೆಯು ಹೊಟ್ಟೆಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದರಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಮಲಬದ್ಧತೆ ಸಮಸ್ಯೆಯಿಂದಾಗಿ ಜೀರ್ಣಕ್ರಿಯೆಯಲ್ಲಿ (digestion) ತೊಂದರೆ ಕಾಣಿಸಿಕೊಳ್ಳುತ್ತೆ, ಇದು ನೇರವಾಗಿ ಕರುಳಿನ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಗಂಟೆ ಗಟ್ಟಲೆ ಟಾಯ್ಲೆಟ್ (Toilet) ನಲ್ಲಿ ಕುಳಿತುಕೊಂಡರೂ ಹೊಟ್ಟೆ ಕ್ಲೀನ್ ಆಗೋದಿಲ್ಲ.
27
ಮಲಬದ್ಧತೆ ಸಮಸ್ಯೆ ಉಂಟಾದ್ರೆ ಹೆಚ್ಚಾಗಿ ಜನರು ಬೇರೆ ಬೇರೆ ರೀತಿಯ ಮನೆಮದ್ದುಗಳನ್ನು ಟ್ರೈ ಮಾಡುತ್ತಾರೆ ಮತ್ತು ಕೆಲವು ಆಹಾರ ಸೇವನೆ ಮಾಡುವಂತೆ ಸೂಚಿಸಲಾಗುತ್ತೆ. ಇದು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಹೌದು, ಆದ್ರೆ ಯಾವಾಗಲೂ ಔಷಧಿ ಸೇವಿಸೋದ್ರಿಂದ ಅಯ್ಯೋ ಅನಿಸಿ ಬಿಡುತ್ತೆ ಅಲ್ವಾ? ಮಲಬದ್ಧತೆ (constipation) ನಿವಾರಿಸುವ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವ 5 ರೀತಿಯ ಜ್ಯೂಸ್ ಗಳಿವೆ. ಅವುಗಳನ್ನು ಕುಡಿದ ನಂತರ, ನೀವು ಮಲಬದ್ಧತೆ ಸಮಸ್ಯೆಗಳನ್ನು ನಿವಾರಿಸಬಹುದು.
37
ಮಲಬದ್ಧತೆಯನ್ನು ನಿವಾರಿಸುವ ಐದು ಜ್ಯೂಸ್ ಗಳು ಇಲ್ಲಿವೆ…
ಕಲ್ಲಂಗಡಿ ಹಣ್ಣಿನ ಜ್ಯೂಸ್
ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಕಲ್ಲಂಗಡಿ ಹಣ್ಣಿನ ಜ್ಯೂಸ್ (watermelon juice) ಕುಡಿಯೋದು ಬೆಸ್ಟ್ ಅಂತಾರೆ ತಜ್ಞರು. ವಿಶೇಷವಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದು ಮತ್ತು ಕಲ್ಲಂಗಡಿ ಜ್ಯೂಸ್ (Water Melon) ಕುಡಿಯುವುದು ಒಳ್ಳೆಯದು. ಇದು ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ, ಇದು ದೇಹವನ್ನು ಹೈಡ್ರೇಟ್ (Hydrate) ಆಗಿರಲು ಸಹಾಯ ಮಾಡುತ್ತೆ. ಅಲ್ಲದೆ, ಇದು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
47
ಮೂಸಂಬಿ ಜ್ಯೂಸ್
ಬೆಳಿಗ್ಗೆ ಮೂಸಂಬಿ ಜ್ಯೂಸ್ ಕುಡಿಯುವುದು ಮಲಬದ್ಧತೆಗೆ ಉತ್ತಮ ಚಿಕಿತ್ಸೆ. ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ, ಜೊತೆಗೆ ತಕ್ಷಣ ಪರಿಹಾರ ನೀಡುತ್ತದೆ. ಈ ಜ್ಯೂಸ್ ನೊಂದಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಕುಡಿಯುವುದು ಒಳ್ಳೆಯದು.
57
ಸೇಬಿನ ಜ್ಯೂಸ್
ಮಲಬದ್ಧತೆಯ ವಿರುದ್ಧ ಹೋರಾಡುವಲ್ಲಿ ಸೇಬಿನ ಜ್ಯೂಸ್ (apple juice) ಉತ್ತಮ ಪರಿಣಾಮ ಬೀರುತ್ತೆ. ಈ ಜ್ಯೂಸ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಇದು ಉತ್ತಮ ಪ್ರಮಾಣದ ಕಬ್ಬಿಣಾಂಶ (Iron) ಹೊಂದಿದ್ದು, ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಸೇಬು ತಿನ್ನೋದ್ರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತೆ.
67
ಕಿತ್ತಳೆ ಜ್ಯೂಸ್
ವಿಟಮಿನ್ ಸಿ (Vitamin C) ಯಿಂದ ಸಮೃದ್ಧವಾಗಿರುವ ಕಿತ್ತಳೆ ರಸವು (orange juice) ಮಲಬದ್ಧತೆಯನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿ. ಇದು ಉತ್ತಮ ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ, ಇದು ಮಲವನ್ನು ಭಾರವಾಗಿಸುತ್ತದೆ, ಇದು ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ.
77
ಅನಾನಸ್ ಜ್ಯೂಸ್
ಈ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಅನಾನಸ್ ರಸವು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಈ ಜ್ಯೂಸ್ ಕುಡಿಯುವಾಗ ಜೀರ್ಣಕ್ರಿಯೆ ಕೂಡ ಉತ್ತಮವಾಗಿ ನಡೆಯುತ್ತದೆ.