Mosquito Diseases : ಈ ಸೀಸನ್‌ನಲ್ಲಿ ಈ ರೋಗಗಳ ಬಗ್ಗೆ ಎಚ್ಚರವಾಗಿರಿ !

First Published Sep 2, 2022, 5:01 PM IST

ಆಗಸ್ಟ್-ಸೆಪ್ಟೆಂಬರ್ ತಿಂಗಳು ಖಂಡಿತವಾಗಿಯೂ ಬೇಸಿಗೆಯ ಬಿಸಿಲಿನಿಂದ ಸ್ವಲ್ಪ ಪರಿಹಾರ ಸಿಗುತ್ತೆ, ಮಳೆಯಿಂದ ಹೆಚ್ಚು ಆರಾಮ ದೊರೆಯುತ್ತೆ ನಿಜಾ. ಆದರೆ ಈ ಋತುವಿನಲ್ಲಿ ಅನೇಕ ರೀತಿಯ ಗಂಭೀರ ಕಾಯಿಲೆಗಳು ಹೆಚ್ಚಾಗುವ ಅಪಾಯವೂ ಹೆಚ್ಚಾಗಿದೆ. ಈ ರೋಗಗಳಲ್ಲಿ ಕೆಲವು ಮಾರಣಾಂತಿಕವೂ ಆಗಿರಬಹುದು. ಈ ತಿಂಗಳಲ್ಲಿ, ಸೊಳ್ಳೆ ಕಡಿತದಿಂದ ಉಂಟಾಗುವ ಅನೇಕ ರೋಗಗಳ ಅಪಾಯವು ದೇಶದಲ್ಲಿ ಅತ್ಯಧಿಕವಾಗಿದೆ. ಅವುಗಳ ಬಗ್ಗೆ ತಿಳಿಯೋಣ. ಈ ಬಗ್ಗೆ ತಿಳ್ಕೊಂಡ್ರೆ ಖಂಡಿತವಾಗಿಯೂ ನೀವು ರೋಗಗಳು ಬಾರದಂತೆ ನಿಮ್ಮನ್ನು ನೀವು ಕಾಪಾಡಬಹುದು.

ಇತ್ತೀಚಿನ ವರದಿಗಳನ್ನು ಗಮನಿಸಿದ್ರೆ, ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳ (dengue patients) ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.  ಇದಲ್ಲದೆ, ಮಲೇರಿಯಾ ಮತ್ತು ಚಿಕೂನ್ ಗುನ್ಯಾದಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಅನಾರೋಗ್ಯಕ್ಕೆ (Ill) ಒಳಗಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ, ಸಾವಿನ ಅಪಾಯವೂ ಹೆಚ್ಚಾಗುತ್ತಿದೆ, ಆದುದರಿಂದ ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ.

ಮಳೆಗಾಲದಲ್ಲಿ ಸೊಳ್ಳೆಗಳಿಂದ ಹಲವು ರೋಗಗಳು ಉಂಟಾಗುತ್ತವೆ. ಈ ರೋಗಗಳನ್ನು ತಡೆಯಲು ಎಲ್ಲಾ ಜನರು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಡೆಂಗ್ಯೂನಂತಹ ಸಮಸ್ಯೆ ಕಾಡಿದ್ದಲ್ಲಿ, ರೋಗ ತುಂಬಾ ವೇಗವಾಗಿ ಗಂಭೀರ ರೂಪ ಪಡೆಯಲು ಪ್ರಾರಂಭಿಸುತ್ತದೆ, ಹಾಗಾಗಿ, ಸೊಳ್ಳೆ ಕಡಿತವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೊಡ್ಡ ದೊಡ್ಡ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.

ಮಳೆಗಾಲದ ಈ ದಿನಗಳಲ್ಲಿ ಯಾವ ರೋಗಗಳು ಹೆಚ್ಚಾಗಿ ಕಾಡುತ್ತವೆ, ಅಲ್ಲದೇ ಯಾವ ರೋಗಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು ಮತ್ತು ಈ ರೋಗಗಳನ್ನು ತಡೆಗಟ್ಟಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇಲ್ಲಿದೆ ನೀವು ತಿಳಿದುಕೊಳ್ಳಬಹುದಾದ ಮಾಹಿತಿಗಳು… 
 

ಡೆಂಗ್ಯೂ ಜ್ವರದ (dengue fever) ಅಪಾಯ

ಈಡಿಸ್ ಸೊಳ್ಳೆ ಕಡಿತದಿಂದ ಉಂಟಾಗುವ ಡೆಂಗ್ಯೂ ರೋಗದಿಂದಾಗಿ ಪ್ರತಿ ವರ್ಷ ಸಾವಿರಾರು ಜನರು ಸಾಯುತ್ತಾರೆ. ಈ ಸೊಳ್ಳೆಗಳು ಹೆಚ್ಚಾಗಿ ಹಗಲಿನಲ್ಲಿ ಕಚ್ಚುತ್ತವೆ. ಡೆಂಗ್ಯೂ ಸಂದರ್ಭದಲ್ಲಿ, ಸ್ನಾಯುಗಳು ಮತ್ತು ಕೀಲುಗಳಲ್ಲಿ ತೀವ್ರವಾದ ನೋವು, ತೀವ್ರವಾದ ತಲೆನೋವು, ಎದೆ, ಬೆನ್ನು ಅಥವಾ ಹೊಟ್ಟೆಯ ಮೇಲೆ ಕೆಂಪು ದದ್ದುಗಳು ಮತ್ತು ಹೆಚ್ಚಿನ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  

ಡೆಂಗ್ಯೂ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿದರೆ, ರಕ್ತದ ಪ್ಲೇಟ್ ಲೆಟ್ ಗಳ ಮಟ್ಟವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಡೆಂಗ್ಯೂ ಅಪಾಯಕಾರಿ ರೂಪ ಪಡೆಯಬಹುದು. ಪ್ಲೇಟ್ ಲೆಟ್ ಹೆಚ್ಚಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲೇಬೇಕು. ತಪ್ಪಿದರೆ ಸಾಯುವ ಅಪಾಯ ಹೆಚ್ಚುತ್ತದೆ. 

ಮಲೇರಿಯಾ ರೋಗ

ಸೊಳ್ಳೆ ಕಡಿತದಿಂದ ಉಂಟಾಗುವ ಮಲೇರಿಯಾ (malaria)ರೋಗವು ಸಹ ಮಾರಣಾಂತಿಕವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಮಲೇರಿಯಾದಿಂದ ವರ್ಷದಲ್ಲಿ 19,500-20,000 ಸಾವುಗಳು ಸಂಭವಿಸುತ್ತವೆ. ಅನಾಫಿಲಿಸ್ ಸೊಳ್ಳೆ ಕಡಿತದಿಂದ ಉಂಟಾಗುವ ಈ ರೋಗವು ಹೆಚ್ಚಿನ ಜ್ವರ, ನಡುಕ ಅಥವಾ ಶೀತ ಮತ್ತು ಜ್ವರದಂತಹ ಲಕ್ಷಣಗಳನ್ನು ಹೊಂದಿರುತ್ತವೆ. 

ಮಲೇರಿಯಾ ರೋಗವು ವಾಸಿಯಾಗಲು ಮೂರು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಸಮಸ್ಯೆಯನ್ನು ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಬಹಳ ಅಗತ್ಯ. ಆದುದರಿಂದ ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರಲ್ಲಿ ಪರೀಕ್ಷೆ ನಡೆಸೋದನ್ನು ಮರೆಯಬೇಡಿ.

ಚಿಕೂನ್ ಗುನ್ಯಾ

ಚಿಕೂನ್ ಗುನ್ಯಾ (chikungunya)ರೋಗವು ಕಾಣಿಸಿಕೊಂಡರೆ ತೀವ್ರವಾದ ಕೀಲು ನೋವಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹೆಣ್ಣು ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಕಚ್ಚಲ್ಪಟ್ಟ ಈ ರೋಗವು ಡೆಂಗ್ಯೂವನ್ನು ಹೋಲುವ ರೋಗಲಕ್ಷಣಗಳನ್ನು ಹೊಂದಿರುತ್ತದೆ, ಆದರೂ ಅದರಲ್ಲಿ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಅಂಕಿಅಂಶಗಳ ಪ್ರಕಾರ, ಚಿಕೂನ್ ಗುನ್ಯಾದಿಂದ ಉಂಟಾಗುವ ಸಾವಿನ ಅಪಾಯವು ಶೇಕಡಾ 11 ರವರೆಗೆ ಇರಬಹುದು. ಚಿಕೂನ್ ಗುನ್ಯಾ ರೋಗವನ್ನು ಗುಣಪಡಿಸಲು ಪ್ರಸ್ತುತ ಯಾವುದೇ ನಿರ್ದಿಷ್ಟ ಔಷಧಿ ಇಲ್ಲ, ಆದರೆ ಪೂರಕ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮೂಲಕ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು. ಆದುದರಿಂದ ಜ್ವರದ ಜೊತೆ ಕೀಲು ನೋವು ಕಾಣಿಸಿಕೊಂಡರೆ ಇಗ್ನೋರ್ ಮಾಡಬೇಡಿ. 

ಈ ರೋಗಗಳನ್ನು ತಪ್ಪಿಸುವುದು ಹೇಗೆ?

ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ ಗುನ್ಯಾದಂತಹ ಗಂಭೀರ ಮತ್ತು ಮಾರಣಾಂತಿಕ ರೋಗಗಳನ್ನು ತಪ್ಪಿಸಲು ಸೊಳ್ಳೆಗಳಿಂದ ರಕ್ಷಣೆ ಪಡೆಯೋದು ತುಂಬಾನೆ ಮುಖ್ಯ. ಇದಕ್ಕಾಗಿ, ನೀವೇನು ಮಾಡಬಹುದು? ಯಾವ ರೀತಿ ನಿಮ್ಮನ್ನು ನೀವು ರಕ್ಷಿಸಬಹುದು ಅನ್ನೋದನ್ನು ನೋಡೋಣ.

ಪೂರ್ಣ ತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸಿ. 
ಸೋಂಕು ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. 
ಸೊಳ್ಳೆಗಳಿಂದ ರಕ್ಷಿಸಲು ಔಷಧಿಗಳನ್ನು ಬಳಸಬಹುದು. 
ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. 
ಈ ದಿನಗಳಲ್ಲಿ ತೀವ್ರ ಜ್ವರದ ಸಂದರ್ಭದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. 

click me!