ಸುಂದರ ನಗು, ಸ್ಟ್ರಾಂಗ್ ಹಲ್ಲಿಗೆ ಪ್ರತಿದಿನ ಹಣ್ಣುಗಳ ಮಿಸ್ ಮಾಡದೆ ಸೇವಿಸಿ

First Published Jun 8, 2021, 5:35 PM IST

ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಿದರೆ ಹಲ್ಲಿನ ಸಮಸ್ಯೆ ಏನು ಬರದೇ ಇರಲು ಸಹಾಯವಾಗುತ್ತದೆ. ಇದರ ಜೊತೆಗೆ ವರ್ಷಕ್ಕೆ ಎರಡು ಬಾರಿ ದಂತ ವೈದ್ಯರನ್ನು ಭೇಟಿ ಮಾಡುತ್ತಿದ್ದರೆ ಸಮಸ್ಯೆಯೇ ಇರೋದಿಲ್ಲ. ಇದಲ್ಲದೆ ಹಲ್ಲುಗಳು ಆರೋಗ್ಯವಾಗಿರಲು ಕೆಲವೊಂದು ಆಹಾರ ಸೇವಿಸಬೇಕು. ಇದರಿಂದ ಹಲ್ಲು ಸ್ಟ್ರಾಂಗ್ ಆಗುತ್ತೆ, ಸಮಸ್ಯೆಗಳಿಂದ ದೂರವಾಗುತ್ತೆ.. 

ಸ್ಟ್ರಾಬೆರ್ರಿ: ಈ ಹಣ್ಣಿನಲ್ಲಿ ಮಲಿಕ್ ಆ್ಯಸಿಡ್ ಇದೆ. ಇವು ಹಲ್ಲಿನ ಕಲೆ ನಿವಾರಿಸಲು ಸಹಾಯಕ. ಸ್ಟ್ರಾಬೆರಿ ತೆಗೆದುಕೊಂಡು ಮ್ಯಾಶ್ ಮಾಡಿ, ಅದಕ್ಕೆ ಬೇಕಿಂಗ್ ಸೋಡಾ ಬೆರೆಸಿ ಹಲ್ಲಿನ ಮೇಲೆ ಹಚ್ಚಿ. ಐದು ನಿಮಿಷದ ನಂತರ ಬ್ರಷ್ ಮಾಡಿದರೆ ಹಲ್ಲುಗಳು ಹೊಳೆಯುತ್ತವೆ.
undefined
ಕಿತ್ತಳೆ ಹಣ್ಣು : ಇವು ರಕ್ತ ನಾಳಗಳನ್ನು ಸ್ಟ್ರಾಂಗ್ ಮಾಡಿ ವಸಡು ಆರೋಗ್ಯದಿಂದಿರಲು ಸಹಕರಿಸುತ್ತದೆ.ಕಿತ್ತಳೆ ಮತ್ತು ಇತರೆ ಸಿಟ್ರಸ್ ಹಣ್ಣುಗಳಾದ ಮೂಸಂಬಿ, ದ್ರಾಕ್ಷಿ ಸೇವಿಸಿದರೆ ವಸಡುಗಳಲ್ಲಿ ಜುಮ್ ಜುಮ್ ಆಗುವುದಿಲ್ಲ.
undefined
ಸೇಬು ಹಣ್ಣು: ವೈದ್ಯರನ್ನು ದೂರವಿಡಲು ಪ್ರತಿದಿನ ಸೇಬು ತಿನ್ನಿ ಎಂದು ಹೇಳಲಾಗುತ್ತದೆ. ಇದೆ ಸೇಬು ಹಲ್ಲುಗಳು ಕ್ಲೀನ್ ಅಗಿಡುತ್ತದೆ. ಅಲ್ಲದೇ ವಸಡುಗಳಿಗೆ ಮಸಾಜ್ ಮಾಡಿದಂತಾಗುತ್ತದೆ.
undefined
ಸೇಬು ಅಥವಾ ಇತರ ಗಟ್ಟಿಯಾದ ನಾರಿನ ಹಣ್ಣುಗಳನ್ನು ತಿನ್ನುವುದು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ.ಲಾಲಾರಸವನ್ನು ಹೆಚ್ಚಿಸುತ್ತದೆ, ಇದು ಬಾಯಿಯಲ್ಲಿ ಉಳಿದಿರುವ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲಗಳನ್ನು ತಟಸ್ಥಗೊಳಿಸಬಹುದು. ಮತ್ತು ಸಕ್ಕರೆಯುಕ್ತ ಸೇಬಿನ ರಸವು ಹಲ್ಲಿನ ಕೊಳೆತಕ್ಕೆ ಕಾರಣವಾಗಬಹುದು, ತಾಜಾ ಸೇಬುಗಳು ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಕಡಿಮೆ.
undefined
ಬಾಳೆಹಣ್ಣು : ಬಾಳೆಹಣ್ಣಿನಲ್ಲಿರುವ ಫೈಬರ್ ಅಂಶ ಹಲ್ಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಇತರ ಆಹಾರಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದರ ಸಿಪ್ಪೆ ಹಲ್ಲುಗಳನ್ನು ಬಿಳಿ ಮಾಡಲು ಸಹಾಯ ಮಾಡುತ್ತೆ.
undefined
ಕಿವಿ ಹಣ್ಣು : ಇದರಲ್ಲೂ ವಿಟಾಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಸೇವಿಸುವುದರಿಂದ ಕಾಫಿ ಮತ್ತು ವೈನ್ ಸೇವನೆಯಿಂದ ಹಲ್ಲುಗಳ ಮೇಲೆ ಉಂಟಾದ ಡ್ಯಾಮೇಜ್ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.
undefined
ಕ್ಯಾರೆಟ್ : ಅನೇಕ ತರಕಾರಿಗಳು ಹಲ್ಲುಗಳಿಗೆ ಒಳ್ಳೆಯದು ಏಕೆಂದರೆ ಹಲ್ಲುಗಳ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಅಗಿಯಬೇಕಾಗುತ್ತದೆ. ಸಾಕಷ್ಟು ನೀರನ್ನು ಹೊಂದಿರುವ ಕ್ರಂಚಿ, ದೃಢವಾದ ಆಹಾರಗಳು ಉತ್ತಮ ನೈಸರ್ಗಿಕ ಹಲ್ಲುಗಳನ್ನು ಸ್ವಚ್ಛಗೊಳಿಸುವವು ಏಕೆಂದರೆ ಅವು ಲಾಲಾರಸದ ಹರಿವನ್ನು ಉತ್ತೇಜಿಸುತ್ತವೆ, ಇದು ಆಹಾರ ಕಣಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಉಜ್ಜಲು ಸಹಾಯ ಮಾಡುತ್ತದೆ.
undefined
ಕ್ರ್ಯಾನ್ ಬೆರ್ರಿ : ಕ್ರ್ಯಾನ್ ಬೆರಿಗಳಲ್ಲಿ ಪಾಲಿಫಿನಾಲ್‌ಗಳು ಸಹ ಸಮೃದ್ಧವಾಗಿವೆ ಮತ್ತು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಒದಗಿಸುತ್ತವೆ. ಪ್ಲೇಕ್ ರಚನೆಯ ಪ್ರಕ್ರಿಯೆಯನ್ನು ಅಡ್ಡಿಪಡಿಸುವಲ್ಲಿ ತಾಜಾ ಕ್ರ್ಯಾನ್ಬೆರಿಗಳು ವಿಶೇಷವಾಗಿ ಪರಿಣಾಮಕಾರಿಯಾಗಿವೆ. ಕೆಲವು ಪ್ಯಾಕೇಜ್ ಮಾಡಿದ ಒಣಗಿದ ಕ್ರ್ಯಾನ್ಬೆರಿಗಳು ಹಲ್ಲುಗಳಿಗೆ ಅಷ್ಟು ಒಳ್ಳೆಯದಲ್ಲ.
undefined
click me!