ಮೂನ್ ಮಿಲ್ಕ್ ಕುಡಿಯಿರಿ.... ಉತ್ತಮ ನಿದ್ರೆಯನ್ನು ಪಡೆಯಿರಿ

First Published Sep 27, 2021, 7:25 PM IST

ಮೂನ್ ಮಿಲ್ಕ್ ಬಗ್ಗೆ  ಕೇಳಿದ್ದೀರಾ? ಆಯುರ್ವೇದ ಗಿಡಮೂಲಿಕೆಗಳು ಮತ್ತು ಸಸ್ಯಗಳಿಂದ ತಯಾರಿಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ದೇಹವನ್ನು ವಿಶ್ರಾಂತಿಗೊಳಿಸುವುದಲ್ಲದೆ ರೋಗ ನಿರೋಧಕ ವ್ಯವಸ್ಥೆಯನ್ನು  ಬಲಪಡಿಸುವುದರೊಂದಿಗೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
 

ದೀರ್ಘ ದಣಿದ ದಿನದ ನಂತರ ನಮಗೆ ಉತ್ತಮ ನಿದ್ರೆ ಬೇಕು. ರಾತ್ರಿ ಉತ್ತಮ ನಿದ್ರೆ (good sleep) ಮನಸ್ಸು (mind) ಮತ್ತು ದೇಹಕ್ಕೆ (Body) ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ತಜ್ಞರು ತಮ್ಮನ್ನು ರೀಚಾರ್ಜ್ ಮಾಡಲು ರಾತ್ರಿ ಯಲ್ಲಿ 7-8 ಗಂಟೆಗಳ ಕಾಲ ಮಲಗಲು ಶಿಫಾರಸು ಮಾಡುತ್ತಾರೆ. ರಾತ್ರಿ ಮಲಗುವ ಮುನ್ನ ಅರಿಶಿನ ಹಾಲು ಕುಡಿಯುವುದರಿಂದ ಆಗುವ ಆಯುರ್ವೇದದ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು ಆದರೂ, ಮಲಗುವ ಮುನ್ನ ಪ್ರತಿದಿನ ಸೇವಿಸಿದರೆ ನೀವು ನೆಮ್ಮದಿಯ ನಿದ್ರೆ ಮಾಡಬಹುದಾದ ಇನ್ನೊಂದು ರೀತಿಯ ಹಾಲು ಇದೆ.

'ಮೂನ್ ಮಿಲ್ಕ್' (moon milk) ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ಈ ಹಾಲನ್ನು ಭಾರತೀಯ ಗಿಡಮೂಲಿಕೆಗಳಾದ ಅಶ್ವಗಂಧ, (Ashwagandha)  ಜಾಯಿಕಾಯಿ, ಅರಿಶಿನದಂತಹ ಮಸಾಲೆಗಳಿಂದ ತಯಾರಿಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ದೇಹವನ್ನು ವಿಶ್ರಾಂತಿಗೊಳಿಸುವುದಲ್ಲದೆ ರೋಗನಿರೋಧಕ (Immunity Power) ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅರಿಶಿನ ಹಾಲಿನಂತೆ ಇದು ಕೂಡ ಆರೋಗ್ಯಕ್ಕೆ ರಾಮಬಾಣ.

ಮೂನ್ ಮಿಲ್ಕ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ
ಇಂದ್ರಿಯಗಳನ್ನು ಶಾಂತಗೊಳಿಸಲು ಈ ಪಾನೀಯವು ಸೂಕ್ತ ಮಾರ್ಗವಾಗಿದೆ. ಮೂನ್ ಮಿಲ್ಕ್ ಗೆ ಸೇರಿಸಿದ ಪದಾರ್ಥಗಳ ವಿಷಯಕ್ಕೆ ಬಂದಾಗ, ಈ ಎಲ್ಲಾ ಗಿಡಮೂಲಿಕೆಗಳು ಮತ್ತು ಮಸಾಲೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಒತ್ತಡದಿಂದ (stress) ದೂರ ವಿರಲು ಉತ್ತಮ ನಿದ್ದೆ ಪಡೆಯುವುದು ತುಂಬಾ ಒಳ್ಳೆಯದು.

ಮೂನ್ ಮಿಲ್ಕ್ ಆರೋಗ್ಯ ಪ್ರಯೋಜನಗಳು
ಗಿಡಮೂಲಿಕೆ ಹಾಲು ಆಗಿರುವ ಮೂನ್ ಮಿಲ್ಕ್ ಅಶ್ವಗಂಧವನ್ನು ಒಳಗೊಂಡಿದೆ. ಈ ಗಿಡಮೂಲಿಕೆಯು ಶಕ್ತಿಯುತ ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿರುವ ಕಾರ್ಡಿಯೋಪಲ್ಮನರಿ ಮತ್ತು ಕೇಂದ್ರ ನರವ್ಯೂಹದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಅಶ್ವಗಂಧವು ವಯಸ್ಕರಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಆ ಮೂಲಕ ನಿದ್ರೆಯ ಗುಣಮಟ್ಟವನ್ನು (quality of sleep) ಸುಧಾರಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.  

ಹಾಲು
ಮೊದಲನೆಯದಾಗಿ ಹಾಲು,  ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ವಾಸ್ತವವಾಗಿ, ಹಾಲಿನಲ್ಲಿ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವಿದೆ, ಇದು ಉತ್ತಮ ನಿದ್ರೆಯನ್ನು ಪಡೆಯಲು ಹೆಸರುವಾಸಿಯಾಗಿದೆ. ಹಾಲಿನಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ ನಂತಹ ಅನೇಕ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ಶಕ್ತಿ ಕಾಪಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.

ಅರಿಶಿನ
ಮೂನ್ ಮಿಲ್ಕ್ ಗೆ  ಅರಿಶಿನ (turmeric) ವನ್ನು ಸೇರಿಸಲಾಗುತ್ತದೆ. ಇದು ಒಂದು ಉತ್ಕರ್ಷಣ ನಿರೋಧಕವಾಗಿದೆ, ಜೊತೆಗೆ ಉರಿಯೂತದ ಜೊತೆಗೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಅರಿಶಿನವು ಗುಣಪಡಿಸುವ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ, ಇದು ಉತ್ತಮ ಜೀರ್ಣಕ್ರಿಯೆ ಮತ್ತು ಚಯಾಪಚಯಕ್ರಿಯೆಗೆ ತುಂಬಾ ಒಳ್ಳೆಯದು.

ಅಶ್ವಗಂಧ ಸಸ್ಯ
ಈ ಸಾಂಪ್ರದಾಯಿಕ ಗಿಡಮೂಲಿಕೆಯು ಶತಮಾನಗಳಿಂದ ಹೆಸರುವಾಸಿ. ಏಕೆಂದರೆ ಅದರ ಔಷಧೀಯ ಗುಣ. ಅಶ್ವಗಂಧವು ಒಂದು ಅಡಾಪ್ಟೋಜೆನಿಕ್ ಗಿಡಮೂಲಿಕೆಯಾಗಿದ್ದು, ಇದು ನಮ್ಮ ದೇಹವನ್ನು ಯಾವುದೇ ರೀತಿಯ ಒತ್ತಡ ಮತ್ತು ಆತಂಕದಿಂದ ದೂರವಿರಿಸುತ್ತದೆ. ಈ ಮೂಲಿಕೆಯ ಬೇರುಗಳನ್ನು ಸಾಮಾನ್ಯವಾಗಿ ಔಷಧ (medicine) ತಯಾರಿಸಲು  ಬಳಸಲಾಗುತ್ತದೆ.

ಜಾಯಿಕಾಯಿ
ಜಾಯಿಕಾಯಿಯು (nutmeg) ಒಂದು ಔಷಧೀಯ ಸಸ್ಯವಾಗಿದೆ. ಇದು ನಮ್ಮ ದೇಹಕ್ಕೆ ಸಿಡೇಟಿವ್ ಆಗಿ ಕಾರ್ಯನಿರ್ವಹಿಸಬಹುದು. ಇದರ ಸೇವನೆ ಒತ್ತಡವನ್ನು ನಿವಾರಿಸುವುದಲ್ಲದೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
 

ಮುನ್ ಮಿಲ್ಕ್ ತಯಾರಿಸುವುದು ಹೇಗೆ?
1 ಕಪ್ - ಹಾಲು
1 ಚಿಟಿಕೆ- ಅರಿಶಿನ
1/2 ಟೀ ಚಮಚ -  ಅಶ್ವಗಂಧ ಪುಡಿ
1/2 ಟೀ ಚಮಚ -  ದಾಲ್ಚಿನ್ನಿ
1 ಟೀ ಚಮಚ -  ಶುಂಠಿ
1 ಚಿಟಿಕೆ ಜಾಯಿಕಾಯಿ
1 ಟೀ ಚಮಚ - ತೆಂಗಿನ ಎಣ್ಣೆ
1 ಟೀ ಚಮಚ- ಜೇನುತುಪ್ಪ

ಮೂನ್ ಮಿಲ್ಕ್  ತಯಾರಿಸುವ ವಿಧಾನ-
ಮಧ್ಯಮ ಶಾಖದ ಮೇಲೆ ಹಾಲನ್ನು ಬಾಣಲೆಯಲ್ಲಿ ಬಿಸಿ ಮಾಡಿ ಮತ್ತು ಕುದಿಯಲು ಬಿಡಿ.
ಅಶ್ವಗಂಧ, ದಾಲ್ಚಿನ್ನಿ, ಶುಂಠಿ, ಅರಿಶಿನ ಮತ್ತು ಜಾಯಿಕಾಯಿಯನ್ನು ಸೇರಿಸಿ. ಈಗ ಗ್ಯಾಸ್ ಆಫ್ ಮಾಡಿ.
ಮಸಾಲೆಗಳನ್ನು ಹಾಲಿನಲ್ಲಿ 5-10 ನಿಮಿಷಗಳ ಕಾಲ ಬಿಡಿ.
ಈಗ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ನೀವು ಬಯಸಿದರೆ ಹಾಲಿಗೆ ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಬಹುದು.

ಈಗ ಒಂದು ಕಪ್ ನಲ್ಲಿ ಮೂನ್ ಮಿಲ್ಕ್ ಹಾಕಿ ಅದಕ್ಕೆ ಜೇನುತುಪ್ಪ  ಸೇರಿಸಿ ರಾತ್ರಿ ಮಲಗುವ ಮೊದಲು ಕುಡಿಯಿರಿ.
ನೀವು ಸಸ್ಯ ಆಧಾರಿತ ಆಹಾರದಲ್ಲಿದ್ದರೆ, ತೆಂಗಿನ ಹಾಲು, ಬಾದಾಮಿ ಹಾಲು, ಸೋಯಾ ಹಾಲು ಅಥವಾ ಇತರ ಯಾವುದೇ ಹಾಲನ್ನು ಸಹ ಆಯ್ಕೆ ಮಾಡಬಹುದು.
ಮೂನ್ ಮಿಲ್ಕ್  ನಿಯಮಿತವಾಗಿ ಕುಡಿದ ನಂತರ ನೀವು 6-12 ವಾರಗಳಲ್ಲಿ ವ್ಯತ್ಯಾಸವನ್ನು ಅನುಭವಿಸುತ್ತೀರಿ. ಅಶ್ವಗಂಧದಿಂದ ತಯಾರಿಸಿದ ಮೂನ್ ಮಿಲ್ಕ್  ಸೇವನೆಗೆ ಒಳ್ಳೆಯದು, ಆದರೆ ದಿನದಲ್ಲಿ ಹೆಚ್ಚು ಕುಡಿಯುವುದು ಹಾನಿಕಾರಕ.

click me!