ಮೊಸರಿಗೆ ಸ್ವಲ್ಪ ಬೆಲ್ಲ ಸೇರಿಸಿ ನೋಡಿ, ಎಷ್ಟೆಲ್ಲಾ ಲಾಭವಿದೆ ಅಂತ?

First Published May 7, 2021, 2:05 PM IST

ಬೇಸಿಗೆಯ ಮೊಸರು ಹೆಚ್ಚು ಪ್ರಯೋಜನ. ಇದನ್ನು  ಆಹಾರದೊಂದಿಗೆ ಸೇವಿಸಬಹುದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುವುದು ಮಾತ್ರವಲ್ಲದೇ, ಇತರ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿ. ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲೇವಿನ್, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಬೆಲ್ಲವನ್ನು ಸಾಮಾನ್ಯವಾಗಿ ಹಾಲಿನೊಂದಿಗೆ ಸೇವಿಸಿದರೆ, ಮೊಸರಿನೊಂದಿಗೆ ಸೇವಿಸುವುದರಿಂದ ಉತ್ತಮ ಪ್ರಯೋಜನಗಳೂ ಸಹ ಇದೆ. 

ಯಾವಾಗ ಸೇವಿಸಬೇಕು?ಊಟದ ನಂತರ ಮೊಸರು ಮತ್ತು ಬೆಲ್ಲವನ್ನು ತಿನ್ನಬಹುದು. ಈ ಸಮಯದಲ್ಲಿ ಮೊಸರಿನ ಸೇವನೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ಸೇವನೆ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಮೊಸರನ್ನು ರಾತ್ರಿ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ದೇಹಕ್ಕೆ ಹಾನಿ.
undefined
ರೋಗನಿರೋಧಕ ವ್ಯವಸ್ಥೆ ಶಕ್ತಿಯುತವಾಗುತ್ತದೆಅನೇಕ ಜನರು ದುರ್ಬಲ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದಾರೆ. ಮೊಸರು ಇದನ್ನು ರಿಪೇರಿ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ. ಇದರಲ್ಲಿ ಕಂಡು ಬರುವ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
undefined
ಮೊಸರು ಸಹ ಉತ್ತಮ ಶಕ್ತಿಯ ಮೂಲಮತ್ತು ನಿದ್ರಾಹೀನತೆಯನ್ನು ನಿವಾರಿಸುವಲ್ಲಿ ಸಹ ಪ್ರಯೋಜನಕಾರಿ. ಆದುದರಿಂದ ಮೊಸರಿನೊಂದಿಗೆ ಬೆಲ್ಲ ಬೆರೆಸಿ ತಿನ್ನೋದನ್ನು ಮರೆಯಬೇಡಿ.
undefined
ಕಡಿಮೆ ರಕ್ತದೊತ್ತಡ ಅಪಾಯಹೃದಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮೊಸರು ಅತ್ಯಂತ ಮುಖ್ಯ. ಇದರ ಸೇವನೆ ರಕ್ತದೊತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
undefined
ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸಲುಪ್ರಯೋಜನಗಳ ವಿಷಯದಲ್ಲಿ ಮೊಸರು ಹಾಲಿನಷ್ಟೇ ಪರಿಣಾಮಕಾರಿ. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಹಲ್ಲು ಮತ್ತು ಮೂಳೆಗಳೆರಡನ್ನೂ ಬಲಪಡಿಸುತ್ತದೆ.
undefined
ಮಲಬದ್ಧತೆಯನ್ನು ತೊಡೆದುಹಾಕಿಮೊಸರು ಮತ್ತು ಬೆಲ್ಲದ ಸೇವನೆಯೂ ಹೊಟ್ಟೆಗೆ ಅತ್ಯಂತ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಸಮಸ್ಯೆಗಳನ್ನೂ ಇದು ನಿವಾರಿಸುತ್ತದೆ.
undefined
ತಲೆಹೊಟ್ಟು ತೊಡೆದುಹಾಕಲುಮೊಸರು ಚರ್ಮ ಮತ್ತು ಕೂದಲಿಗೆ ಸಾಕಷ್ಟು ಪ್ರಯೋಜನಕಾರಿ. ಮೊಸರಿನ ಬಳಕೆಯಿಂದ ತಲೆಹೊಟ್ಟು ಸಮಸ್ಯೆಯೂ ನಿವಾರಣೆ ಆಗುತ್ತದೆ. ಇದಕ್ಕಾಗಿ ಸುಮಾರು 30 ನಿಮಿಷಗಳ ಕಾಲ ಕೂದಲಿನ ಮೇಲೆ ಬಿಡಿ. ನಂತರ ತೊಳೆಯಿರಿ.
undefined
ತೂಕ ಇಳಿಸಲು ಸಹಾಯಕವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಮೊಸರು ಮತ್ತು ಬೆಲ್ಲವನ್ನು ಸೇವಿಸಿ. ಇದನ್ನು ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸವಾಗುತ್ತದೆ.
undefined
click me!