ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದೇನು ಪ್ರಯೋಜನ?

First Published | May 6, 2021, 5:16 PM IST

ಸೂರ್ಯ ನಮಸ್ಕಾರ ಅನೇಕ ಸಣ್ಣ ವ್ಯಾಯಾಮಗಳನ್ನು ಒಳಗೊಂಡಿದೆ. ಈ ವ್ಯಾಯಾಮಗಳನ್ನು ಮಾಡುವುದರಿಂದ ಮನುಷ್ಯ ಆರೋಗ್ಯವಾಗಿರಲು ಸಹಾಯ ಮಾಡುವುದಲ್ಲದೆ, ಎಲ್ಲಾ ರೀತಿಯ ಒತ್ತಡದಿಂದ ಮುಕ್ತನಾಗುತ್ತಾನೆ. ಸೂರ್ಯ ನಮಸ್ಕಾರವೂ ಒತ್ತಡವನ್ನು ನಿವಾರಿಸುತ್ತದೆ, ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಬೊಜ್ಜನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಸ್ಯೆ ಇರುವ ಮಹಿಳೆಯರಿಗೆ ಇದು ತುಂಬಾ ಪ್ರಯೋಜನಕಾರಿ. ಬೆನ್ನುಮೂಳೆ ಬಲವಾಗಲು ಸಹ ಇದು ಸಹಕಾರಿ.

ಸೂರ್ಯ ನಮಸ್ಕಾರ: ಸೂರ್ಯ ನಮಸ್ಕಾರವನ್ನು ಎಲ್ಲಾ ಯೋಗಾಸನಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಸೂರ್ಯ ನಮಸ್ಕಾರ ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವ ಯೋಗವಾಗಿದೆ. ಆದರೆ ಸೂರ್ಯ ನಮಸ್ಕಾರ ಮಾಡಲು ಸರಿಯಾದ ಮಾರ್ಗ ಕೆಲವೇ ಜನರಿಗೆ ತಿಳಿದಿದೆ.
ಪ್ರಣಾಮಾಸನ: ಈ ಅಸನಾ ಮಾಡಲು ಮೊದಲು ಚಾಪೆಯ ಅಂಚಿನಲ್ಲಿ ನೇರವಾಗಿ ನಿಂತುಕೊಳ್ಳಿ. ನಂತರ ಎರಡೂ ಕೈಗಳನ್ನು ಭುಜಕ್ಕೆ ಸಮಾನಾಂತರವಾಗಿ ಎತ್ತಿ ಮತ್ತು ಪೂರ್ಣ ತೂಕವನ್ನು ಎರಡೂ ಕಾಲುಗಳ ಮೇಲೆ ಸಮನಾಗಿ ಇರಿಸಿ. ಎರಡೂ ಅಂಗೈಗಳ ಮೇಲ್ಮೈಗಳನ್ನು ಒಂದಕ್ಕೊಂದು ಅಂಟಿಸಿ ನಮಸ್ಕಾರ ಭಂಗಿಯಲ್ಲಿ ನಿಲ್ಲಬೇಕು.
Tap to resize

ಹಸ್ತ ಉತ್ಥಾನಾಸನ : ಈ ಅಸನಾ ಮಾಡಲು ಆಳವಾಗಿ ಉಸಿರಾಡಿ ಮತ್ತು ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ. ಈಗ ಕೈ ಮತ್ತು ಸೊಂಟವನ್ನು ಬಾಗಿಸುವಾಗ ಎರಡೂ ತೋಳುಗಳು ಮತ್ತು ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ.
ಹಸ್ತಪಾದಾಸನ: ಈ ಅಸನಾದಲ್ಲಿ ಹೊರಮುಖವಾಗಿ ಉಸಿರನ್ನು ಹೊರಬಿಟ್ಟು ನಿಧಾನವಾಗಿ ಕೆಳಮುಖವಾಗಿ ಮುಂದಕ್ಕೆ ಬಾಗಿ. ನಿಮ್ಮ ಎರಡೂ ಕೈಗಳನ್ನು ಕಿವಿಗಳ ಬಳಿಯಿಂದ ತಂದು ನೆಲವನ್ನು ಸ್ಪರ್ಶಿಸಿ.
ಅಶ್ವ ಸಂಚಲನಾಸನ: ಈ ಭಂಗಿಯಲ್ಲಿ ಅಂಗೈಗಳನ್ನು ನೆಲದ ಮೇಲೆ ಇರಿಸಿ, ಉಸಿರನ್ನು ಒಳಕ್ಕೆಳೆದು ಬಲಗಾಲನ್ನು ಹಿಂದಕ್ಕೆ ಚಲಿಸಿ ಮತ್ತು ಎಡಗಾಲನ್ನು ಮೊಣಕಾಲಿನಿಂದ ಬಾಗಿಸಿ ಮೇಲಕ್ಕೆ ಇರಿಸಿ. ಕುತ್ತಿಗೆಯನ್ನು ಮೇಲಕ್ಕೆ ತ್ತಿ ಮತ್ತು ಸ್ವಲ್ಪ ಸಮಯದವರೆಗೆ ಒಂದೇ ಸ್ಥಾನದಲ್ಲಿರಿ.
ಪರ್ವತಾಸನ : ಉಸಿರನ್ನು ಹೊರಹಾಕುತ್ತಾ ಪೃಷ್ಠವನ್ನು ಹಾಗೂ ಹಿಂಭಾಗದ ಮೂಳೆಯನ್ನು ಮೇಲೆತ್ತಿ, ಎದೆಯನ್ನು ಕೆಳಗಿಳಿಸಿ. ಸಾಧ್ಯವಾದಲ್ಲಿ ಹಿಮ್ಮಡಿಯನ್ನು ಭೂಮಿಯ ಮೇಲಿರಿಸಿ ಹಿಂಭಾಗದ ಮೂಳೆಯನ್ನು ಮೇಲೆತ್ತುತ್ತಾ ಈ ಭಂಗಿಯನ್ನು ಗಾಢವಾಗಿಸಲು ಪ್ರಯತ್ನಿಸಿ.
ದಂಡಾಸನ: ಈ ಅಸನಾವನ್ನು ಉಸಿರಾಡುವಾಗ ಕಾಲುಗಳನ್ನು ಹಿಂದಕ್ಕೆ ತೆಗೆದುಕೊಂಡು ಇಡೀ ದೇಹವನ್ನು ಸರಳ ರೇಖೆಯಲ್ಲಿ ಇರಿಸಿ ಮತ್ತು ನಿಮ್ಮ ಕೈಗಳನ್ನು ನೇರವಾಗಿ ನೆಲದ ಮೇಲೆ ಇರಿಸಿ.
ಅಷ್ಟಾಂಗ ನಮಸ್ಕಾರ: ಈ ಅಸನವನ್ನು ಮಾಡುವಾಗ ನಿಮ್ಮ ಎರಡೂ ಮೊಣಕಾಲುಗಳನ್ನು ನೆಲದ ಮೇಲೆ ಊರಿ ಉಸಿರನ್ನು ಹೊರಬಿಡಿ. ನಿಮ್ಮ ಸೊಂಟವನ್ನು ಹಿಂದಕ್ಕೆ ಎತ್ತಿ ಮತ್ತು ನಿಮ್ಮ ಎದೆ ಮತ್ತು ಗಲ್ಲವನ್ನು ನೆಲದಿಂದ ಸ್ಪರ್ಶಿಸಿ ಮತ್ತು ಸ್ವಲ್ಪ ಸಮಯದವರೆಗೆ ಅದೇ ಸ್ಥಾನದಲ್ಲಿರಿ.
ಭುಜಂಗಾಸನ: ಈ ಅಸನ ಮಾಡುವಾಗ ನಿಧಾನವಾಗಿ ಉಸಿರನ್ನು ಹೊರಬಿಟ್ಟು ಎದೆಯನ್ನು ಮುಂದಕ್ಕೆ ಚಲಿಸಿ. ನಿಮ್ಮ ಕೈಗಳನ್ನು ನೇರವಾಗಿ ನೆಲದ ಮೇಲೆ ಇರಿಸಿ. ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ ಮತ್ತು ಎರಡೂ ಕಾಲುಗಳನ್ನು ನೇರವಾಗಿ ನಿಲ್ಲುವಂತೆ ಮಾಡಿ.
ಶವಾಸನ: ಚಾಪೆಯ ಮೇಲೆ ನೇರವಾಗಿ ಬೆನ್ನಿನ ಮೇಲೆ ಮಲಗಿ ಕಣ್ಣು ಮುಚ್ಚಿ. ಪಾದಗಳನ್ನು ಸಡಿಲವಾದ ಭಂಗಿಯಲ್ಲಿ ಹಗುರವಾಗಿ ತೆರೆಯಿರಿ. ಪಾದದ ಅಂಗಾಲುಗಳು ಮತ್ತು ಬೆರಳುಗಳು ಮೇಲ್ಮುಖವಾಗಿರಬೇಕು. ನಿಮ್ಮ ಕೈಗಳನ್ನು ಪಕ್ಕಕ್ಕೆ ಇರಿಸಿ ಮತ್ತು ನಿಮ್ಮ ಅಂಗೈಗಳನ್ನು ಮೇಲಕ್ಕೆ ತೆರೆದಿಡಿ.
ನಿಧಾನವಾಗಿ ಒಳಕ್ಕೆ ಮತ್ತು ಹೊರಗೆ ಉಸಿರನ್ನು ಒಳಕ್ಕೆಳೆದು, ಪಾದದಿಂದ ದೇಹದ ಪ್ರತಿಯೊಂದೂಭಾಗವನ್ನು ಕೇಂದ್ರೀಕರಿಸಿ. ನಿಧಾನವಾಗಿ ಅದನ್ನು ಕಡಿಮೆ ಮಾಡಿ. ದೇಹವು ನಿರಾಳವಾದಂತೆ ಭಾಸವಾದಾಗ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಒಂದೇ ಭಂಗಿಯಲ್ಲಿ ವಿಶ್ರಾಂತಿ ಪಡೆಯಿರಿ.

Latest Videos

click me!