ಸಾರ್ವಜನಿಕವಾಗಿ ತೊಡೆ ಸಂದು ತುರಿಸಿ ಮುಜುಗರಕ್ಕೊಳಗಾಗಿದ್ದೀರಾ? ಇಲ್ಲಿದೆ ಪರಿಹಾರ

First Published May 6, 2021, 5:49 PM IST

ಕೆಲವೊಂದು ಸಂದರ್ಭಗಳಲ್ಲಿ ಅದರಲ್ಲೂ ವಿಶೇಷವಾಗಿ ತೇವಾಂಶಭರಿತ ಹವಾಮಾನದ ಕಾಲದಲ್ಲಿ ದೇಹದ ಗುಪ್ತ ಭಾಗಗಳು ಅಥವಾ ಅಂಗಗಳಲ್ಲಿ  ಕಿರಿಕಿರಿ ಉಂಟುಮಾಡುವ ತುರಿಕೆ ಕಾಣಿಸಿಕೊಳ್ಳಬಹುದು. ಇದನ್ನು ಸಾಮಾನ್ಯವಾಗಿ ತುರಿಕೆ ಕಜ್ಜಿ ಅಥವಾ ರಿಂಗ್ ವರ್ಮ್ ಎಂದು ಕರೆಯಲಾಗುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಈ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದು ಒಂದು ಫಂಗಸ್ ಅಥವಾ ಶಿಲೀಂಧ್ರದಿಂದ ಉಂಟಾಗುವಂತಹ ಸೋಂಕು. ಬೆಚ್ಚಗಿನ ಮತ್ತು ತೇವಾಂಶಭರಿತ ವಾತಾವರಣದಲ್ಲಿ ಇದು ಕಾಣಿಸಿಕೊಳ್ಳುತ್ತದೆ.
 

ತೊಡೆಯ ಸಂಧಿಯ ಭಾಗವು ಈ ಶಿಲೀಂಧ್ರವು ಕಾಣಿಸಿಕೊಳ್ಳಲು ಮತ್ತು ಬೆಳೆಯಲು ಸೂಕ್ತವಾತಾವರಣ ಆಗಿರುವುದರಿಂದ ಇಲ್ಲಿ ಸುಲಭವಾಗಿ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಪರಿಸ್ಥಿತಿ ಅಥವಾ ಸಮಸ್ಯೆ ಕಾಣಿಸಿಕೊಂಡಿದ್ದರೆ, ತೊಡೆಯ ಸಂದು ಮತ್ತು ಸುತ್ತಮುತ್ತಲಿನ ಭಾಗವು ಕೆಂಪು ವರ್ಣಕ್ಕೆ ತಿರುಗಿ, ತುರಿಕೆ ಉಂಟಾಗುವುದನ್ನು ಗಮನಿಸಿರಬಹುದು.ಇದು ಅಷ್ಟೊಂದು ಗಂಭೀರವಾದ ಸಮಸ್ಯೆ ಅಲ್ಲ. ಆದರೆ ಸಾರ್ವಜನಿಕವಾಗಿ ಇರುವ ಸಂದರ್ಭದಲ್ಲಿ ಇದು ಖಂಡಿತಾ ಮುಜುಗರವನ್ನು ಉಂಟು ಮಾಡಬಲ್ಲದು. ನಮಗೆ ಅರಿವಿಲ್ಲದಂತೆಯೇ ಕೈಗಳು ತೊಡೆಯ ಸಂದನ್ನು ತುರಿಸಿಕೊಂಡು ಮುಜುಗರಕ್ಕೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ.
undefined
ಇನ್ನು ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ವೈದ್ಯರ ಸಲಹೆಯನ್ನು ಪಡೆದಲ್ಲಿ, ವೈದ್ಯರು ಸಾಂದರ್ಭಿಕ ಆಂಟಿಫಂಗಲ್ ಔಷಧಿಗಳನ್ನು ನೀಡಬಹುದು ಮತ್ತು ಸಮಸ್ಯೆ ಇರುವ ದೇಹದ ಭಾಗ ಅಥವಾ ಅಂಗಕ್ಕೆ ಅದನ್ನು ಹಚ್ಚಲು ಹೇಳಬಹುದು. ಇದರ ಜೊತೆಗೆ ದೇಹದ ಆ ಭಾಗಗಳನ್ನು ಸ್ವಚ್ಛವಾಗಿ ಮತ್ತು ತೇವಾಂಶರಹಿತವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ.ಔಷಧಿಗಳಿಗೆ ಪರ್ಯಾಯವಾಗಿ ಈ ತುರಿಕೆಯಿಂದ ಶಮನವನ್ನು ಪಡೆಯಬಹುದು. ಅದು ಹೇಗೆಂದರೆ ಕೆಲವೊಂದು ಸರಳವಾದ ಮನೆಮದ್ದುಗಳ ಮೂಲಕ. ಅಂತಹ ಮನೆಮದ್ದುಗಳು ಅಥವಾ ಸುಲಭದ ಉಪಾಯಗಳು ಏನು ಎನ್ನುವ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಮುಂದೆ ಓದಿ ...
undefined
ಆಪಲ್ ಸೈಡರ್ ವಿನೆಗರ್ಇಂತಹ ಸೋಂಕುಗಳನ್ನು ತಡೆಗಟ್ಟಲು ಆಪಲ್ ಸೈಡರ್ ವಿನೆಗರ್ ಒಂದು ಅತ್ಯುತ್ತಮ ಆಯ್ಕೆ. ಇದು ಆಂಟಿ ಫಂಗಲ್ ಅಂದರೆ ಶಿಲೀಂಧ್ರ ನಿರೋಧಕ ಮತ್ತು ಸೂಕ್ಷ್ಮಾಣುಜೀವಿ ನಿರೋಧಕ ಗುಣ ಲಕ್ಷಣಗಳನ್ನು ಹೊಂದಿದೆ. ಇದರಿಂದಾಗಿ ಕಿರಿಕಿರಿ ಉಂಟು ಮಾಡುವಂತಹ ತುರಿಕೆ ಹರಡುವುದನ್ನು ತಡೆಗಟ್ಟಬಹುದು. ಕಜ್ಜಿಗಳಿಂದ ಶೀಘ್ರ ಉಪಶಮನ ಪಡೆಯಲು ಕೂಡ ಆಪಲ್ ಸೈಡರ್ ವಿನೆಗರ್ ಬಹಳಷ್ಟು ಸಹಾಯ ಮಾಡುತ್ತದೆ. ಇದಕ್ಕೆ ಮಾಡಬೇಕಿರುವುದು ಇಷ್ಟೇ. ಒಂದು ಬೌಲಿನಲ್ಲಿ ಆಪಲ್ ಸೈಡರ್ ವಿನೆಗರ್ ತೆಗೆದುಕೊಳ್ಳಿ ಮತ್ತು ಅದಕ್ಕೆ ನೀರನ್ನು ಸೇರಿಸಿ ಅದನ್ನು ಮಂದಗೊಳಿಸಿ.
undefined
ಒಂದು ಸಣ್ಣ ಹತ್ತಿಯ ಉಂಡೆಯನ್ನು ಈ ವಿನೆಗರ್ ನೀರಿನಲ್ಲಿ ಅದ್ದಿ, ಸಮಸ್ಯೆ ಅಥವಾ ಸೋಂಕು ಕಾಣಿಸಿಕೊಂಡಿರುವ ಭಾಗಕ್ಕೆ ಹಚ್ಚಿರಿ. ತುರಿಕೆಯ ಪ್ರಮಾಣವು ಹೆಚ್ಚಿದ್ದರೆ, ಒಂದು ಬ್ಯಾಂಡೇಜಿನ ಸಹಾಯದಿಂದ ಆ ವಿನೆಗರ್ ಅದ್ದಿದ ಹತ್ತಿಉಂಡೆಯನ್ನು ರಾತ್ರಿಯಿಡೀ ಆ ಭಾಗದಲ್ಲಿ ಇರಿಸಿ. ಬೆಳಗ್ಗೆ ಸೋಂಕು ಇರುವ ಭಾಗವನ್ನು ನೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ. ಅತ್ಯುತ್ತಮ ಫಲಿತಾಂಶ ಅಥವಾ ಶೀಘ್ರ ಉಪಶಮನಕ್ಕಾಗಿ ಇದನ್ನು ಬೆಳಗ್ಗಿನ ವೇಳೆಮಾಡಬಹುದು.
undefined
ಬೆಳ್ಳುಳ್ಳಿಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿಮೂಲಕವೂ ತುರಿಕೆ ಕಜ್ಜಿಗಳಿಗೆ ಮನೆಮದ್ದನ್ನು ತಯಾರಿಸಬಹುದು. ಅದಕ್ಕೆ ಹೀಗೆ ಮಾಡಿ. ನಾಲ್ಕರಿಂದ ಐದರಷ್ಟು ಬೆಳ್ಳುಳ್ಳಿ ಎಸಳನ್ನುಚೆನ್ನಾಗಿ ಜಜ್ಜಿ. ಈಗ 100 ಮಿಲಿ ಲೀಟರ್ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ. ಜಜ್ಜಿದ ಬೆಳ್ಳುಳ್ಳಿಯನ್ನು ಅದಕ್ಕೆ ಸೇರಿಸಿ. 4 ನಿಮಿಷಗಳವರೆಗೆ ಬಿಸಿಯಾಗಲು ಬಿಡಿ. ಬಳಿಕ ಬೆಂಕಿಯಿಂದ ಎಣ್ಣೆಯನ್ನು ಕೆಳಗಿಳಿಸಿ ಮತ್ತು ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ ಆ ಎಣ್ಣೆಯನ್ನು ಚೆನ್ನಾಗಿ ಸೋಸಿ.
undefined
ಬಳಿಕ ಈ ಎಣ್ಣೆಯನ್ನು ಸೋಂಕು ತಗುಲಿರುವ ಭಾಗಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಸುಮಾರು 30 ನಿಮಿಷಗಳು ಕಳೆದ ಬಳಿಕ ಆ ಭಾಗವನ್ನು ಚೆನ್ನಾಗಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ದಿನದಲ್ಲಿ ಮೂರು ಬಾರಿ ಪುನರಾವರ್ತಿಸಬಹುದು. ಬೆಳ್ಳುಳ್ಳಿಯು ಅಜೋಯಿನ್ ಮತ್ತು ಆಲಿಸಿನ್ ಎನ್ನುವಂತಹ ಬಯೋ ಆಕ್ಟಿವ್ ಅಂಶಗಳನ್ನು ಹೊಂದಿದ್ದು, ಇದು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ರಿಂಗ್ ವರ್ಮ್‌ನಂಥಸಮಸ್ಯೆಗಳಿಂದ ಇದು ಶೀಘ್ರ ಉಪಶಮನ ನೀಡುತ್ತದೆ.
undefined
ಬೇವಿನ ಎಲೆಗಳುಈ ಶಿಲೀಂಧ್ರಗಳ ಮೂಲಕ ಕಾಣಿಸಿಕೊಳ್ಳುವ ಸೋಂಕನ್ನು ಬೇವಿನ ಎಲೆಗಳ ಮೂಲಕವೂ ಬಗೆಹರಿಸಿಕೊಳ್ಳಬಹುದು. ಬೇವು ಸಾಮಾನ್ಯವಾಗಿ ಭಾರತ ದೇಶದ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜೊತೆಗೆ ಈ ಮರವು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಬೇವಿನ ಎಲೆಗಳು ಶಿಲೀಂಧ್ರ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಆ ಮೂಲಕ ತುರಿಕೆಯ ಸಮಸ್ಯೆಗಳಿಂದ ಕ್ಷಿಪ್ರ ಉಪಶಮನ ನೀಡುತ್ತದೆ, ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳಿಂದ ಮನೆಮದ್ದನ್ನು ಈ ರೀತಿಯಾಗಿ ತಯಾರಿಸಬಹುದು.
undefined
ಕೈಯ ಮುಷ್ಠಿ ತುಂಬಾ ಬೇವಿನ ಎಲೆಗಳನ್ನು ತೆಗೆದುಕೊಳ್ಳಿ. ಅವುಗಳನ್ನು 2 ಲೀಟರ್ ನೀರಿಗೆ ಹಾಕಿ, ಆ 2 ಲೀಟರ್ ನೀರು ಅರ್ಧದಷ್ಟಾಗುವವರೆಗೆ ಅದನ್ನು ಕುದಿಸಿ. ಬಳಿಕ ಬೆಂಕಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ ಮತ್ತು ಚೆನ್ನಾಗಿ ಸೋಸಿ. ಬಳಿಕ ಈ ನೀರಿಗೆ ಹತ್ತಿಯ ಉಂಡೆಯನ್ನು ಅದ್ದಿ, ಸಮಸ್ಯೆ ಇರುವ ಭಾಗಕ್ಕೆ ಹಚ್ಚಿ. ದಿನದಲ್ಲಿ ಒಂದೆರಡು ಬಾರಿ ಈ ರೀತಿ ಮಾಡಿ. ಈ ನೀರನ್ನು ಪ್ರತೀದಿನ ಹೊಸತಾಗಿ ತಯಾರಿಸಿದರೆ ಉತ್ತಮ. ಅದು ಸಾಧ್ಯವಿಲ್ಲದೇ ಇದ್ದರೆ, ಪರ್ಯಾಯವಾಗಿ ಫ್ರಿಡ್ಜ್ನಲ್ಲಿ ಇರಿಸಿಯೂ ಮರುಬಳಕೆ ಮಾಡಬಹುದು. ಆದರೆ ಅವುಗಳನ್ನು 72 ಗಂಟೆಗೂ ಅಧಿಕ ಕಾಲ ಫಿಡ್ಜ್ನಲ್ಲಿ ಇರಿಸಿ ಬಳಕೆ ಮಾಡಬೇಡಿ. ಈ ಬಗ್ಗೆ ಎಚ್ಚರವಾಗಿರಿ.
undefined
ಟೀ ಟ್ರೀ ಆಯಿಲ್ಶಿಲೀಂಧ್ರಕಾರಕ ಸೋಂಕುಗಳಿಂದ ರಕ್ಷಣೆ ಪಡೆಯಲು ಟೀ ಟ್ರೀ ಆಯಿಲ್ ಕೂಡ ಒಂದು ಅತ್ಯುತ್ತಮ ಆಯ್ಕೆ. ಈ ಟೀ ಟ್ರೀ ಆಯಿಲ್ ಆಂಟಿ ಮೈಕ್ರೋಬಿಯಲ್ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ವಿಪರೀತ ತುರಿಕೆಯಿಂದ ಶೀಘ್ರ ಉಪಶಮನವನ್ನು ಒದಗಿಸುತ್ತದೆ. ಟೀ ಟ್ರೀ ಆಯಿಲ್ ಮೂಲಕ ಮನೆಮದ್ದು ತಯಾರಿಸುವುದು ಬಹಳಷ್ಟು ಸುಲಭ. ಇದಕ್ಕಾಗಿ ಬೇಕಿರುವುದು ಕೆಲವು ಹನಿಗಳಷ್ಟು ಟೀ ಟ್ರೀ ಆಯಿಲ್ ಮತ್ತು ಸ್ವಲ್ಪ ಬಿಸಿಯಾದ ನೀರು.
undefined
ಈ ಎಣ್ಣೆಯನ್ನು ಬಿಸಿನೀರಿಗೆ ಸೇರಿಸಿ ಮತ್ತು ಹತ್ತಿಯ ಉಂಡೆಯ ಮೂಲಕ ಕಜ್ಜಿಗಳ ಮೇಲೆ ಹಚ್ಚಿರಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಬಳಿಕ ಚೆನ್ನಾಗಿ ನೀರಿನಿಂದ ತೊಳೆದು ಒಣಗಲು ಬಿಡಿ. ದಿನದಲ್ಲಿ 2ರಿಂದ 3 ಬಾರಿ ಇದನ್ನು ಮಾಡಿ ಮತ್ತು ಇದರ ಅದ್ಭುತ ಫಲಿತಾಂಶದಿಂದ ನಿಜಕ್ಕೂ ಅಚ್ಚರಿಗೊಳ್ಳುವಿರಿ.
undefined
ತೆಂಗಿನ ಎಣ್ಣೆಶಿಲೀಂಧ್ರಕಾರಕ ಸೋಂಕುಗಳ ವಿರುದ್ಧ ಹೋರಾಡಲು ತೆಂಗಿನೆಣ್ಣೆಯೂ ಬಹಳಷ್ಟು ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯು ಲಾರಿಕ್ ಆಸಿಡ್ ಹೊಂದಿದ್ದು, ಇದು ಶಿಲೀಂಧ್ರ ನಿರೋಧಕ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ರಿಂಗ್ವರ್ಮ್ ಇತ್ಯಾದಿ ಸಮಸ್ಯೆಗಳಿಂದ ಕಾಣಿಸಿಕೊಂಡ ತುರಿಕೆ ಮತ್ತು ತೊಂದರೆಗಳಿಂದ ಶೀಘ್ರ ಪರಿಹಾರವನ್ನು ಒದಗಿಸುತ್ತದೆ. ಆದರೆ ಇದಕ್ಕೆ ಪರಿಶುದ್ಧವಾದ ತೆಂಗಿನ ಎಣ್ಣೆಯನ್ನು ಬಳಸುವುದು ಅತ್ಯವಶ್ಯಕ. ತೆಂಗಿನೆಣ್ಣೆಯ ಮನೆಮದ್ದು ಕೂಡ ಸರಳ.
undefined
ಒಂದು ಟೀಸ್ಪೂನ್ ಪರಿಶುದ್ಧವಾದ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿರುವ ದೇಹದ ಭಾಗಕ್ಕೆ ನೇರವಾಗಿ ಹಚ್ಚಿ. ದಿನಕ್ಕೆರಡು ಬಾರಿಯಂತೆ ಇದನ್ನು ಮಾಡುವ ಮೂಲಕ ಕ್ಷಿಪ್ರವಾಗಿ ಪರಿಹಾರವನ್ನು ಪಡೆಯಬಹುದು. ಇದು ಅತ್ಯಂತ ಸರಳವಾದ ಮನೆಮದ್ದು ಆದರೆ ಬಹಳಷ್ಟು ಪರಿಣಾಮಕಾರಿಯಾಗಿದೆ.
undefined
click me!