ಹೊರಗಡೆ ಸಿಗುವ ಕೆಮಿಕಲ್ ಯುಕ್ತ ಔಷಧಿಗಳಿಗಿಂತ ಅಡುಗೆ ಮನೆಯಲ್ಲಿ ರೋಗ ನಿರೋಧಕ ಶಕ್ತಿಯಿಂದ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ವಿಷಯಗಳಿವೆ. ಇದು ವರ್ಷಗಳಿಂದ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ, ಆದ್ದರಿಂದ ನಮ್ಮ ಅಜ್ಜಿ ನಮ್ಮನ್ನು ಬಲಪಡಿಸಲು ಮನೆಯಲ್ಲಿಯೇ ಸಿಗುವ ಸಣ್ಣ ಸಣ್ಣ ವಸ್ತುಗಳನ್ನೇ ಬಳಸಿದ್ದರು. ನೀವು ಈ ಔಷಧಿಗಳನ್ನು ಗಡಿಬಿಡಿಯ ಈ ಜಗತ್ತಿನಲ್ಲಿ ಮರೆತಿದ್ದರೆ, ನೀವು ನೆನಪಿಟ್ಟು ಕೊಳ್ಳಬೇಕಾದ ಅಜ್ಜಿಯ 4 ಸಲಹೆಗಳನ್ನು ಇಂದು ನೆನಪು ಮಾಡಿಕೊಳ್ಳಿ.
ಲವಂಗ
ಲವಂಗವು ಯಾವಾಗಲೂ ಭಾರತೀಯ ಅಡುಗೆ ಮನೆಯಲ್ಲಿ ಬಹಳ ಅಗತ್ಯವಾದ ಪದಾರ್ಥ ಮತ್ತು ದೇಹಕ್ಕೆ ಬಹಳ ಮುಖ್ಯ. ಆಹಾರವನ್ನು ರುಚಿಕರವಾಗಿಸುತ್ತದೆ. ಲವಂಗ ಬ್ಯಾಕ್ಟೀರಿಯಾವನ್ನು ತೊಡೆದು ಹಾಕಿ, ಹೊಟ್ಟೆ ಹುಣ್ಣುಗಳನ್ನು ಕಡಿಮೆ ಮಾಡಿ ಮೂಳೆಗಳನ್ನು ಬಲಪಡಿಸುತ್ತಿರುವುದರಿಂದ, ಬಾಲ್ಯದಲ್ಲಿ ಅಜ್ಜಿ ಲವಂಗದ ಪುಡಿಯನ್ನು ಮಾಡಿ ತುಪ್ಪ ಅಥವಾ ಜೇನುತುಪ್ಪವನ್ನು ತಿನ್ನಿಸುತ್ತಿದ್ದರು.
ನೀವು ಆಮ್ಲೀಯತೆಯಿಂದ, ಗ್ಯಾಸ್ಟ್ರಿಕ್ ಅಥವಾ ಹುಳಿ ತೇಗು ಮೊದಲಾದ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಗ ಆಹಾರ ಸೇವನೆ ಮಾಡಿದ ನಂತರ ಲವಂಗದ ತುಂಡನ್ನು ಹೀರಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆಮ್ಲೀಯತೆಯಿಂದ ತಕ್ಷಣದ ಪರಿಹಾರ ಒದಗಿಸುತ್ತದೆ. ನೆಚ್ಚಿನ ಕರಿ, ಸಿಹಿತಿಂಡಿಗಳು ಮತ್ತು ಚಟ್ನಿಗಳಿಗೆ ಲವಂಗವನ್ನು ಸೇರಿಸಬಹುದು, ಇದರಿಂದ ದುಪ್ಪಟ್ಟು ಪ್ರಯೋಜನವನ್ನು ತೆಗೆದುಕೊಳ್ಳಬಹುದು.
ಶುದ್ಧ ಜೇನುತುಪ್ಪ
ಜೇನುತುಪ್ಪದ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ವಿಟಮಿನ್ಸ್ ಮತ್ತು ಫಿನೋಲಿಕ್ ಸಂಯುಕ್ತಗಳ ಪ್ರಮುಖ ಮೂಲ, ಉದಾಹರಣೆಗೆ ಫ್ಲೇವೊನಾಲ್ಸ್, ಫ್ಲೇವಾನ್ಸ್, ಬೆಂಜೋಯಿಕ್ ಆಮ್ಲಗಳು ಇದು ತುಂಬಾ ಉತ್ತಮ ಉತ್ಕರ್ಷಣ ನಿರೋಧಕ. ಇದು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ವಿವಿಧ ಸೋಂಕುಗಳ ವಿರುದ್ಧ ಹೋರಾಡುತ್ತದೆ.
ಅಜ್ಜಿಯ ಹಳೆಯ ರೆಸಿಪಿ ಇದೆ, ಇದರಲ್ಲಿ ಎರಡು ಟೀ ಚಮಚ ಈರುಳ್ಳಿ ರಸ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಈ ಮಿಶ್ರಣವನ್ನು ಕೆಲವು ದಿನಗಳವರೆಗೆ ತೆಗೆದು ಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ದಿನದ ಸರಿಯಾದ ಆರಂಭವನ್ನು ಮಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪಾನೀಯಗಳಾಗಿ ಜೇನುತುಪ್ಪ, ಅರಿಶಿನ, ನಿಂಬೆ ಮತ್ತು ಬಿಸಿ ನೀರನ್ನು ಜೊತೆಯಾಗಿ ಬೆರೆಸಿ ಸೇವಿಸಬೇಕು.
ಕೋಲ್ಡ್ ಪ್ರೆಸ್ಡ್ ವರ್ಜಿನ್ ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ತಿನ್ನುವುದು ಚರ್ಮ ಮತ್ತು ಕೂದಲಿಗೆ ವರದಾನ. ಆಗಾಗ್ಗೆ ನಾವು ಅಜ್ಜಿಯ ಉದ್ದವಾದ ಮತ್ತು ಬಲವಾದ ಕೂದಲನ್ನು ನೋಡಿದಾಗ ಇದು ಹೇಗೆ ಬಂತು ಎಂದು ಅಚ್ಚರಿ ಪಡುತ್ತೇವೆ. ಹಿರಿಯರ ಕೂದಲು ಮತ್ತು ಚರ್ಮದ ರಹಸ್ಯವೆಂದರೆ ತೆಂಗಿನ ಎಣ್ಣೆ. ಇತ್ತೀಚಿನ ದಿನಗಳಲ್ಲಿ, ತಣ್ಣನೆಯ ವರ್ಜಿನ್ ತೆಂಗಿನ ಎಣ್ಣೆ ಮಾರುಕಟ್ಟೆಯಲ್ಲಿ ಲಭ್ಯವಿದೆ, ಇದು ತೆಂಗಿನ ಎಣ್ಣೆಯ ಶುದ್ಧ ರೂಪ. ನಮ್ಮ ಅಜ್ಜಿ ಶತಮಾನಗಳಷ್ಟು ಹಳೆಯ ತಂತ್ರಗಳನ್ನು ಹೊಂದಿದ್ದಾರೆ, ಅದು ಇಂದಿಗೂ ಪ್ರಯೋಜನಕಾರಿ.
ಒಂದು ಸಮ ಪ್ರಮಾಣದಲ್ಲಿ ತೆಂಗಿನೆಣ್ಣೆ ಮತ್ತು ಈರುಳ್ಳಿ ರಸ ತೆಗೆದುಕೊಂಡು ಕೂದಲಿಗೆ ಹಚ್ಚಿಕೊಳ್ಳುವುದು. ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ ಮತ್ತು ಶಾಂಪೂವಿನಿಂದ ತೊಳೆಯಿರಿ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ, ಉತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕೂದಲಿಗೆ ಉತ್ತಮ ಹೊಳಪನ್ನು ನೀಡುತ್ತದೆ. ತೆಂಗಿನ ಎಣ್ಣೆ ಉತ್ತಮ ಮೇಕಪ್ ರಿಮೂವರ್ ಮತ್ತು ಟ್ಯಾನಿಂಗ್ ತೆಗೆಯುವಿಕೆಯಾಗಿಯೂ ಕೆಲಸ ಮಾಡುತ್ತದೆ.
ಶುಂಠಿ-ದಾಲ್ಚಿನ್ನಿ-ತುಳಸಿ ಬ್ರೂ
ಕೊರೋನಾ ವೈರಸ್ ಜಗತ್ತನ್ನೇ ಭಾಧಿಸುವ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಹೆಚ್ಚಿಸಲು ಒತ್ತು ನೀಡಲಾಗಿದೆ. ಈ ಕಷಾಯ ನಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ, ದಾಲ್ಚಿನ್ನಿ ಮತ್ತು ತುಳಸಿಯಲ್ಲಿ ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳಿವೆ, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಅಜ್ಜಿಯ ರೆಸಿಪಿ ಪ್ರಕಾರ- 2 ಲೋಟ ನೀರಿಗೆ 7-8 ತುಳಸಿ ಎಲೆಗಳು, 1/2 ಇಂಚು ತುರಿದ ಶುಂಠಿ ಮತ್ತು 2 ಚಿಟಿಕೆ ದಾಲ್ಚಿನ್ನಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈಗ ಅರ್ಧ ನಿಂಬೆ ಹಣ್ಣನ್ನು ಅದರೊಳಗೆ ಹಿಂಡಿ. ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿಯುವುದರಿಂದ ಆಯಾಸ, ತೂಕ ಇಳಿಕೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದಿನವಿಡೀ ಎನರ್ಜಿಟಿಕ್ ಆಗಿರಲು ಸಹಾಯವಾಗುತ್ತದೆ.