ಟೋಕಿಯೋ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಡಯಟ್ ಪ್ಲ್ಯಾನ್ ಇದು!

First Published | Sep 2, 2021, 3:20 PM IST

ಆಟಗಾರರ ಜೀವನವು ಹೋರಾಟಗಳಿಂದ ತುಂಬಿರುತ್ತದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಆಟಗಾರನ ಕಠಿಣ ಪರಿಶ್ರಮದ ಫಲ. ಭಾರತದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆದರೆ ಕ್ರೀಡಾಪಟುವಿನ ಜೀವನ ಎಷ್ಟು ಕಷ್ಟ ಎಂದು ನಿಮಗೆ ತಿಳಿದಿದೆಯೇ? ತಮ್ಮ ನೆಚ್ಚಿನ ಆಹಾರವನ್ನು ತ್ಯಜಿಸುವುದರಿಂದ ಹಿಡಿದು, ಕಟ್ಟುನಿಟ್ಟಾದ ಆಹಾರ ಕ್ರಮ ಅನುಸರಿಸುವವರೆಗೂ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಯಾವೆಲ್ಲಾ ಆಹಾರಗಳನ್ನು ಸೇವಿಸುತ್ತಾರೆ ಎನ್ನುವ ಕುರಿತಾದ ಮಾಹಿತಿಗಳು ಇಲ್ಲಿವೆ...

ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ  ನೀರಜ್ ಚೋಪ್ರಾ ತಮ್ಮ ಆಹಾರದಲ್ಲಿ ಪ್ರತಿದಿನ 3,000 ರಿಂದ 3,500 ಕ್ಯಾಲೊರಿಗಳನ್ನು ಸೇವಿಸಬೇಕು. ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್ಸ್ ಸಹ ಉತ್ತಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಮಸಲ್ಸ್ ಬಿಲ್ಡ್ ಮಾಡಲು ಪ್ರೋಟೀನ್ ಅತ್ಯಗತ್ಯ. ನೀರಜ್ ಈ ಎಲ್ಲಾ ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ.
 

ನೀರಜ್ ಚೋಪ್ರಾ ಎಷ್ಟೊಂದು ಫಿಟ್ ಆಗಿರುತ್ತಾರೆ ಅನ್ನೋದು ನಿಮಗೆ ಗೊತ್ತೆ ಇದೆ. ತಮ್ಮ ಫಿಟ್ನೆಸ್ ಮತ್ತು ಆಹಾರಕ್ರಮಗಳಿಗೆ ವಿಶೇಷ ಗಮನ ನೀಡುತ್ತಾರೆ. ಅವರ ದಿನವು ಆರೋಗ್ಯಕರ ಉಪಾಹಾರದೊಂದಿಗೆ ಪ್ರಾರಂಭವಾಗುತ್ತದೆ, ಅದರಲ್ಲಿ ನೀರಜ್ ಬ್ರೌನ್ ಬ್ರೆಡ್ ಮತ್ತು ಆಮ್ಲೆಟ್ ತೆಗೆದುಕೊಳ್ಳುತ್ತಾನೆ. ಇವೆರಡು ಆರೋಗ್ಯಕರ ಉಪಹಾರ.

Tap to resize

ಇನ್ನು ಚಿನ್ನದ ಹುಡುಗ ನೀರಜ್ ಚೋಪ್ರಾ ಕೊಬ್ಬು ರಹಿತ ಆಹಾರ ತಿನ್ನಲು ಇಷ್ಟ ಪಡುತ್ತಾರೆ, ಆದ್ದರಿಂದ ಅವರು ಹೆಚ್ಚಾಗಿ ಸಲಾಡ್ಸ್ ಮತ್ತು ಹಣ್ಣುಗಳನ್ನು ತಿನ್ನುತ್ತಾರೆ, ಇದರಿಂದ ದೇಹವು ಶಕ್ತಿಯನ್ನು ಉಳಿಸಿಕೊಳ್ಳುತ್ತದೆ. ಹಸಿವಾದಾಗ ಮತ್ತು ಅಭ್ಯಾಸದ ಮಧ್ಯದಲ್ಲಿ ತಾಜಾ ಹಣ್ಣಿನ ರಸ ಕುಡಿಯೋ ಅಭ್ಯಾಸ ನೀರಜ್‌ಗಿದೆ.

ನೀರಜ್ ಊಟದ ವಿಷಯಕ್ಕೆ ಬಂದಾಗ, ಗ್ರಿಲ್ಡ್ ಚಿಕನ್ ಬ್ರೆಸ್ಟ್, ಗ್ರಿಲ್ ಸಲ್ಮಾನ್ ಮೀನು ಮತ್ತು ಮೊಟ್ಟೆಗಳನ್ನು ಸೇವಿಸುತ್ತಾರೆ. ಆದಾಗ್ಯೂ, ಅವರು ಮೊಟ್ಟೆಗಳ ಆಮ್ಲೆಟ್ಸ್ ತಿನ್ನಲು ಇಷ್ಟಪಡುತ್ತಾರೆ. ಬೇಯಿಸಿದ ಮೊಟ್ಟೆಯನ್ನೂ ತಿನ್ನುತ್ತಾರೆ. ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಮತ್ತು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. 

ನೀರಜ್ ಚೋಪ್ರಾ ಅವರ ನೆಚ್ಚಿನ ಭಕ್ಷ್ಯದ ವಿಷಯಕ್ಕೆ ಬಂದಾಗ, ಅವರು ತರಕಾರಿ ಬಿರಿಯಾನಿ, ಪಾನಿ ಪುರಿ ಮತ್ತು ಮನೆಯಲ್ಲಿ ತಯಾರಿಸಿದ ಚುರ್ಮಾವನ್ನು ಇಷ್ಟ ಪಡುತ್ತಾರೆ, ಆದರೆ ದೈನಂದಿನ ದಿನಚರಿಯಲ್ಲಿ ಅವರು ಸಿಹಿ ತಿಂಡಿಗಳನ್ನು ತಪ್ಪಿಸುತ್ತಾರೆ. ಆದರೂ, ತಮ್ಮ ಚೀಟ್ ಡೇ ದಿನದಂದು ಅವನು ಈ ವಸ್ತುಗಳನ್ನು ಆನಂದದಿಂದ ತಿನ್ನುತ್ತಾರೆ.


ಫಿಟ್ ಮತ್ತು ಎನರ್ಜಿಟಿಕ್ ಆಗಿರಲು ನೀರಜ್ ಚೋಪ್ರಾ ಕೇವಲ ಆರೋಗ್ಯಕರ ಆಹಾರವನ್ನು ಸೇವಿಸುವುದು ಮಾತ್ರವಲ್ಲ. ಅದರ ಜೊತೆ ಜೊತೆಗೆ, ಅವರು ಓಡುವುದು, ಮನೆಯ ಮೆಟ್ಟಿಲುಗಳನ್ನು ಹತ್ತುವುದು, ಇಳಿಯುವುದು ಮತ್ತು ಶಕ್ತಿ ತರಬೇತಿಯ ಜೊತೆಗೆ ತೂಕ ಎತ್ತುವುದು ಸೇರಿದಂತೆ ಹಾರ್ಡ್ ಕೋರ್ ತಾಲೀಮುಗಳನ್ನು ಸಹ ಮಾಡುತ್ತಾರೆ.
 

Latest Videos

click me!