ನಿಮ್ಮ ಕೈ, ಮಣಿಕಟ್ಟು ಸ್ಟ್ರಾಂಗ್ ಆಗಬೇಕೆ? ಹಾಗಿದ್ರೆ ಈ ಯೋಗ ಪ್ರತಿದಿನವೂ ಮಾಡಿ

Published : Feb 01, 2024, 05:38 PM IST

ಯೋಗಾಸನ ಮಾಡೋದು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಒಳ್ಳೆಯದು. ಇದು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತೆ, ಜೊತೆಗೆ ಫಿಟ್ (Fit) ಆಗಿಯೂ ಇರಿಸುತ್ತೆ. ನಿಮ್ಮ ಕೈ, ಮಣಿಕಟ್ಟು ಸ್ಟ್ರಾಂಗ್ ಆಗಿರಬೇಕು ಎಂದು ನೀವು ಬಯಸಿದ್ರೆ ನೀವು ಇದನ್ನ ಟ್ರೈ ಮಾಡಲೇಬೇಕು.   

PREV
18
ನಿಮ್ಮ ಕೈ, ಮಣಿಕಟ್ಟು ಸ್ಟ್ರಾಂಗ್ ಆಗಬೇಕೆ? ಹಾಗಿದ್ರೆ ಈ ಯೋಗ ಪ್ರತಿದಿನವೂ ಮಾಡಿ

ಅಧೋ ಮುಖ ಸ್ವನಾಸನ : 
ಈ ಯೋಗಾಸನ ನಿಮ್ಮ ಮುಂಗೈಗಳು ಮತ್ತು ಮಣಿಕಟ್ಟುಗಳ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ, ಅವುಗಳ ಸಹಿಷ್ಣುತೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಏಕಕಾಲದಲ್ಲಿ ನಿಮ್ಮ ಕೈ ಮತ್ತು ಮಣಿಕಟ್ಟು ಆಕ್ಟೀವ್ ಆಗಿರುವಂತೆ ನೋಡಿಕೊಳ್ಳುತ್ತೆ. 

28

ಫಲಕಾಸನ
ಫಲಕಾಸನ ನಿಮ್ಮ ತೋಳುಗಳ ಮೇಲೆ ಇಡೀ ದೇಹವನ್ನು ಬ್ಯಾಲೆನ್ಸ್  (body balance) ಮಾಡುತ್ತದೆ, ಇದು ತೋಳುಗಳನ್ನು ಬಲಪಡಿಸಲು ಮತ್ತು ಟೋನಿಂಗ್ ಮಾಡಲು ಸಹಾಯ ಮಾಡುತ್ತದೆ. 

38

ಚತುರಂಗ ದಂಡಾಸನ
ಈ ಭಂಗಿಯು ನಿಮ್ಮ ತೋಳುಗಳನ್ನು ಬಗ್ಗಿಸುವುದನ್ನು ಒಳಗೊಂಡಿರುತ್ತದೆ, ಜೊತೆಗೆ ನಿಮ್ಮ ದೇಹವನ್ನು ಎಲ್ಲಾ ನಾಲ್ಕು ಬದಿಗಳಲ್ಲಿ ಬ್ಯಾಲೆನ್ಸ್ ಮಾಡುತ್ತದೆ. ಇದು ಭುಜಗಳು, ತೋಳುಗಳು ಮತ್ತು ಮಸಲ್ಸ್ ಬಲಪಡಿಸಲು ಸಹಾಯ ಮಾಡುತ್ತದೆ.

48

ವಸಿಷ್ಠಾಸನ
ದೇಹವನ್ನು ಒಂದು ತೋಳಿನ ಮೇಲೆ ಪರ್ಯಾಯವಾಗಿ ಬ್ಯಾಲೆನ್ಸ್  ಮಾಡುವ ಮೂಲಕ ಈ ಯೋಗಾಸನ (yogasan) ಮಾಡಲಾಗುತ್ತದೆ, ಇನ್ನೊಂದು ತೋಳನ್ನು ನೇರವಾಗಿ ಛಾವಣಿಯ ಕಡೆಗೆ ಚಾಚುವುದರಿಂದ, ಮಣಿಕಟ್ಟು ಮತ್ತು ಮುಂಗೈಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. 

58

ಉರ್ಧ್ವ ಮುಖ ಶ್ವಾನಾಸನ 
ಈ ಯೋಗಾಸನ ಮಾಡುವಾಗ ಎದೆ ಅಗಲವಾಗುತ್ತದೆ ಮತ್ತು ನಿಮ್ಮ ತೋಳುಗಳನ್ನು ನೇರ ಮತ್ತು ಗಟ್ಟಿಯಾಗಿ ಹಿಡಿದಿಡಲು ಸಹಾಯ ಮಾಡುತ್ತದೆ. ಇದು ತೋಳುಗಳಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

68

ಬಕಾಸನ 
ನಿಮ್ಮ ಸಮತೋಲನ ಮತ್ತು ಗಮನವನ್ನು ಹೆಚ್ಚಿಸುವುದರ ಹೊರತಾಗಿ, ಈ ಭಂಗಿಯು ನಿಮ್ಮ ತೋಳುಗಳು ಮತ್ತು ಮಣಿಕಟ್ಟುಗಳಲ್ಲಿ ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

78

ಉತ್ತಿತ ತ್ರಿಕೋನಾಸನ
ಈ ತ್ರಿಕೋನ ಭಂಗಿಯು ತೋಳುಗಳು, ಭುಜಗಳು ಮತ್ತು ಮಣಿಕಟ್ಟುಗಳನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ, ಜೊತೆಗೆ ಕೈಗಳಲ್ಲಿ ಬ್ಯಾಲೆನ್ಸ್ ಕಾಪಾಡಲು ಸಹಾಯ ಮಾಡುತ್ತದೆ. 

88

ಅರ್ಧ ಪಿಂಚ ಮಯೂರಾಸನ 
ಡಾಲ್ಫಿನ್ ಭಂಗಿಯಲ್ಲಿ ನಿಮ್ಮ ಮುಂಗೈಗಳನ್ನು ನೆಲಕ್ಕೆ ಒತ್ತಿ ನಿಮ್ಮ ತೋಳುಗಳನ್ನು ನೇರವಾಗಿರಿಸಬೇಕು, ಇದರಿಂದ ಕೈಗಳ ಶಕ್ತಿ ಮತ್ತು ನಮ್ಯತೆ ಹೆಚ್ಚಾಗುತ್ತದೆ. 
 

Read more Photos on
click me!

Recommended Stories