93 ರ ಹರೆಯದಲ್ಲೂ 40ರ ಫಿಟ್ನೆಸ್… ಈ ಎವರ್ ಗ್ರೀನ್ ತಾತನ ಫಿಟ್ನೆಸ್ ಗುಟ್ಟು ನೀವೂ ತಿಳಿಯಿರಿ

Published : Jan 30, 2024, 05:55 PM IST

93 ವರ್ಷದ ರಿಚರ್ಡ್ ಮೋರ್ಗನ್ ತಮ್ಮ ಫಿಟ್ನೆಸ್ ಮೂಲಕ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಅವರು ಕಳೆದ 20 ವರ್ಷಗಳಿಂದ ನಿಯಮಿತವಾಗಿ ವ್ಯಾಯಾಮ ಮಾಡ್ತಿದ್ದಾರೆ. ಅವರ ಫಿಟ್ನೆಸ್ ಹೇಗಿದೆಯೆಂದರೆ ಅವರು 40 ವರ್ಷದವರಂತೆ ಕಾಣುತ್ತಾರೆ ಮತ್ತು ಕೆಲಸ ಕೂಡ ಮಾಡುತ್ತಾರೆ.  

PREV
17
93 ರ ಹರೆಯದಲ್ಲೂ 40ರ ಫಿಟ್ನೆಸ್… ಈ ಎವರ್ ಗ್ರೀನ್ ತಾತನ ಫಿಟ್ನೆಸ್ ಗುಟ್ಟು ನೀವೂ ತಿಳಿಯಿರಿ

ಆರೋಗ್ಯವಾಗಿರಲು ವ್ಯಾಯಾಮ ಮಾಡೋದಕ್ಕೆ ಯಾವುದೇ ವಯಸ್ಸಿನ ಲಿಮಿಟ್ (age limit) ಇಲ್ಲ ಎಂದು ಹೇಳಲಾಗುತ್ತದೆ. ಆದ್ರೆ ಹೆಚ್ಚಿನ ಜನರು ಒಂದು ಹಂತದ ವಯಸ್ಸು ಕಳೆದ ಮೇಲೆ ವ್ಯಾಯಾಮ ಮಾಡೋದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ. ನೀವು ಹಾಗೆ ಅಂದು ಕೊಂಡಿದ್ರೆ, ಇಲ್ಲೊಬ್ರು ಅಜ್ಜ ಇದ್ದಾರೆ, ಅವರ ಸ್ಟೋರಿ ಕೇಳಿ. ಅವರ ಹೆಸರು ರಿಚರ್ಡ್ ಮೋರ್ಗನ್ (Richard Morgan), ವಯಸ್ಸು ಬರೋಬ್ಬರಿ 93.  ಈ ಐರಿಶ್ ವ್ಯಕ್ತಿ ಇಂದು ತನ್ನ ವಯಸ್ಸಿನ ಅರ್ಧದಷ್ಟು ಆರೋಗ್ಯವನ್ನು ಹೊಂದಿದ್ದಾನೆ ಮತ್ತು ಫಿಟ್ನೆಸ್ನಲ್ಲಿ ಹಿರಿಯರನ್ನು, ಕಿರಿಯರನ್ನು ಸಹ ಸೋಲಿಸುತ್ತಾರೆ.
 

27

ಹೌದು ನಾವು ಈಗ ಹೇಳ್ತಾ ಇರೋ ವ್ಯಕ್ತಿಯ ಫಿಟ್ನೆಸ್ (fitness) ನೋಡಿದ್ರೆ, ಅವರಿಗಿನ್ನೂ 40 ವರ್ಷ ಆಗಿದ್ದಷ್ಟೇ ಏನೋ ಅನಿಸುತ್ತೆ. ಈ ವ್ಯಕ್ತಿಯ ಆರೋಗ್ಯವು ಇಂದು ವಿಜ್ಞಾನಿಗಳು ಮತ್ತು ಫಿಟ್ನೆಸ್ ಗುರುಗಳಿಗೆ ಸಂಶೋಧನೆ ಮತ್ತು ಅಧ್ಯಯನದ ವಿಷಯವಾಗಿದೆ. ಮೋರ್ಗನ್ ಸ್ವತಃ ತಮ್ಮ ಆರೋಗ್ಯ ರಹಸ್ಯಗಳನ್ನು ಇಂದು ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 
 

37

ಮೋರ್ಗನ್ ಅವರ ಫಿಟ್ನೆಸ್ನ ಬಗ್ಗೆ ಕಳೆದ ತಿಂಗಳು ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟಿಸಲಾಯಿತು, ಇದು ಅವರ ತರಬೇತಿ, ಆಹಾರ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿತ್ತು. ನಿವೃತ್ತ ಬೇಕರ್ ಆಗಿರುವ ಮೋರ್ಗನ್ ನಾಲ್ಕು ಬಾರಿ ಇನ್ ಡೋರ್ ರೋಯಿಂಗ್ ವಿಶ್ವ ಚಾಂಪಿಯನ್ (world champion) ಆಗಿದ್ದಾರೆ.  ಅವರು 73 ನೇ ವಯಸ್ಸಿನಿಂದ ನಿಯಮಿತ ವ್ಯಾಯಾಮವನ್ನು ಪ್ರಾರಂಭಿಸಿದರು ಎಂದು ಸ್ವತಃ ಅವರೇ ಹೇಳುತ್ತಾರೆ.
 

47

ಮೋರ್ಗನ್ ಅವರೇನು ಯುವಕರಾಗಿರೋವಾಗ್ಲೇ ವ್ಯಾಯಾಮ ಮಾಡುತ್ತಿರಲಿಲ್ಲ.  ಅವರು ಫಿಟ್ ಆಗಿರಬೇಕೆಂದು ಬಯಸಿ ವ್ಯಾಯಾಮ ಆರಂಭಿಸಿದ್ದು, ತಮ್ಮ 73ನೇ ವಯಸ್ಸಿನಲ್ಲಿ. ಇದ್ದಕ್ಕಿದ್ದಂತೆ ವ್ಯಾಯಾಮ ಮಾಡುವ ಹೆಚ್ಚಿನ ಅಗತ್ಯವನ್ನು ಅನುಭವಿಸಿ ಮೋರ್ಗನ್ 70 ರ ಇಳಿವಯಸ್ಸಿನಲ್ಲಿ ವ್ಯಾಯಾಮ ಆರಂಭಿಸಿದರು. ಆ ಮೂಲಕ ಈ 93ರ ಹರೆಯದಲ್ಲೂ 40 ರ ಹರೆಯದ ಎನರ್ಜಿ ಫಿಟ್ನೆಸ್ ಹೊಂದಿದ್ದಾರೆ. 
 

57

ಮೋರ್ಗನ್ ಆರೋಗ್ಯವಾಗಿರಲು ಪ್ರಮುಖ ಕಾರಣವೆಂದರೆ ಅವರ ವ್ಯಾಯಾಮ ದಿನಚರಿ, ಜೊತೆಗೆ ಅವರ ನಾಲ್ಕು ಪಿಲ್ಲರ್ ಗಳು. ಅಂದರೆ ಅದಕ್ಕೆ ನಾಲ್ಕು ಆಧಾರಗಳು. ಮೊದಲನೆಯ ಆಧಾರವೆಂದರೆ ಕ್ರಮಬದ್ಧತೆ (Puntcuality). ಅವರು ಪ್ರತಿದಿನ 40 ನಿಮಿಷಗಳ ತಾಲೀಮು ಮಾಡುತ್ತಾರೆ. ಅವರ ಡೆಡಿಕೇಶನ್ (dedication) ಅವರಿಗೆ ಅಂತಹ ಉತ್ತಮ ಫಲಿತಾಂಶ ನೀಡಿದೆ ಎಂದು ಸಂಶೋಧಕರು ನಂಬುತ್ತಾರೆ.
 

67

ಮೋರ್ಗನ್ ಅವರ ದೈನಂದಿನ ತಾಲೀಮು ಯಾವಾಗಲೂ ಒಂದೇ ಆಗಿರುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ತೀವ್ರತೆಯಲ್ಲಿ ಬದಲಾವಣೆ ಇರುತ್ತದೆ. ಅವುಗಳಲ್ಲಿ 70 ಪ್ರತಿಶತ ಸುಲಭ, 20 ಪ್ರತಿಶತ ಕಷ್ಟ, ಆದರೆ ಕೇವಲ 10 ಪ್ರತಿಶತ ಮಾತ್ರ ತುಂಬಾ ಒತ್ತಡದ ವ್ಯಾಯಾಮ ಇರುತ್ತದೆ. ಇದು ಫಿಟ್ ಆಗಿರಲು ತುಂಬಾನೆ ಪ್ರಯೋಜನಕಾರಿಯಾಗಿದೆ. 
 

77

ಇದಲ್ಲದೆ, ತೂಕ ತರಬೇತಿಯು (weight training) ಮೋರ್ಗನ್ ಅವರ ವ್ಯಾಯಾಮ ವೇಳಾಪಟ್ಟಿಯ ಪ್ರಮುಖ ಭಾಗವಾಗಿದೆ, ಇದು ಸ್ನಾಯುಗಳ ಆರೋಗ್ಯದ ಜೊತೆಗೆ ಅವರ ಮಾನಸಿಕ ಆರೋಗ್ಯವನ್ನು (Mental Health) ಉತ್ತಮವಾಗಿರಿಸುತ್ತದೆ. ಹೆಚ್ಚಿನ ಪ್ರೋಟೀನ್ ಡೈನ್ ಅವರ ದೇಹದಲ್ಲಿ ಪೌಷ್ಠಿಕಾಂಶದ ಕೊರತೆಯನ್ನು ನಿವಾರಿಸುತ್ತದೆ. ಆ ಮೂಲಕ ಅವರು ಇಳಿವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. 
 

click me!

Recommended Stories