ಡಯಾಬಿಟಿಸ್ ಇದ್ದರೆ ಜೀವನ ಪೂರ್ತಿ ಎಚ್ಚರಿಕೆಯಿಂದ ಇರಬೇಕು. ಸರಿಯಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಕೆಲವು ಆಹಾರಗಳನ್ನು ತ್ಯಜಿಸುವುದು ಡಯಾಬಿಟಿಸ್ ನಿಯಂತ್ರಣಕ್ಕೆ ಬಹಳ ಮುಖ್ಯ.
ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ಕಾಯಿಲೆ ಬಹಳ ಜನರನ್ನು ಬಾಧಿಸುತ್ತಿದೆ. ಒಮ್ಮೆ ಡಯಾಬಿಟಿಸ್ ಬಂದರೆ ಜೀವನ ಪೂರ್ತಿ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಈ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಇನ್ನೂ ಹೆಚ್ಚಿನ ತೊಂದರೆಗಳು ಉಂಟಾಗಬಹುದು.
25
ಡಯಾಬಿಟಿಸ್ ಇದೆ ಎಂದು ತಿಳಿದ ತಕ್ಷಣ ನೀವು ಮೊದಲು ಗಮನ ಕೊಡಬೇಕಾದದ್ದು ನಿಮ್ಮ ಆಹಾರ ಕ್ರಮದ ಮೇಲೆ. ಈ ರೀತಿಯ ಕಾಯಿಲೆ ಇರುವವರು ಸರಿಯಾದ ಆಹಾರ ಸೇವಿಸುವುದು ಅಗತ್ಯ. ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು.
35
ಅದೇ ರೀತಿ ಡಯಾಬಿಟಿಸ್ ರೋಗಿಗಳು ನಿಯಮಿತವಾಗಿ ವ್ಯಾಯಾಮ ಮಾಡುವುದು ಅಗತ್ಯ. ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಪ್ರತಿದಿನ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಪ್ರತಿದಿನ ಕನಿಷ್ಠ 30 ನಿಮಿಷಗಳಾದರೂ ನಡೆಯುವುದು ಅಗತ್ಯ. ಇದರಿಂದ ದೇಹ ಆರೋಗ್ಯವಾಗಿರುತ್ತದೆ.
45
ಅದೇ ರೀತಿ ಈ ಕಾಯಿಲೆ ಇದ್ದರೆ ಕೆಲವು ಆಹಾರಗಳನ್ನು ನಿಮ್ಮ ಆಹಾರ ಪದ್ಧತಿಯಿಂದ ತೆಗೆದು ಹಾಕಿ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಕೆಲವು ಆಹಾರಗಳಿವೆ. ಏನೆಲ್ಲಾ ಎಂದು ತಿಳಿದುಕೊಳ್ಳಿ. ಮೊದಲು ಸಿಹಿ ಪದಾರ್ಥಗಳನ್ನು ತ್ಯಜಿಸಬೇಕು. ಸಿಹಿ ತಿಂಡಿಗಳನ್ನು ಮುಟ್ಟಲೇಬಾರದು. ಕೇಕ್, ಪೇಸ್ಟ್ರಿ ಅಥವಾ ಸಕ್ಕರೆಯಿಂದ ತಯಾರಿಸಿದ ಯಾವುದೇ ಆಹಾರವನ್ನು ಸೇವಿಸಬಾರದು. ಅದೇ ರೀತಿ ಸಕ್ಕರೆ ಸೇವನೆಯನ್ನು ನಿಲ್ಲಿಸಿ. ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ.
55
ಮೈದಾ ಹಿಟ್ಟನ್ನು ಸೇವಿಸುವುದು ಈ ರೀತಿಯ ಕಾಯಿಲೆ ಇರುವವರಿಗೆ ತುಂಬಾ ಹಾನಿಕಾರಕ. ಸಮೋಸಾ, ಬೋಂಡಾ, ಪರೋಟದಿಂದ ಹಿಡುದು ಪಾಸ್ತಾ, ಪಿಜ್ಜಾ ತಿನ್ನದಿರುವುದೇ ಒಳ್ಳೆಯದು. ಕೋಲ್ಡ್ ಡ್ರಿಂಕ್ಸ್ ಅನ್ನು ಸಂಪೂರ್ಣವಾಗಿ ತ್ಯಜಿಸಿ. ಯಾವುದೇ ರೀತಿಯ ಕೋಲ್ಡ್ ಡ್ರಿಂಕ್ಸ್ ಕುಡಿಯಬೇಡಿ. ಅಥವಾ ಯಾವುದೇ ಸಿಹಿ ಪಾನೀಯಗಳನ್ನು ಕುಡಿಯುವುದು ಹಾನಿಕಾರಕ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.