ಆಯಿಲಿ ತ್ವಚೆ ಬಹಳಷ್ಟು ಜನರ ಸಮಸ್ಯೆ. ಮುಖ ಆಗಷ್ಟೇ ತೊಳೆದು ಬಂದಿದ್ದರೂ ಮತ್ತೆ ಜಿಡ್ಡಾಗುತ್ತೆ ಮುಖ. ಇದಕ್ಕೆ ಔಷಧ ಹುಡುಕೋ ಮುನ್ನ ನಿಮ್ಮ ಆಹಾರದಲ್ಲಿಯೇ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಅಗತ್ಯ.
ನಮ್ಮ ಮುಖ ಜಿಡ್ಡಾಗುವುದಕ್ಕೆ ನಾವು ತಿನ್ನುವ ಆಹಾರವೂ ಒಂದು ಕಾರಣ. ಹಾಗಾಗಿ ಕೆಲವೊಂದು ಆಹಾರ ಪದಾರ್ಥಗಳನ್ನು ದೂರವಿಟ್ಟರೆ ಮುಖದಿಂದ ಜಿಡ್ಡಿನಂಶ ದೂರ ಮಾಡಬಹುದು. ಎಣ್ಣೆಯಂಶ ಇರೋ ತ್ವಚೆಗೇನು ಕಾರಣ..? ಇಲ್ಲಿ ನೋಡಿ.
ಜೆನೆಟಿಕ್ಸ್: ಆನುವಂಶಿಕ ಕಾರಣಗಳಿಂದಾಗಿ ನಿಮ್ಮ ತ್ವಚೆ ಎಣ್ಣೆಯುಕ್ತವಾಗಿರಬಹುದು. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಜಿಡ್ಡಿನಂಶದ ಚರ್ಮವಿದ್ದರೆ ನಿಮಗೂ ಹಾಗೆಯೇ ಆಗಬಹುದು.
ಪ್ರೌಢಾವಸ್ಥೆ: ಪ್ರೌಢಾವಸ್ಥೆಯ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಎಣ್ಣೆಯುಕ್ತ ಮತ್ತು ಜಿಡ್ಡಿನ ಚರ್ಮಕ್ಕೆ ಕಾರಣವಾಗಬಹುದು. ಇದರಿಂದಾಗಿಯೇ ಮೊಡವೆಗಳು ಕಾಣಿಸಿಕೊಳ್ಳುತ್ತವೆ.
ಋತುಸ್ರಾವ: ಮಹಿಳೆಯರ ತ್ವಚೆ ಋತುಸ್ರಾವದ ಸಂದರ್ಭ ಎಣ್ಣೆಯುಕ್ತವಾಗುತ್ತದೆ. ಇದು ಹಾರ್ಮೋನುಗಳ ಬದಲಾವಣೆಯಿಂದಲೂ ಆಗಿರಬಹುದು.
ಬೆವರು: ನೀವು ಸಾಕಷ್ಟು ಬೆವರುತ್ತಿದ್ದರೆ ನಿಮ್ಮ ಚರ್ಮದಲ್ಲಿ ಹೆಚ್ಚು ಆಯಿಲ್ ಕಂಡು ಬರುತ್ತದೆ.
ಜನನ ನಿಯಂತ್ರಣ: ಮಾತ್ರೆ ಸೇವಿಸುವ ಅನೇಕ ಮಹಿಳೆಯರ ತ್ವಚೆ ಮೇಲೆ ಹೆಚ್ಚು ಎಣ್ಣೆ ಅಂಶ ಕಂಡುಬರುತ್ತದೆ.
ಜೀವನಶೈಲಿ: ನಿಯಮಿತ ವ್ಯಾಯಾಮ ಮತ್ತು ಅಸಮರ್ಪಕ ಆಹಾರದಿಂದ ನಿಧಾನವಾಗಿ ಚರ್ಮವು ಎಣ್ಣೆಯುಕ್ತವಾಗುತ್ತದೆ.
ನೀರಿನ ಕೊರತೆ : ನೀವು ಹೆಚ್ಚು ನೀರು ಕುಡಿಯದಿದ್ದರೆ ನಿಮ್ಮ ಚರ್ಮವು ಜಿಡ್ಡಿನಿಂದ ಮತ್ತು ಎಣ್ಣೆಯುಕ್ತವಾಗಿ ಬದಲಾಗುತ್ತದೆ.
ಕರಿದ ಆಹಾರ: ಕರಿದ ಆಹಾರ ಪದಾರ್ಥಗಳು ನಿಮ್ಮ ತ್ವಚೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹೊರಗಿನ ಕರಿದ ಪದಾರ್ಥಗಳನ್ನು ಅವಾಯ್ಡ್ ಮಾಡಿ.
ಸಂಸ್ಕರಿಸಿದ ಧಾನ್ಯಗಳು: ಬ್ರೆಡ್, ಕುಕೀಸ್, ಕೇಕ್, ಪಾಸ್ತಾ ಇವೆಲ್ಲವೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ರಿಫೈನ್ಡ್ ಆಹಾರ ವಸ್ತುಗಳು ರಿಫೈನ್ ಆಗುವ ಸಂದರ್ಭ ಅದರಲ್ಲಿರುವ ಉತ್ತಮ ಅಂಶಗಳು ನಾಶವಾಗುತ್ತದೆ. ಇದರಿಂದಾಗಿ ತ್ವಚೆ ಜಿಡ್ಡಿನಂಶವಾಗುತ್ತದೆ.
ಸಕ್ಕರೆ ಪದಾರ್ಥಗಳು: ಜಿಲೇಬಿಯಂತ ಸಕ್ಕರೆ ಪಾಕದಲ್ಲೇ ಮಾಡುವ ಅತಿ ಸಿಹಿ ಮಧುರ ಪದಾರ್ಥಗಳು ತ್ವಚೆಯಲ್ಲಿ ಎಣ್ಣೆ ಅಂಶ ಹೆಚ್ಚಿಸುತ್ತದೆ. ಮಿಲ್ಕ್ ಚಾಕಲೇಟ್, ಬಿಸ್ಕತ್‌ಗಳು ಜಿಡ್ಡಿನಂಶ ಹೆಚ್ಚಿಸುತ್ತದೆ.
ಡೈರಿ ಉತ್ಪನ್ನಗಳು: ಬಟರ್, ಕ್ರೀಂ, ತುಪ್ಪ ಎಲ್ಲವೂ ಜಿಡ್ಡಿನಂಶ ಹೆಚ್ಚಿಸುತ್ತದೆ. ಇದಕ್ಕೆ ಬದಲಾಗಿ ಆಲ್ಮಂಡ್ ಹಾಲು ಕುಡಿಯಬಹುದು.
ನೀರು ಕುಡಿಯಿರಿ: ಪ್ರತಿ ದಿನ ತಪ್ಪದೆ 8-10 ಗ್ಲಾಸ್ ನೀರು ಕುಡಿಯಿರಿ. ಇದು ತ್ವಚೆಯ ಆರೋಗ್ಯಕ್ಕೆ ಪೂರಕ.