Health Tips for Kids: ಮಕ್ಕಳ ತೂಕ ಹೆಚ್ಚಾಗುತ್ತಿಲ್ಲವೇ? ಟೆನ್ಶನ್ ಬಿಡಿ ಈ ಆಹಾರ ನೀಡಿ

First Published | Feb 24, 2024, 7:01 AM IST

ಮಕ್ಕಳು ಅವರ ವಯಸ್ಸಿಗೆ ತಕ್ಕಂತೆ ಸಾಕಷ್ಟು ತೂಕ ಹೊಂದಿರದೇ ಇದ್ದಾಗ ಬೇಸರವಾಗೋದು ನಿಜ. ಬೆಳೆಯುವ ಮಕ್ಕಳು, ತೆಳ್ಳಗೆ ಉಳಿದಾಗ ಏನು ಮಾಡೋದು ಎಂದು ಪೋಷಕರಿಗೆ ಬೇಸರವಾಗುತ್ತೆ. ನಿಮ್ಮ ಮಗುವಿನ ತೂಕ ಹೆಚ್ಚಿಸಲು ಬಯಸಿದ್ರೆ, ಅವರಿಗೆ ಈ ಆಹಾರ ನೀಡಿ. 
 

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಆರೋಗ್ಯವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ತಮ್ಮ ಮಕ್ಕಳಿಗೆ ಉತ್ತಮ ಆಹಾರ ಕೂಡ ನೀಡುತ್ತಾರೆ. ಆದರೆ ಮಕ್ಕಳು ಸರಿಯಾಗಿ ತಿನ್ನದೇ…. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ತೂಕವನ್ನು(weight gain) ಹೆಚ್ಚಿಸುವುದಿಲ್ಲ. ತೆಳ್ಳಗೆ ಇರುತ್ತಾರೆ. ನಿಮಗೆ ನಿಮ್ಮ ಮಕ್ಕಳ ತೂಕದ ಬಗ್ಗೆ ಯೋಚನೆ ಇದ್ದರೆ ಅದನ್ನು ಬಿಡಿ. 
 

ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು (Mental Growth) ಬಯಸಿದರೆ ಅವರಿಗೆ ಸರಿಯಾದ ಪೌಷ್ಠಿಕಾಂಶವನ್ನು ಒದಗಿಸುವುದು ಮುಖ್ಯ. ಹಸಿವಿನ ಕೊರತೆ ಮತ್ತು ಕಡಿಮೆ ತಿನ್ನುವುದು ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ (negative effect)ಬೀರುತ್ತದೆ. ಹಾಗಿದ್ದರೆ, ಮಗುವಿನ ತೂಕ ಹೆಚ್ಚಳಕ್ಕೆ ಯಾವ ಆಹಾರವನ್ನು ನೀಡಬೇಕು ಅನ್ನೋದರ ಬಗ್ಗೆ ನಾವಿಲ್ಲಿ ಹೇಳುತ್ತೇವೆ. 

Tap to resize

ಆಲೂಗಡ್ಡೆ (Potato)
ಮಕ್ಕಳು ಖಂಡಿತವಾಗಿಯೂ ಆಲೂಗಡ್ಡೆಯನ್ನು ತುಂಬಾ ಇಷ್ಟಪಡುತ್ತಾರೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವಲ್ಲಿ ಇದು ತುಂಬಾನೆ ಮುಖ್ಯ ಪಾತ್ರ ವಹಿಸುತ್ತದೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಕ್ಯಾಲೊರಿಗಳು, ಅಮೈನೋ ಆಮ್ಲಗಳು (Aminot Astics) ಮತ್ತು ಆಹಾರದ ಫೈಬರ್ ಇದೆ. ಈ ಕಾರಣದಿಂದಾಗಿ ಮಕ್ಕಳು ಬೇಗ ತೂಕ ಹೆಚ್ಚಿಸಿಕೊಳ್ಳುತ್ತಾರೆ.

ಬಾಳೆಹಣ್ಣು (Banana)
ಬಾಳೆಹಣ್ಣು ದೇಹಕ್ಕೆ ಬೇಕಾದ ಉತ್ತಮ ಪ್ರಮಾಣದ ಶಕ್ತಿಯನ್ನು ನೀಡುವ ಪೋಷಕಾಂಶಗಳನ್ನು ಹೊಂದಿರುತ್ತದೆ. ಒಂದು ಬಾಳೆಹಣ್ಣಿನಲ್ಲಿ 105 ಕ್ಯಾಲೊರಿಗಳಿರುತ್ತವೆ. ಇದನ್ನು ಮಕ್ಕಳಿಗೆ ಕಚ್ಚಾ ರೂಪದಲ್ಲಿ, ಮಿಲ್ಕ್ ಶೇಕ್ ಅಥವಾ ಜ್ಯೂಸ್ ರೂಪದಲ್ಲಿ ನೀಡಬಹುದು.

ಮೊಟ್ಟೆ (egg)
ಮೊಟ್ಟೆಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಜೀವಸತ್ವಗಳು ಮತ್ತು ಪೋಷಕಾಂಶಗಳಿವೆ. ಬೆಳೆಯುತ್ತಿರುವ ಶಿಶುಗಳಿಗೆ ಇವು ತುಂಬಾ ಅವಶ್ಯಕ. ಅಷ್ಟೇ ಅಲ್ಲ, ಇದು ಮಕ್ಕಳು ತಮ್ಮ ವಯಸ್ಸಿಗೆ ಸೂಕ್ತ ತೂಕವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಆದರೆ ಬೇಯಿಸಿದ ಮೊಟ್ಟೆಗಳನ್ನು ಮಕ್ಕಳಿಗೆ ನೀಡುವುದು ಉತ್ತಮ.

ಡ್ರೈ ಫ್ರುಟ್ಸ್ (dry fruits)
ಡ್ರೈ ಫ್ರುಟ್ಸ್ ಮತ್ತು ನಟ್ಸ್ ಮಕ್ಕಳ ತೂಕ ಹೆಚ್ಚಿಸಲು ತುಂಬಾ ಸಹಾಯಕ. ಇದು ಉತ್ತಮ ಪೋಷಕಾಂಶಗಳು, ಸಕ್ಕರೆ  (Sugar) ಮತ್ತು ಶಕ್ತಿಯನ್ನು (Energy) ಹೊಂದಿರುತ್ತದೆ. ಅಷ್ಟೇ ಅಲ್ಲ ಇದು ಮಕ್ಕಳ ಆರೋಗ್ಯ ಉತ್ತಮವಾಗಿರಲು ಸಹ ಸಹಾಯ ಮಾಡುತ್ತೆ. ಜೊತೆಗೆ ತೂಕವನ್ನೂ ಹೆಚ್ಚಿಸುತ್ತೆ.

ಡೈರಿ ಉತ್ಪನ್ನಗಳು (Diary Product)
ಬೆಳೆಯುತ್ತಿರುವ ಮಕ್ಕಳ ಆಹಾರದಲ್ಲಿ ಹಾಲು (Milk), ಚೀಸ್ (Cheese), ಬೆಣ್ಣೆ (Butter) ಮುಂತಾದ ಡೈರಿ ಉತ್ಪನ್ನಗಳನ್ನು  (Dairy Products)ನೀಡಬೇಕು. ಇದರಲ್ಲಿರುವ ಕ್ಯಾಲ್ಸಿಯಂ (Calcium) ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೆಣ್ಣೆ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

ಚಿಕನ್ (Chicken)
ಕೋಳಿ ಮಾಂಸ ಪ್ರೋಟೀನ್ ಮತ್ತು ಕ್ಯಾಲೊರಿಗಳ ಉತ್ತಮ ಮೂಲ. ಇದು ಸ್ನಾಯುಗಳ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಮಕ್ಕಳಿಗೆ ಹೆಚ್ಚು ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

ಪೀನಟ್ ಬಟರ್ (peanut butter)
ಪೀನಟ್ ಬಟರ್ ತಿನ್ನುವುದು ಬೆಳೆಯುತ್ತಿರುವ ಮಕ್ಕಳಿಗೆ ತುಂಬಾ ಪ್ರಯೋಜನಕಾರಿ.ಇದರಲ್ಲಿ ಹೆಚ್ಚಿನ ಆರೋಗ್ಯಯುತ ಕ್ಯಾಲರಿ ಇರುತ್ತೆ. ಇದನ್ನು ತರಕಾರಿಗಳು ಅಥವಾ ಹಣ್ಣುಗಳೊಂದಿಗೆ ಬೆರೆಸಿ ಸೇವಿಸಬಹುದು. ಆದರೆ ಅತಿಯಾಗಿ ತಿನ್ನೋದು ಸಹ ಒಳ್ಳೆಯದಲ್ಲ ಅನ್ನೋದು ನೆನಪಿರಲಿ. 

Latest Videos

click me!