Published : Jan 28, 2021, 05:22 PM ISTUpdated : Feb 16, 2021, 03:01 PM IST
ಮಲಗಿದ ತಕ್ಷಣ ನಿದ್ದೆಬರಬೇಕು, ಇಲ್ಲ ನಿದ್ದೆ ಬಂದರೂ ಕೆಟ್ಟ ಕನಸುಗಳು ಬಂದು ನಿದ್ದೆ ಹಾಳು ಮಾಡುತ್ತವೆ. ಇವೆಲ್ಲ ನಮ್ಮ ದೇಹ ಹಾಗೂ ಜೀವನಶೈಲಿ ಮೇಲೆ ಅವಲಂಬಿತವಾಗಿರುತ್ತವೆ. ದೇಹ ಆಯಾಸವಾದರೆ ನಿದ್ದೆ ಬರುತ್ತದೆ ಎನ್ನುತ್ತಾರೆ. ಆದರೆ ಕೆಲವರಿಗೆ ನಿದ್ದೆ ಬರೋದಿಲ್ಲ. ಅದಲ್ಲದೇ ಬೇಡದ ಆಲೋಚನೆಗಳು ಕಾಡುತ್ತಿರುತ್ತದೆ. ನಿದ್ದೆ ಎಷ್ಟು ಅವಶ್ಯಕ ಎಂದರೆ ನಿದ್ದೆ ಇಲ್ಲದ ವ್ಯಕ್ತಿಗೆ ಮಾನಸಿಕ ಖಾಯಿಲೆಯೂ ಬರುವ ಸಂಭವ ಹೆಚ್ಚು. ಅಲ್ಲದೆ ದೇಹ ಸಂಬಂಧಿ ತೊಂದರೆಯೂ ಕಾಡಬಹುದು.
ವಯೋವೃದ್ಧರಲ್ಲಿ ನಿದ್ರಾಹೀನತೆ ಸಮಸ್ಯೆ ಸಹಜ. ಆದರೆ ಈಗ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರಲ್ಲೂ ಈ ಸಮಸ್ಯೆ ಕಾಡುತ್ತಿದೆ. ನಿದ್ದೆ ಸರಿಯಾಗಿ ಬರಲು ಅನುಸರಿಸಬೇಕಾದ ಸರಳ ಉಪಾಯಗಳು ಇಲ್ಲಿವೆ.

210
ರಾತ್ರಿ ಮಲಗುವ ಮೊದಲು ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಇದು ದೇಹ ಮತ್ತು ಮನಸ್ಸಿನ ಭಾರ ಕಡಿಮೆ ಮಾಡುತ್ತದೆ. ಅಲ್ಲದೆ ದೇಹ ಬೆಚ್ಚಗಿನ ಅನುಭವ ಉಂಟುಮಾಡಿ ನಿದ್ದೆ ಬರಿಸುತ್ತದೆ.

310
ಉದಾಹರಣೆ ಪುಟ್ಟಮಕ್ಕಳು ಹೇಗೆ ಬಿಸಿನೀರಿನ ಸ್ನಾನದ ಬಳಿಕ ಮಲಗಿಸಿದರೆ ಹಾಯಾಗಿ ನಿದ್ದೆ ಮಾಡುತ್ತವೆ. ಹಾಗೆ ಹಿರಿಯರು ಕೂಡ ಸುಖಮಯ ನಿದ್ದೆ ಮಾಡಬಹುದು.

410
ಇನ್ನೊಂದು ಉಪಾಯವೆಂದರೆ ದೇವರ ಹಾಡು ಅಥವಾ ಮಂತ್ರ ಪಠನೆ ಇದು ಕೆಲವರಲ್ಲಿ ಪರಿಣಾಮ ಬೀಳುತ್ತದೆ . ಇದು ನಿದ್ದೆಯಲ್ಲಿ ಬೇಡದ ಆಲೋಚನೆಗಳಿಗೆ ದಾರಿ ಮಾಡೋದನ್ನು ತಪ್ಪಿಸುತ್ತದೆ.

510
ಕೆಲವರು ರಾತ್ರಿ ಮಲಗುವಾಗ ಬೆಡ್ ಲೈಟ್ ಹಾಕೋ ಅಭ್ಯಾಸ ಇದೆ. ಇದು ಕೂಡ ನಿದ್ದೆ ಮಾಡಲು ತೊಡಕನ್ನು ಉಂಟು ಮಾಡುತ್ತದೆ. ಅದರ ಬದಲು ಸಾವಯವ ಎಣ್ಣೆಬಳಸಿ ಹತ್ತಿ ಬತ್ತಿಯಲ್ಲಿ ದೀಪ ಹಚ್ಚಿ ಕೋಣೆ ಬದಿಯಲ್ಲಿ ನಿಮಗೆ ಕಾಣುವ ಹಾಗೆ ಇಡಿ. ಮಲಗುವಾಗ ಕೆಲವು ಯೋಗಗಳನ್ನು ಮಾಡಿದರೆ ನಿದ್ದೆ ಖಂಡಿತವಾಗಿ ಬರುತ್ತದೆ.

610
ರಾತ್ರಿ ಮಲಗುವಾಗ ಬಾಲಾಸನ, ಉತ್ತರಾಸನ, ಅರ್ಧ ಉತ್ತರಾಸನ, ಸೂಪ್ತ ಬಧ ಕೋನಾಸನ ಮಾಡಿದರೆ ಒಳ್ಳೆಯದು.

710
ರಾತ್ರಿ ಹೊತ್ತು ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಅದರಲ್ಲೂ ಎಣ್ಣೆ ಮಸಾಲಾ ಪದಾರ್ಥಗಳ ಸೇವನೆ ಮಾಡುವಾಗ ಮಲಗುವ ಮೂರುಗಂಟೆ ಮೊದಲು ಊಟ ಮಾಡಿದರೆ ಜೀರ್ಣ ಸುಲಭವಾಗುತ್ತದೆ. ಅಲ್ಲದೆ ನಿದ್ದೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

810
ಆದಷ್ಟು ನಿದ್ದೆ ಸಮಯದಲ್ಲಿ ಕಂಪ್ಯೂಟರ್, ಮೊಬೈಲ್‌ಗಳಿಂದ ದೂರವಿಟ್ಟರೆ ಒಳ್ಳೆಯದು. ಇದೂ ನಿದ್ರಾಹೀನತೆಗೆ ಒಂದು ಕಾರಣ. ರಾತ್ರಿಯ ವೇಳೆ ಇವುಗಳ ಬೆಳಕು ಕಣ್ಣಿಗೆ ಬಿದ್ದಷ್ಟು ನಿದ್ರೆ ದೂರವಾಗುತ್ತದೆ. ಇದರಿಂದ ದೇಹವನ್ನು ಸುಸ್ತು ಆವರಿಸಿಕೊಳ್ಳುತ್ತದೆ. ಆದುದರಿಂದ ಇದನ್ನು ಅವಾಯ್ಡ್ ಮಾಡಿ.

910
ಇದರ ಬದಲು ಸಕಾರಾತ್ಮಕ ವಿಷಯವುಳ್ಳ ಪುಸ್ತಕಗಳನ್ನು ಮಲಗುವ ಮೊದಲು ಓದಿ ಇದು ಮನಸ್ಸಿಗೆ ದಣಿವನ್ನು ಉಂಟು ಮಾಡಿ ಮಲಗಲು ಪ್ರೇರೇಪಿಸುತ್ತದೆ. ಮಕ್ಕಳಿಗೂ ಹೀಗೆ ಪುಸ್ತಕದ ಕತೆಯನ್ನು ಓದಿ ಹೇಳಿದರೆ ಅವರು ಹಾಗೆಯೇ ನಿದ್ರೆಗೆ ಜಾರುತ್ತಾರೆ.

1010
ಮಲಗುವಾಗ ಸಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಾ ಮಲಗಿ ನಿದ್ದೆ ಚೆನ್ನಾಗಿ ಬರುತ್ತದೆ. ಮಲಗುವ ಮೊದಲು ಬಿಸಿ ನೀರಿನ ಸೇವನೆ ಒಳ್ಳೆಯದು.