ಮೈ ಮಾಟ ಚೆನ್ನಾಗಿರ್ಬೇಕು ಅಂದ್ರೆ ಕಿಯಾರಾ ಅಡ್ವಾಣಿ ಹೇಳೋ ಈ ಟಿಪ್ಸ್ ಫಾಲೋ ಮಾಡಿ!

Published : Dec 08, 2023, 04:39 PM IST

ಪರಿಣಾಮಕಾರಿ ಮಾತ್ರವಲ್ಲದೆ ರೋಮಾಂಚನಕಾರಿಯಾದ ಫಿಟ್ನೆಸ್ ಜರ್ನಿ ಪ್ರಾರಂಭಿಸಲು ನೀವು ಸಿದ್ಧರಿದ್ದರೆ ಅಥವ ಕಿಯಾರಾ ಅಡ್ವಾಣಿ ಅವರಂತಹ ಪರ್ಫೆಕ್ಟ್ ದೇಹ ಸಿರಿ ನಿಮಗೆ ಬೇಕು ಅನಿಸಿದರೆ, ಇಲ್ಲಿದೆ ನಿಮಗಾಗಿ ಸರಿಯಾದ ಫಿಟ್ನೆಸ್ ಕ್ರಮಗಳು ಅವುಗಳನ್ನು ಪಾಲಿಸಿ.   

PREV
19
ಮೈ ಮಾಟ ಚೆನ್ನಾಗಿರ್ಬೇಕು ಅಂದ್ರೆ ಕಿಯಾರಾ ಅಡ್ವಾಣಿ ಹೇಳೋ ಈ ಟಿಪ್ಸ್ ಫಾಲೋ ಮಾಡಿ!

ಬಾಲಿವುಡ್ ಸೆನ್ಸೇಷನ್ ಕಿಯಾರಾ ಅಡ್ವಾಣಿ (Kiara Advani) ತನ್ನ ಮೈಕಟ್ಟು ಮತ್ತು ಸ್ಟೈಲ್, ಫಿಟ್ನೆಸ್ ನಿಂದಾಗಿ ತುಂಬಾ ಜನಪ್ರಿಯತೆ ಪಡೆದಿದ್ದಾರೆ. ಅವರ ಟೋಂಡ್ ಬಾಡಿ ನೋಡಿ, ವಾವ್ ಇಂತಹ ಮೈಕಟ್ಟು ನಮಗೂ ಸಿಗಬಾರದೆ ಎಂದು ಅಂದುಕೊಳ್ಳದವರಿಲ್ಲ. ನೀವು ಹಾಗೆ ಅಂದುಕೊಂಡಿದ್ದರೆ ಇಲ್ಲಿದೆ ಕಿಯಾರ ಫಿಟ್ನೆಸ್ ಸೀಕ್ರೆಟ್. 
 

29

ಕಿಯಾರಾ ತನ್ನ ದಿನವನ್ನು 30 ನಿಮಿಷಗಳ ಕಾರ್ಡಿಯೋ ಬ್ಲಾಸ್ಟ್ ನೊಂದಿಗೆ ಪ್ರಾರಂಭಿಸುತ್ತಾರೆ ಇದರಲ್ಲಿ ಓಟ, ಸೈಕ್ಲಿಂಗ್ (Cycling) ಅಥವಾ ಈಜು ಕೂಡ ಸೇರಿದೆ. ಇದು ಕೇವಲ ಬೆವರು ಹರಿಸೋದು ಮಾತ್ರವಲ್ಲ, ಫ್ಯಾಟ್ ಬರ್ನ್ ಆಗೋಕೆ ಸಹ ಸಹಾಯ ಮಾಡುತ್ತದೆ. 
 

39

ಕಿಯಾರಾರ ಪ್ರತಿ ವರ್ಕ್ ಔಟ್ ತುಂಬಾನೆ ಮನರಂಜನಾತ್ಮಕವಾಗಿರುತ್ತೆ. ಕಾರ್ಡಿಯೊವನ್ನು ಸ್ಟ್ರೆಂಥ್ ಟ್ರೈನಿಂಗ್ (Strength training) ಮತ್ತು ಯೋಗದೊಂದಿಗೆ ಕಂಬೈನ್ ಮಾಡುವ ಮೂಲಕ, ತನ್ನ ದೇಹದ ಪ್ರತಿ ಇಂಚೂ ಆ್ಯಕ್ಟಿವ್ ಆಗುವಂತೆ ಮಾಡುತ್ತಾರೆ. ಇದರಿಂದೆ ಅವರು ಪರ್ಫೆಕ್ಟ್ ದೇಹವನ್ನು ಹೊಂದೋಕೆ ಸಾಧ್ಯವಾಗಿದೆ. 

49

ಈ ಬಾಲಿವುಡ್ ದಿವಾ (Bollywood Diva) ಪಿಲೇಟ್ಸ್, ಸ್ಕ್ವಾಟ್ಸ್ ಮತ್ತು ಪುಲ್-ಅಪ್ ಗಳನ್ನು ಸಹ ಮಿಸ್ ಮಾಡದೇ ಮಾಡುತ್ತಾರೆ. ಈ ವ್ಯಾಯಾಮಗಳು ಅವರ ದೇಹ ಶೇಪ್ ನಲ್ಲಿ ಇರುವಂತೆ ಮಾಡುತ್ತೆ.  ಜೊತೆಗೆ ದೇಹವನ್ನು ಮತ್ತಷ್ಟು ಸುಧಾರಿಸಲು, ಮತ್ತಷ್ತು ವ್ಯಾಯಾಮ ಮಾಡಲು ಪ್ರೋತ್ಸಾಹಿಸುತ್ತದೆ. 
 

59

'ಶೆರ್ಶಾಹ ನಟಿ ಕಿಕ್ ಬಾಕ್ಸಿಂಗ್ (Kick Boxing), ನೃತ್ಯ (Dance) ಮತ್ತು ಟೇಕ್ವಾಂಡೋಗಳನ್ನು ಸಹ ಮಾಡುತ್ತಾರೆ. ಇದು ಕೇವಲ ವ್ಯಾಯಾಮ (Exercise) ಮಾತ್ರ ಅಲ್ಲ, ಇದರಿಂದ ಜೀವನದಲ್ಲಿ ಶಿಸ್ತು (Desciplene) ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಫಿಟ್ (Fit) ಆಗಿರಲು ಸಹಾಯ ಮಾಡುತ್ತದೆ.      
 

69

ಕಿಯಾರಾ ಟೋನ್ಡ್ ಮೈಕಟ್ಟು (Toned Body) ಕೇವಲ ಅವರ ವ್ಯಾಯಾಮದ ಫಲಿತಾಂಶವಲ್ಲ; ಇದು ಅವರ ಸಮತೋಲಿತ ಆಹಾರದ (balanced food) ಫಲಿತಾಂಶವೂ ಆಗಿದೆ. ತಮ್ಮ ಆಹಾರದಲ್ಲಿ ಕಿಯಾರ ಹೆಚ್ಚಾಗಿ  ಪೋಷಕಾಂಶಗಳಿಂದ (Vitamins) ತುಂಬಿರುವ ಸಂಪೂರ್ಣ ಆಹಾರವನ್ನೇ ಸೇವಿಸುತ್ತಾರೆ. ಜೊತೆಗೆ ಸಂಸ್ಕರಿಸಿದ ಆಹಾರ (Processed Food) ಮತ್ತು ಜಂಕ್ ಫುಡ್ (Junk Food)ಗಳಿಂದ ದೂರವಿರುತ್ತಾರೆ.

79

ಸ್ಲಿಮ್ ಪ್ರೋಟೀನ್ಸ್, ಸಂಕೀರ್ಣ ಕಾರ್ಬೋಹೈಡ್ರೇಟ್ಸ್, ಆರೋಗ್ಯಕರ ಕೊಬ್ಬುಗಳು (Healthy Cholestron) ಮತ್ತು ಹಣ್ಣುಗಳು ಮತ್ತು ತರಕಾರಿಗಳ ಮಿಶ್ರಣವನ್ನು ಒಳಗೊಂಡಿರುವ ಮನೆಯಲ್ಲಿ ತಯಾರಿಸಿದ ಊಟದ ಬಗ್ಗೆ ನಟಿ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಇದು ಆಹಾರ ಕ್ರಮವಲ್ಲ; ಅದೊಂದು ಜೀವನಶೈಲಿ ಎನ್ನುತ್ತಾರೆ ಕಿಯಾರ. 

89

ಕಿಯಾರಾ ತನ್ನ ವ್ಯಾಯಾಮಕ್ಕೂ ಮುನ್ನ ಸೇಬಿನ ತುಂಡುಗಳು ಮತ್ತು ಪೀನಟ್ ಬಟರ್ (Peanut Butter) ಸೇವಿಸುವ ಮೂಲಕ ಆರಂಭಿಸುತ್ತಾರೆ. ಶಕ್ತಿ (Energy) ಮತ್ತು ರುಚಿಯ ಪರಿಪೂರ್ಣ ಸಂಯೋಜನೆಯು ಕಠಿಣವಾದ ವ್ಯಾಯಾಮಗಳನ್ನು ಸುಲಭವಾಗಿ ಮಾಡಲು ಸಹಾಯ ಮಾಡುತ್ತದೆ. 
 

99

ಕಿಯಾರ ತಮ್ಮ ದಿನವನ್ನು ಆರಂಭಿಸೋದು ಒಂದು ಲೋಟ ಬೆಚ್ಚಗಿನ ನೀರು (Warm Water) ಮತ್ತು ನಿಂಬೆಯೊಂದಿಗೆ, ಇದನ್ನು ಕುಡಿಯೋ ಮೂಲಕ ತಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸುತ್ತಾರೆ. ದಿನವನ್ನು ಆರೋಗ್ಯಕರವಾಗಿ ಆರಂಭಿಸಲು ಇದು ಬೆಸ್ಟ್ ಮಾರ್ಗವಾಗಿದೆ. 

Read more Photos on
click me!

Recommended Stories