ನಿರಂತರವಾಗಿ 72 ಗಂಟೆ ನಿದ್ರೆ ಮಾಡದೇ ಇದ್ರೆ ಏನಾಗುತ್ತೆ ಗೊತ್ತಾ?

First Published Dec 7, 2023, 5:41 PM IST

ನಿದ್ರೆ ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ಅತ್ಯಗತ್ಯವಾಗಿ ಬೇಕೇ ಬೇಕು. ಒಂದು ವೇಳೆ ಒಬ್ಬ ವ್ಯಕ್ತಿಯು 2 ರಾತ್ರಿ (48 ಗಂಟೆಗಳು) ಅಥವಾ 3 ರಾತ್ರಿ (72 ಗಂಟೆಗಳು) ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? 

ಒಬ್ಬ ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ, ದೀರ್ಘ ಆಯಸ್ಸು ಪಡೆಯಬೇಕು ಅನ್ನೋದಾದ್ರೆ ಅವರು ಚೆನ್ನಾಗಿ ನಿದ್ರೆ ಮಾಡಬೇಕು. ಸರಿಯಾಗಿ ನಿದ್ರೆ ಮಾಡದೇ ಇದ್ರೆ, ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಿದ್ರೆಯ ಕೊರತೆಯನ್ನು (sleeplessness)ನೀಗಿಸುವ ಯಾವುದೇ ಚಿಕಿತ್ಸೆ ಮತ್ತು ಔಷಧಿ ಜಗತ್ತಿನಲ್ಲಿ ಇಲ್ಲ. ಆದ್ದರಿಂದ, ಯಾವಾಗಲೂ ಸಾಕಷ್ಟು ನಿದ್ರೆ (healthy sleep) ಪಡೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, 18 ರಿಂದ 60 ವರ್ಷದೊಳಗಿನ ವಯಸ್ಕರು ರಾತ್ರಿಯಲ್ಲಿ ಕನಿಷ್ಠ 7 ಗಂಟೆಗಳ ನಿದ್ರೆ ಪಡೆಯಬೇಕು. ಒಬ್ಬ ವ್ಯಕ್ತಿಯು ನಿದ್ರೆಯಿಲ್ಲದೆ ಎಷ್ಟು ಕಾಲ ಬದುಕಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕೆಲಸ, ಒತ್ತಡ (Stress) ಇತ್ಯಾದಿಗಳಿಂದಾಗಿ ಅನೇಕ ಜನರಿಗೆ ಪೂರ್ಣ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ

Latest Videos


ನಿದ್ರೆ ಮಾಡದೇ ಎಚ್ಚರವಾಗಿ ಕುಳಿತು ಸಹ ಜನರು ದಾಖಲೆ ಮಾಡುತ್ತಾರೆ ಗೊತ್ತಾ? ಒಬ್ಬ ವ್ಯಕ್ತಿಯು 453 ಗಂಟೆ 40 ನಿಮಿಷಗಳ ಕಾಲ ನಿದ್ರೆ ಮಾಡದೆ ಎಚ್ಚರವಾಗಿರುವುದರ ಮೂಲಕ ವಿಶ್ವ ದಾಖಲೆಯನ್ನು(World Record) ನಿರ್ಮಿಸಿದ್ದಾನೆ, ಅಂದ್ರೆ ಇದು ಸುಮಾರು 19 ದಿನಗಳಿಗೆ ಸಮಾನವಾಗಿದೆ.
 

ಒಬ್ಬ ವ್ಯಕ್ತಿಯು ತನ್ನ ದೇಹಕ್ಕೆ ಅಗತ್ಯವಿರುವುದಕ್ಕಿಂತ ಕಡಿಮೆ ನಿದ್ರೆಯನ್ನು (less sleep) ಪಡೆಯದಾಗ ನಿದ್ರೆಯ ಕೊರತೆ ಉಂಟಾಗುತ್ತದೆ. ನಿದ್ರೆಯ ಕೊರತೆಯ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಒಬ್ಬ ವ್ಯಕ್ತಿಯು 2 ರಾತ್ರಿ (48 ಗಂಟೆಗಳು) ಮತ್ತು 3 ರಾತ್ರಿಗಳು (72 ಗಂಟೆಗಳು) ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಹೆಚ್ಚಿನ ಜನರಲ್ಲಿ, ನಿರಂತರವಾಗಿ 24 ಗಂಟೆಗಳ ಕಾಲ ಎಚ್ಚರವಾಗಿರೋದರಿಂದಲೂ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. 24 ಗಂಟೆಗಳ ಕಾಲ ಎಚ್ಚರವಾದರೆ ರಕ್ತದಲ್ಲಿನ ಬಿಎಸಿ ಪ್ರಮಾಣ ಶೇಕಡಾ 0.10 ಕ್ಕೆ ಸಮನಾಗಿರುತ್ತದೆ. ಇದು ಕಿರಿಕಿರಿ, ಏಕಾಗ್ರತೆಯ ನಷ್ಟ, ಹೆಚ್ಚಿದ ಒತ್ತಡ, ಸ್ನಾಯು ನೋವು, ರಕ್ತದಲ್ಲಿನ ಸಕ್ಕರೆ ಹೆಚ್ಚಳಕ್ಕೆ (blood sugar level high) ಕಾರಣವಾಗಬಹುದು.

ಒಬ್ಬ ವ್ಯಕ್ತಿಯು ಹೆಚ್ಚು ಎಚ್ಚರಗೊಂಡಷ್ಟೂ ನಿದ್ರೆಯ ಕೊರತೆಯ ಪರಿಣಾಮವು ಹೆಚ್ಚಾಗುತ್ತದೆ. ಯಾರಾದರೂ ನಿರಂತರವಾಗಿ 48 ಗಂಟೆಗಳ ಕಾಲ ಎಚ್ಚರವಾಗಿದ್ದರೆ, ಅವರು ತುಂಬಾ ದಣಿದಿರುತ್ತಾರೆ, ಕಣ್ಣುಗಳನ್ನು ತೆರೆಯುವುದು ಸಹ ನೋವಿನಿಂದ ಕೂಡಿರುತ್ತದೆ. ಅವರ ಮೆದುಳು ಸಂಪೂರ್ಣ ಪ್ರಜ್ಞಾಹೀನತೆಗೆ ಹೋಗಲು ಪ್ರಾರಂಭಿಸುತ್ತದೆ, ಇದನ್ನು ಮೈಕ್ರೋಸ್ಲೀಪ್ (microsleep) ಎಂದು ಕರೆಯಲಾಗುತ್ತದೆ.

ನಿದ್ರೆಯಿಲ್ಲದೆ 72 ಗಂಟೆಗಳ ಕಳೆದರೆ ಆಯಾಸದ ಲಕ್ಷಣಗಳು ಇನ್ನಷ್ಟು ಹೆಚ್ಚಾಗುತ್ತವೆ. ಮೂರು ದಿನಗಳ ಕಾಲ ನಿದ್ರೆಯಿಲ್ಲದೆ ಇರುವುದು ವ್ಯಕ್ತಿಯ ಮನಸ್ಥಿತಿ ಮತ್ತು ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಮೂರ್ಛೆ, ಕಿರಿಕಿರಿ, ಇತರರೊಂದಿಗೆ ಮಾತನಾಡಲು ಸಾಧ್ಯವಾಗದಿರುವುದು ಮುಂತಾದ ಅಡ್ಡಪರಿಣಾಮಗಳು ಸಹ ಕಂಡು ಬರುತ್ತವೆ.

ಒಬ್ಬ ವ್ಯಕ್ತಿ ನಿರಂತರವಾಗಿ ಸಾಕಷ್ಟು ನಿದ್ರೆ ಪಡೆಯದೇ ಇದ್ದರೆ, ಅವರಿಗೆ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ (diabetes), ಹೃದ್ರೋಗ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತೆ. ಆದ್ದರಿಂದ, ಯಾವುದೇ ಪರಿಸ್ಥಿತಿಯಲ್ಲಿ ಸಾಕಷ್ಟು ನಿದ್ರೆ ಮಾಡೋದನ್ನು ಮಾತ್ರ ಮರೆಯಬೇಡಿ.

click me!