ಈರುಳ್ಳಿ ಸಿಪ್ಪೆ ಎಸೀಬೇಡಿ, ಟೀ ಮಾಡಿ: ನಿಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳಿರೋದು ಅಲ್ಲಿಯೇ

First Published | Sep 23, 2020, 5:55 PM IST

ಝೀರೋ ವೇಸ್ಟ್ ಕುಕ್ಕಿಂಗ್ ಜನಪ್ರಿಯವಾಗುತ್ತಿದ್ದಂತೆ ಬಹಳಷ್ಟು ಜನ ತರಕಾರಿ ಸಿಪ್ಪೆಯನ್ನು ಯಾವೆಲ್ಲಾ ರೀತಿಯಲ್ಲಿ ಬಹಳಸಬಹುದೆಂಬ ಪ್ರಯೋಗಗನ್ನು ಜನ ಮಾಡುತ್ತಿದ್ದಾರೆ. ಈ ನಡುವೆ ಈರುಳ್ಳಿ ಸಿಪ್ಪೆಯ ಟೀ ಕೂಡಾ ವೈರಲ್ ಆಗಿದೆ.

ಭಾರತೀಯರು ತರಕಾರಿಗಳ ಸೊಪ್ಪು, ಹೂ, ಕಾಯಿ, ತೊಗಟೆ, ಬೇರು ಇವೆಲ್ಲವನ್ನು ಬಳಸಿ ಅಡುಗೆ ಮಾಡುವುದಲ್ಲಿ ನಿಸ್ಸೀಮರು.ಆಲೂಗಡ್ಡೆ ಸಿಪ್ಪೆ, ಕ್ಯಾರೆಡ್ ಹೊರಭಾಗವನ್ನು ಅಡುಗೆಯಲ್ಲಿ ಬಳಸುತ್ತಾರೆ.
ನೀವು ಈರುಳ್ಳಿ ಬಳಸುವವರಾಗಿದ್ದರೆ ಅದರ ಸಿಪ್ಪೆಯನ್ನು ಎಸೆಯಬೇಕಿಲ್ಲ. ಇದರಿಂದ ಸ್ವಾದಿಷ್ಟ ಟೀ ತಯಾರಿಸಬಹುದು.
Tap to resize

ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ಸ್ ಹೇರಳವಾಗಿದೆ.
ಇದರಲ್ಲಿ ವಿಟಮಿನ್ ಎ ಇದ್ದು ಇದರಿಂದ ತಯಾರಿಸೋ ಟೀ ಕುಡಿಯೋದರಿಂದ ಕಣ್ಣಿನ ದೃಷ್ಟಿಗೆ ಇದು ಸಹಕಾರಿ.
ಈರುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ಇ ಇರುವುದರಿಂದ ನಿಮ್ಮ ತ್ವೆಯ ಕಾಂತಿಗೂ ಇದು ನೆರವಾಗಬಲ್ಲದು.
ಇದರಲ್ಲಿ ಆಂಟಿಆಕ್ಸೈಡ್ ಅಂಶಗಳೂ ಇವೆ. ಇದರಿಂದ ಶೀತ, ಕೆಮ್ಮು, ಸಾಧಾರಣ ಅಲರ್ಜಿ ಕಡಿಮೆಯಾಗುತ್ತದೆ. ಮಳೆಗಾಲದ ಸೀಸನಲ್ ಇನ್ಫೆಕ್ಷನ್‌ಗೆ ಇದು ಉತ್ತಮ ಔಷಧ
ಈರುಳ್ಳಿ ಸಿಪ್ಪೆಯಿಂದ ಮಾಡಿದ ಟೀಯಲ್ಲಿ ಕಡಿಮೆ ಕ್ಯಾಲೊರಿ ಇರುತ್ತದೆ.
ಹಾಗಾಗಿ ನೀವು ದಿನದಲ್ಲಿ ಒಂದೆರಡು ಬಾರಿ ಕುಡಿದರೂ ಸಮಸ್ಯೆ ಏನಿಲ್ಲ.
ಈರುಳ್ಳಿ ಸಿಪ್ಪೆಯಲ್ಲಿರುವ ಅಂಶಗಳು ಹೃದಯದ ಆರೋಗ್ಯಕ್ಕೂ ಸಹಕಾರಿ. ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ಇದರಲ್ಲಿ ಆಂಟಿಫಂಗಲ್ ಅಂಶಗಳಿವೆ. ತ್ವಚೆಯಲ್ಲಿ ತುರಿಕೆಯಂತಹ ಸಮಸ್ಯೆ ಇದ್ದರೆ ಈರುಳ್ಳಿ ಸಿಪ್ಪೆ ಟೀ ಕುಡಿದರೆ ಸಾಕು. ಹಾಗೆಂದು ಸೂಚಿಸಲಾದ ಔಷಧಿಯನ್ನೇ ಬಿಟ್ಟು ಬಿಡಬೇಡಿ.
ಈರುಳ್ಳಿ ಸಿಪ್ಪೆಯ ಟೀ ಮಾಡೋದು ಹೇಗೆ: ಈರುಳ್ಳಿ ಸಿಪ್ಪೆ ತೆಗೆದು ನೀರಿನಲ್ಲಿ ಕುದಿಸಿ. ಸ್ವಲ್ಪ ಹೊತ್ತು ಕುದಿಸಿದ ನಂತರ ಸೋಸಿ ಅದನ್ನು ಕುಡಿಯಿರಿ.

Latest Videos

click me!