ಪುಟ್ಟ ಮಕ್ಕಳನ್ನು ಕಾಡೋ ಹ್ಯಾಂಡ್ ಫೂಟ್ ಡಿಸೀಸ್..! ನೀವು ತಿಳಿಯಬೇಕಾದ ವಿಚಾರಗಳಿವು

First Published | Sep 24, 2020, 12:12 PM IST

ಪುಟ್ಟ ಮಕ್ಕಳ ಕೈ ಕಾಲಿನ ತುಂಬ ತುರಿಕೆ, ಅಲರ್ಜಿ ಹುಣ್ಣುಗಳಾಗೋದು ಸಮಾನ್ಯ. ಆದರೆ ಪುಟ್ಟ ಕಂದಮ್ಮ ತನ್ನ ನೋವು ಹೇಳಲೂ ಆಗದೆ ಸಂಕಟಪಡುವುದು ಪೋಷಕರನ್ನೇ ಆತಂಕಕ್ಕೆ ದೂಡುತ್ತೆ. ಏನು ಈ ಹ್ಯಾಂಡ್ ಫೂಟ್ ಡಿಸೀಸ್..? ಇದರ ಬಗ್ಗೆ ನೀವು ತಿಳಿಯಲೇಬೇಕಾದ ವಿಚಾರಗಳಿಲ್ಲಿವೆ

ಮೈಮೇಲೆ ಹುಣ್ಣುಗಳು ತುಂಬ ನೋವು ನೀಡುತ್ತದೆ, ದೊಡ್ಡವರಿಗಾದರೂ, ಚಿಕ್ಕವರಿಗಾದರೂ ಸರಿ. ಬೇಸ್‌ಬಾಲ್ ಪ್ಲೇಯರ್ ಸ್ಟೀವ್ ಸ್ಪಾರ್ಕ್, ಮಾರ್ಟಿ ಕೋರ್ಡೋವಾನಂತವರು ಈ ಸಮಸ್ಯೆಯಿಂದ ಬಳಲಿದ್ದಾರೆ.
ಇತ್ತೀಚೆಗಷ್ಟೇ ನ್ಯೂಯಾರ್ಕ್ ನೋಹ್ ಸಿಂಡರ್‌ಗಾರ್ಡ್‌ ಅವರನ್ನು ದಿವ್ಯಾಂಗರ ಲಿಸ್ಟ್‌ಗೆ ಸೇರಿಸಿತು. ಈ ಸಮಸ್ಯೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳು ಇವು:
Tap to resize

ಇತ್ತೀಚೆಗಷ್ಟೇ ನ್ಯೂಯಾರ್ಕ್ ನೋಹ್ ಸಿಂಡರ್‌ಗಾರ್ಡ್‌ ಅವರನ್ನು ದಿವ್ಯಾಂಗರ ಲಿಸ್ಟ್‌ಗೆ ಸೇರಿಸಿತು. ಈ ಸಮಸ್ಯೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳು ಇವು:
ಈ ಇನ್ಫೆಕ್ಷನ್‌ಗೆ ಕೋಕ್ಸಾಕಿವೈರಸ್ ಎ16 ಎಂ ವೈರಸ್ ಕಾರಂ. ವೈರಸ್‌ಗಳಲ್ಲಿ ಎಂರೋವೈರಸ್ ಕುಟುಂಬಕ್ಕೆ ಸೇರಿದ ವೈರಸ್ ಆಗಿದೆ ಇದು.
ಸೋಂಕಿತ ವ್ಯಕ್ತಿಯ ಎಂಜಲು, ಗಂಟಲಿನ ದ್ರವ, ಮಲ, ಗುಳ್ಳೆ ದ್ರವ ಅಥವಾ ಮೂಗಿನ ಸ್ರವಿಸುವಿಕೆಯಿಂದ ಸೋಂಕಿತರ ಸಂಪರ್ಕದ ಮೂಲಕ ಇದು ಹೆಚ್ಚಾಗಿ ಹರಡುತ್ತದೆ.
ಕಲುಷಿತ ವಸ್ತುಗಳಾದ ಆಟಿಕೆಗಳು ಮತ್ತು ಟಾಯ್ಲೆಟ್ ಹ್ಯಾಂಡಲ್‌ಗಳ ಸಂಪರ್ಕದ ಮೂಲಕವೂ ವೈರಸ್ ಸುಲಭವಾಗಿ ಹರಡಬಹುದು.
ವೈರಸ್ ತಗುಲಿದ ನಂತರ 3-6 ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮೊದಲ ಲಕ್ಷಣ ಜ್ವರ. ನಂತರ ಗಂಟಲು ನೋವು, ಹಸಿವಿಲ್ಲದಿರುವುದು ಅನುಭವವಾಗುತ್ತದೆ.
ಬಾಯಿಯಲ್ಲಿ ಹುಣ್ಣು ಹೆಚ್ಚಾಗಿ ನೋವು ಹೆಚ್ಚಾಗುತ್ತದೆ. ಕೈ ಮತ್ತು ಕಾಲುಗಳಲ್ಲಿ ರಾಶಸ್ ಆಗುತ್ತದೆ.
ಕೆಲವೊಮ್ಮೆ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ. ಆದರೆ ವೈರಸ್ ಸೋಂಕು ತಗುಲಿರುತ್ತದೆ.
5 ವರ್ಷಕ್ಕಿಂತ ಚಿಕ್ಕ ಮಕ್ಕಳಲ್ಲಿ ಇದು ಸಾಮಾನ್ಯವಾಗಿ ಕಂಡು ಬರುತ್ತದೆ. ಹ್ಯಾಂಡ್ ಫೂಟ್ & ಮೌತ್ ಡಿಸೀಸ್ ದೊಡ್ಡವರಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. (ಸಿಂಡರ್‌ಗಾರ್ಡ್‌ ಮಕ್ಕಳಿಗೆ ಬೇಸ್‌ಬಾಲ್ ಕ್ಯಾಂಪ್‌ ನಡೆಸುತ್ತಿದ್ದಾಗಲೇ ವೈರಸ್ ತಗುಲಿತ್ತು)
ಡಿಹೈಡ್ರೇಷನ್ ತುಂಬಾ ಸಾಮಾನ್ಯ ಲಕ್ಷಣ: ಗಂಟಲು ಮತ್ತ ಬಾಯಲ್ಲಿ ಹುಣ್ಣುಗಳಾಗಿ ನೀರು ಕುಡಿಯಲಾಗದೆ ಈ ಸಂದರ್ಭದಲ್ಲಿ ಡಿಹೈಡ್ರೇಷನ್ ಕೂಡಾ ಆಗುತ್ತದೆ.
ಇದಕ್ಕೆ ಚಿಕಿತ್ಸೆ ಇಲ್ಲ: ಜ್ವರ ಮತ್ತು ನೋವಿಗೆ ಔಷಧ ಇದ್ದರೂ ಈ ರೋಗಕ್ಕೆ ಪ್ರತ್ಯೇಕ ಔಷಧವಿಲ್ಲ.

Latest Videos

click me!