ಹೋಳಿ ಹಬ್ಬ (Holi festival) ಬಣ್ಣಗಳ ಸುಂದರ ಹಬ್ಬ. ಆದರೆ ಬಣ್ಣಗಳಲ್ಲಿ ಬಳಸುವ ರಾಸಾಯನಿಕಗಳು ಆರೋಗ್ಯಕ್ಕೆ ಅಪಾಯವಾಗಬಹುದು. ಎನ್‌ಸಿಬಿಐ ವರದಿಯ ಪ್ರಕಾರ, ಹಾನಿಕಾರಕ ರಾಸಾಯನಿಕಗಳಾದ ಲೆಡ್ ಆಕ್ಸೈಡ್, ಕ್ರೋಮಿಯಂ ಅಯೋಡೈಡ್, ಕಾಪರ್ ಸಲ್ಫೇಟ್, ಪಾದರಸ ಸಲ್ಫೈಟ್ ಮತ್ತು ಅಲ್ಯೂಮಿನಿಯಂ ಬ್ರೋಮೈಡ್ ಅನ್ನು ಇತ್ತೀಚಿನ ದಿನಗಳಲ್ಲಿ ಬಣ್ಣಗಳಲ್ಲಿ ಬಳಸಲಾಗುತ್ತದೆ. ಈ ರಾಸಾಯನಿಕಗಳು ಚರ್ಮದ ಸಮಸ್ಯೆಗಳು, ಕಣ್ಣಿನ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಯಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.