ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ದೇಹದ ಟೋನ್ ಸ್ಲಿಮ್ ಆಗಿ ಕಾಣುತ್ತದೆ ಅನ್ನೋದೇನೋ ನಿಜಾ, ಆದರೆ ಇದರಿಂದ ದೇಹದ ಭಾಗಗಳ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳ (negative effect) ಸಾಧ್ಯತೆಯೂ ಇದೆ ಅನ್ನೋದು ನಿಮಗೆ ತಿಳಿದಿರಬೇಕು. ವಾಸ್ತವವಾಗಿ, ಹವಾಮಾನದಲ್ಲಿನ ಬದಲಾವಣೆಗಳ ಪರಿಣಾಮವು ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ, ಚರ್ಮದ ಶುಷ್ಕತೆ ಹೆಚ್ಚಾಗುತ್ತದೆ, ಬೇಸಿಗೆಯಲ್ಲಿ, ಬೆವರುವ ಸಮಸ್ಯೆಯಿಂದಾಗಿ, ಯೋನಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ. ಹೀಗಿರೋವಾಗ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ಯೋನಿ ಅನೇಕ ಸಮಸ್ಯೆಗಳಿಂದ ಬಳಲುತ್ತದೆ.