Corona Virus: ಮತ್ತೆ ಹರಡ್ತಿದೆ ಕೋವಿಡ್, ಸೋಂಕು ತಗುಲಬಾರ್ದು ಅಂದ್ರೆ ಹೀಗ್ ಮಾಡಿ

First Published Jan 7, 2023, 4:31 PM IST

ಚಳಿಗಾಲ ಬಂದ ಕೂಡಲೇ ಕೋವಿಡ್ ಸೋಂಕು ಮತ್ತೊಮ್ಮೆ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದೆ.ಒಂದು ಸಾರಿ ಸೋಂಕು ತಗುಲಿದರೆ ಹಲವು ದಿನಗಳ ಕಾಲ ಅನಾರೋಗ್ಯದಿಂದ ಒದ್ದಾಡ್ಬೇಕಾಗುತ್ತದೆ. ಹಾಗಾಗಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.

ಆಹಾರದ ಮೂಲಕ COVID-19 ಅನ್ನು ಹರಡುವುದು ಅತ್ಯಂತ ಅಸಂಭವವಾಗಿದ್ದರೂ ಸಹ, ಅತ್ಯುತ್ತಮವಾದ ಕೈ ನೈರ್ಮಲ್ಯವನ್ನು ಬಳಸುವುದು ಇನ್ನೂ ಉತ್ತಮವಾಗಿದೆ. ಮನೆಯಲ್ಲಿ ಊಟವನ್ನು ತಯಾರಿಸುವಾಗ ಆಹಾರವನ್ನು ತಯಾರಿಸುವ ಮೊದಲು, ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. 

ಬಿಸಿ ಆಹಾರ ಸೇವಿಸಿ, ತಣ್ಣಗಿನ ಆಹಾರದಿಂದ ದೂರವಿರಿ
ಆರೋಗ್ಯವನ್ನು ಚೆನ್ನಾಗಿಡಲು ಯಾವಾಗಲೂ ಬಿಸಿ ಆಹಾರವನ್ನೇ ಸೇವಿಸಬೇಕು. ತಂಗಳು ಅನ್ನ ಅಥವಾ ತಣ್ಣಗಿನ ಅಹಾರವನ್ನು ತಿನ್ನುವುದರಿಂದ ಆರೋಗ್ಯ ಹದಗೆಡಬಹುದು. ಇದರಿಂದ ಸುಲಭವಾಗಿ ಕೊರೋನಾ ಸೋಂಕು ಸಹಲ ತಗುಲಬಹುದು.

ಬೇಯಿಸಿದ ಆಹಾರವನ್ನು ಸೇವಿಸಿ
ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ಆಹಾರದಲ್ಲಿ ವೈರಸ್‌ಗಳು ಉಳಿಯುವುದಿಲ್ಲ. ತಾಪಮಾನ ಹೆಚ್ಚಾದಂತೆ, ವೈರಸ್‌ಗಳು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳ್ಳುತ್ತವೆ. ಹೀಗಾಗಿ ಬೇಯಿಸಿದ, ಕುದಿಸಿದ ಮತ್ತು ಮೈಕ್ರೊವೇವ್‌ ಮಾಡಿದ ಆಹಾರಗಳನ್ನು ಹೆಚ್ಚು ಸೇವಿಸಿ. ಇದರಿಂದ ನಿಮ್ಮ ಆರೋಗ್ಯ ಹದಗೆಡುವ ಅಪಾಯ ಕಡಿಮೆ.

ರೆಸ್ಟೋರೆಂಟ್‌ನಲ್ಲಿ ಊಟ ಮಾಡದಿರಿ
ಸಾಧ್ಯವಾದಷ್ಟೂ ಮನೆಯಲ್ಲಿ ತಯಾರಿಸಿದ ಆಹಾರವನ್ನಷ್ಟೇ ಸೇವಿಸಿ. ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಬೇಡಿ. COVID-19 ಹರಡುವ ಮುಖ್ಯ ಮಾರ್ಗವೆಂದರೆ ಸೋಂಕಿತ ಜನರ ಉಸಿರಾಟದ ಹನಿಗಳ ಮೂಲಕ. ಹೀಗಾಗಿ ನೀವು ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತಿದ್ದರೆ ರೆಸ್ಟೋರೆಂಟ್ ಸಿಬ್ಬಂದಿಯಿಂದ ವೈರಲ್ ತಗುಲುವ ಸಾಧ್ಯತೆ ಹೆಚ್ಚು. ಹೀಗಾಗಿ ಮನೆಯಲ್ಲಿಯೇ ಊಟ ಮಾಡಿ. ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದೇ ಆಗಿದ್ದರೆ ಜನರಿಂದ ಅಂತರ ಕಾಯ್ದುಕೊಳ್ಳಿ.

ನೈರ್ಮಲ್ಯ ಅಭ್ಯಾಸ ರೂಢಿಸಿಕೊಳ್ಳಿ
ಆಹಾರದ ಮೂಲಕವೂ ಸುಲಭವಾಗಿ ಕೋವಿಡ್ ಸೋಂಕು ಹರಡಬಹುದು. ಹೀಗಾಗಿ ಸರಿಯಾದ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ವಿಶೇಷವಾಗಿ ಕಿರಾಣಿ ಅಂಗಡಿಯಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ನಂತರ ಸೋಪ್ ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆಯಿರಿ.

ಕಡ್ಡಾಯವಾಗಿ ಮಾಸ್ಕ್ ಧರಿಸಿ
ಕೊರೋನಾ ಕಡಿಮೆಯಾಯ್ತು ಎಂದು ತಿಳಿದುಕೊಂಡು ಸಾಮಾನ್ಯವಾಗಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ. ಆದರೆ ಯಾವುದೇ ವೈರಸ್ ಹರಡಬಾರದು ಅಂದರೆ ಮಾಸ್ಕ್‌ ಧರಿಸಿರಬೇಕಾದುದು ಅಗತ್ಯ. ಯಾಕೆಂದರೆ ಕೋವಿಡ್ ಮುಖ್ಯವಾಗಿ ಕಣ್ಣು, ಮೂಗು ಮತ್ತು ಬಾಯಿಯ ಸಂಪರ್ಕದಿಂದ ಉಂಟಾಗಬಹುದು. ಹೀಗಾಗಿ ಮನೆಯಿಂದ ಹೊರ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ. ಜನರು ಗುಂಪು ಸೇರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರಿ.

ಗಿಡಮೂಲಿಕೆಗಳು ಸೋಂಕಿನಿಂದ ರಕ್ಷಿಸುತ್ತವೆ
ಭಾರತೀಯ ಅಡುಗೆಮನೆಯಲ್ಲಿ ಬಳಸಲಾಗುವ ಅನೇಕ ಮಸಾಲೆಗಳನ್ನು ಶತಮಾನಗಳಿಂದ ಆಯುರ್ವೇದ ತಜ್ಞರು ಔಷಧಿಗಳಾಗಿ ಬಳಸಿದ್ದಾರೆ. ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಕರಿಮೆಣಸು, ತುಳಸಿ ಮುಂತಾದ ಗಿಡಮೂಲಿಕೆಗಳು ಕೋವಿಡ್ ಸಮಯದಲ್ಲಿ ನೈಸರ್ಗಿಕ ರೋಗನಿರೋಧಕ ವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳ ಸೇವನೆಯು ನಿಮಗೆ ಪ್ರಯೋಜನಕಾರಿಯಾಗಿದೆ.

click me!