ನೀವು ಆಲೂಗಡ್ಡೆಯನ್ನು ಈ ರೀತಿ ತಿಂದ್ರೆ ಹುಷಾರ್… ಕ್ಯಾನ್ಸರ್ ಬರಬಹುದು!

First Published | Jan 30, 2024, 5:17 PM IST

ಇತ್ತೀಚಿನ ದಿನಗಳಲ್ಲಿ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಜನರು ತಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸದೇ ಇರುವ ಕಾರಣ ಜೀವಕೋಶಗಳ ಕಾರ್ಯವು ಹದಗೆಡುತ್ತದೆ,ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚುತ್ತಿದೆ. 
 

ಕ್ಯಾನ್ಸರ್ (cancer) ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಇದು ದೇಹವನ್ನು ಒಳಗಿನಿಂದ ಟೊಳ್ಳಾಗಿಸುತ್ತದೆ. ಇದರಲ್ಲಿ, ಜೀವಕೋಶಗಳು ಅಸಹಜ ರೀತಿಯಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಗೆಡ್ಡೆ ರೂಪುಗೊಳ್ಳುತ್ತದೆ. ಕ್ರಮೇಣ ಅದು ತನ್ನ ಸ್ಥಳದಿಂದ ಇತರ ಅಂಗಗಳಿಗೆ ಹರಡುತ್ತದೆ. ಕ್ಯಾನ್ಸರ್ ಮತ್ತು ಜೀವನಶೈಲಿಯ ನಡುವೆ ಆಳವಾದ ಸಂಬಂಧವಿದೆ. ಆದ್ದರಿಂದ, ನೀವು ನಿಮ್ಮ ಜೀವನಶೈಲಿ ಸುಧಾರಿಸುವ ಮೂಲಕ ಈ ಗಂಭೀರ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
 

ನಾವು ಸೇವಿಸುವ ಆಹಾರವು ಕ್ಯಾನ್ಸರ್ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಶಕ್ತಿ ಮತ್ತು ಹೆಚ್ಚಿನ ಕೊಬ್ಬಿನ ಆಹಾರವು (fatty food) ಬೊಜ್ಜನ್ನು ಹೆಚ್ಚಿಸುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಸಂಶೋಧಕರು ತಿಳಿಸಿದ್ದಾರೆ. ನೀವು ಈ ರೋಗವನ್ನು ತಪ್ಪಿಸಲು ಬಯಸಿದರೆ, ಆಲೂಗಡ್ಡೆಯನ್ನು ತಪ್ಪು ರೀತಿಯಲ್ಲಿ ತಿನ್ನುವುದು ಸೇರಿದಂತೆ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು.
 

Tap to resize

ಆಲೂಗಡ್ಡೆಯಿಂದ ಯಾವ ರೀತಿ ಕ್ಯಾನ್ಸರ್ ಹರಡುತ್ತದೆ? ಈ ರೋಗದ ರೋಗಲಕ್ಷಣಗಳು, ಕಾರಣಗಳು ಯಾವುವು?, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಗ್ಗೆ ಸರಿಯಾದ ಸಲಹೆ ನಿಮಗೆ ಬೇಕೆಂದಿದ್ದರೆ, ಇದನ್ನ ಪೂರ್ತಿಯಾಗಿ ಓದಲೇಬೇಕು. 
 

ಆಲೂಗಡ್ಡೆಯನ್ನು ಈ ರೀತಿ ತಿನ್ನುವುದು
ಆಲೂಗಡ್ಡೆ ತಿನ್ನುವುದು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ ಅಲ್ವಾ? ಇದು ಅಕ್ರಿಲಾಮೈಡ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ ಮತ್ತು ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ರಿಫ್) ಪ್ರಕಾರ ಇದು ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕೆಲವು ರೀತಿಯ ಸಕ್ಕರೆಯೊಂದಿಗೆ ಹೆಚ್ಚಿನ ತಾಪಮಾನದಲ್ಲಿ ಆಲೂಗಡ್ಡೆಯನ್ನು ಉರಿಯುವುದು (fired potato) ಕ್ಯಾನ್ಸರ್ಗೆ ಕಾರಣವಾಗಬಹುದು.

ರಾತ್ರಿ ತಡವಾಗಿ ನಿದ್ರಿಸುವುದು
ಮಲಗುವ ಮತ್ತು ಎದ್ದೇಳುವ ಸಮಯವನ್ನು ನಿಗದಿಪಡಿಸಬೇಕು. ಏಕೆಂದರೆ ರಾತ್ರಿ ತಡವಾಗಿ ನಿದ್ರೆ ಮಾಡೋದು ಸ್ತನ, ಕರುಳು, ಅಂಡಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗೆ ಕಾರಣವಾಗಬಹುದು. ಈ ಮಾಹಿತಿಯನ್ನು ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ನೀಡಿದೆ. ತಡರಾತ್ರಿ ಡಿಜಿಟಲ್ ಸಾಧನವನ್ನು (Digital Gadgets) ಬಳಸುವುದರಿಂದ ದೇಹವು ನೀಲಿ ಬೆಳಕಿಗೆ (blue lights) ಒಡ್ಡಿಕೊಳ್ಳಲಾಗುತ್ತದೆ. ಇದು ಮೆಲಟೋನಿನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀವಕೋಶಗಳ ಕಾರ್ಯನಿರ್ವಹಣೆಯನ್ನು ಹದಗೆಡಿಸುತ್ತದೆ.

ಸನ್ ಸ್ಕ್ರೀನ್ ಬಳಸದಿರುವುದು
ವಿಟಮಿನ್ ಡಿ ಅಗತ್ಯ ಇದೆ ನಿಜಾ. ಆದರೆ ಬಿಸಿಲಿನಲ್ಲಿ ಅತಿಯಾಗಿ ಇರೋದು ಸಹ ಸರಿಯಲ್ಲ. ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದು ಚರ್ಮದ ಕ್ಯಾನ್ಸರ್ ಗೆ (skin cancer) ಕಾರಣವಾಗಬಹುದು. ಬಲವಾದ ಸೂರ್ಯನ ಬೆಳಕಿನಲ್ಲಿ ಅಪಾಯಕಾರಿ ನೇರಳಾತೀತ ಕಿರಣಗಳಿವೆ (Ultraviolate Rays).  ಇದು ಚರ್ಮದಲ್ಲಿರುವ ಡಿಎನ್ಎ ಕೋಶಗಳನ್ನು ನಾಶಪಡಿಸುತ್ತದೆ. ನಂತರ, ಜೀವಕೋಶಗಳು ತಾವಾಗಿಯೇ ವೇಗವಾಗಿ ರೂಪುಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಚರ್ಮದ ಕ್ಯಾನ್ಸರ್ ಸಂಭವಿಸಬಹುದು.

ಸೋಮಾರಿಯಾಗಿರುವುದು
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ದೈಹಿಕ ಚಟುವಟಿಕೆ (Physical Activities) ಕಡಿಮೆಯಾಗಿದೆ. ಕಚೇರಿಯಲ್ಲಿ ಕುರ್ಚಿಯಲ್ಲಿ ಕುಳಿತು ಅಥವಾ ಅವರ ಕೆಲಸದಲ್ಲಿ ಅನೇಕ ಗಂಟೆ ಕುಳಿತುಕೊಂಡೇ ಕಳೆಯಲಾಗುತ್ತದೆ. ಜಡ ಜೀವನಶೈಲಿಯಿಂದಾಗಿ, ಕ್ಯಾನ್ಸರ್ ಅಪಾಯವು ವೇಗವಾಗಿ ಹೆಚ್ಚಾಗುತ್ತದೆ, ಆದ್ದರಿಂದ ನೀವು ವಾರದಲ್ಲಿ ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆಯನ್ನು (physical activity) ಮಾಡಬೇಕು.
 

ಕ್ಯಾನ್ಸರ್ ಗೆ ಕಾರಣವಾಗುವ ಇತರ ಅಂಶಗಳು ಯಾವುವು ನೋಡೋಣ 
ಧೂಮಪಾನ (Smoking)
ಅತಿಯಾದ ಮದ್ಯಪಾನ (Boozing)
ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದು
ಅತಿಯಾದ ಒತ್ತಡದಲ್ಲಿರುವುದು (more stress)
ಇವೆಲ್ಲಾ ಕಾರಣಗಳಿಂದ ಕ್ಯಾನ್ಸರ್ ಕೋಶಗಳು ನಮ್ಮ ದೇಹದಲ್ಲಿ ಬೆಳೆಯಲು ಆರಂಭವಾಗುತ್ತದೆ. 

Latest Videos

click me!