Published : Nov 05, 2021, 04:50 PM ISTUpdated : Nov 05, 2021, 04:52 PM IST
ಶವಾಸನದ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೊಂದು ಯೋಗ ಭಂಗಿಯಾಗಿದ್ದು, ದೇಹಕ್ಕೆ ನಿರಾಳತೆಯನ್ನು ನೀಡುತ್ತದೆ. ಸಂಪೂರ್ಣವಾಗಿ ದಣಿದ ನಂತರ ಈ ಆಸನವನ್ನು ಮಾಡಿ, ತಕ್ಷಣ ಪರಿಹಾರ ಪಡೆಯಿರಿ. ಶವಾಸನ (shavasana) ಎಂದರೇನು? ಮತ್ತು ಅದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
ಭಾರತೀಯ ಯೋಗ ಶಾಸ್ತ್ರದಲ್ಲಿ ಹಲವು ಯೋಗಗಳ ಬಗ್ಗೆ ತಿಳಿಸಲಾಗಿದೆ. ಪ್ರತಿಯೊಂದು ಯೋಗಾಸನವೂ ಕಷ್ಟವಲ್ಲ. ಮಾಡಲು ತುಂಬಾ ಸುಲಭವಾದ ಕೆಲವು ಯೋಗಾಸನಗಳಿವೆ. ಇದೇ ವೇಳೆ ಈ ಯೋಗಾಸನಗಳಿಂದ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ. ಇವುಗಳಲ್ಲಿ ಒಂದು ಶವಾಸನ (shavasana)ಇದರ ನಿಯಮಿತ ಅಭ್ಯಾಸವು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಬಹುದು.
210
ದೇಹಕ್ಕೆ ಪೂರ್ತಿಯಾಗಿ ಆರಾಮವನ್ನು ಕೊಡುವ ಈ ಯೋಗವನ್ನು ಮಾಡೋದು ಸುಲಭ. ಈ ಯೋಗಾಸನವು ಆಯಾಸವನ್ನು ನಿವಾರಿಸಲು ಮತ್ತು ದೈಹಿಕ ಮತ್ತು ಮಾನಸಿಕ ವಿಶ್ರಾಂತಿ (mental and physical rest) ಪಡೆಯಲು ಸಹಾಯ ಮಾಡುತ್ತದೆ. ತೀವ್ರವಾಗಿ ದಣಿದಿರುವಾಗ ಮತ್ತು ಕ್ಷಣಾರ್ಧದಲ್ಲಿ ಕೆಲಸಕ್ಕೆ ಮರಳಬೇಕಾದಾಗ ಈ ಆಸನವನ್ನು ಸಹ ಮಾಡಬಹುದು.
310
ಶವಾಸನ ಎಂದರೇನು: ಶವಾಸನ ಯೋಗ ವಿಜ್ಞಾನದ ಅತ್ಯಂತ ಮಹತ್ವದ ಆಸನ. ಇದನ್ನು ಯಾವುದೇ ಯೋಗ ಸೆಷನ್ (yoga session)ಮಾಡಿದ ನಂತರ ಕೊನೆಯ ಆಸನವಾಗಿ ಮಾಡಲಾಗುತ್ತದೆ. 'ಶವಾಸನ' ಎಂಬ ಪದವು ಎರಡು ವಿಭಿನ್ನ ಪದಗಳನ್ನು ಒಳಗೊಂಡಿದೆ, ಅಂದರೆ 'ದೇಹ' (ಶವ) ಮತ್ತು 'ಆಸನ'. 'ದೇಹ' ಎಂದರೆ ಅಕ್ಷರಶಃ ಮೃತ ದೇಹ, ಆಸನ ಎಂದರೆ 'ಮುದ್ರಾ' ಅಥವಾ 'ಕುಳಿತುಕೊಳ್ಳುವುದು' ಎಂದರ್ಥ.
410
ಶವಾಸನ ತುಂಬಾ ಸರಳವಾಗಿ ಕಾಣುತ್ತದೆ, ಆದರೆ ಇದು ಮಲಗುವುದು ಮಾತ್ರವಲ್ಲದೆ ಮನಸ್ಸಿನ ಭಾವನೆಗಳು (feelings) ಮತ್ತು ಒಟ್ಟಿಗೆ ದೇಹದ ಆಯಾಸ ಎರಡನ್ನೂ ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ. ಇದನ್ನು ಮಾಡುವುದು ಹೇಗೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿದುಕೊಳ್ಳಲು ಮುಂದೆ ಓದಿ.
510
ಶವಾಸನ ಮಾಡುವುದು ಹೇಗೆ?
ಮೊದಲು ಯೋಗ ಚಾಪೆಯ ಮೇಲೆ ಬೆನ್ನನ್ನು ಚಾಪೆಗೆ ತಾಗಿಸಿ ಮಲಗಿ ಮತ್ತು ಕಣ್ಣುಗಳನ್ನು ನಿಧಾನವಾಗಿ ಮುಚ್ಚಿಕೊಳ್ಳಿ.
ನಿಮ್ಮ ಕಾಲುಗಳು ಸಂಪೂರ್ಣವಾಗಿ ಹರಡಿಕೊಂಡಿರಬೇಕು ಮತ್ತು ಮೊಣಕಾಲುಗಳು (knees), ಉಗುರುಗಳು, ಪಾದಗಳು, ಅಂಗೈಗಳು ಇತ್ಯಾದಿಗಳು ವಿಶ್ರಾಂತಿ ಸ್ಥಿತಿಯಲ್ಲಿವೆ ಎಂಬುದನ್ನು ನೆನಪಿನಲ್ಲಿಡಿ.
610
ಕೈಗಳನ್ನು ದೇಹದ ಹತ್ತಿರ ಇರಿಸಿ, ಆದರೆ ಅದು ದೇಹವನ್ನು ಸ್ಪರ್ಶಿಸಲು ಬಿಡಬೇಡಿ ಮತ್ತು ಅಂಗೈಗಳನ್ನು ಆಕಾಶದ ಕಡೆಗೆ ಇರಿಸಿ. ಈಗ 4-5 ಬಾರಿ ಆಳವಾದ ಮತ್ತು ದೀರ್ಘವಾದ ಉಸಿರನ್ನು (deep breath) ತೆಗೆದುಕೊಳ್ಳಿ. ನಂತರ ನಿಮ್ಮ ಗಮನವನ್ನು ಉಸಿರಿನ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಿ ಮತ್ತು ಸಾಧ್ಯವಾದಷ್ಟು ಉಸಿರನ್ನು ನಿಧಾನಗೊಳಿಸಿ.
710
ಈ ಭಂಗಿಯಲ್ಲಿ 5 ರಿಂದ 10 ನಿಮಿಷಗಳ ಕಾಲ ಇರಿ. ಯಾವುದೇ ಯೋಚನೆ, ಆಲೋಚನೆ ಮನಸಿನಲ್ಲಿ ಸುಳಿಯದಂತೆ ಗಮನಿಸಿ. ಹತ್ತು ನಿಮಿಷದ ಬಳಿಕ ನಿರಾಳರಾದಾಗ, ಉಸಿರನ್ನು (breathing) ಸಾಮಾನ್ಯಗೊಳಿಸಿ ಮತ್ತು ನೇರವಾಗಿ ಕುಳಿತುಕೊಳ್ಳಿ. ಕಣ್ಣುಗಳನ್ನೂ ನಿಧಾನವಾಗಿ ತೆರೆಯಿರಿ.
810
ಶವಾಸನದ ಪ್ರಯೋಜನಗಳು: ಈ ಆಸನವು ಗಮನ ಮತ್ತು ಸ್ಮರಣೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು (High BP) ನಿಯಂತ್ರಿಸಲು ನೆರವಾಗುತ್ತದೆ. ಇದರಿಂದ ಹೃದಯದ ಅರೋಗ್ಯ ಉತ್ತಮವಾಗಿರುತ್ತದೆ. ತಲೆನೋವು ಮತ್ತು ನಿದ್ರಾಹೀನತೆಯನ್ನು ನಿವಾರಿಸಲು ಶವಾಸನವನ್ನು ಮಾಡುವುದು ಒಳ್ಳೆಯದು.
910
ಹೆಚ್ಚು ಶ್ರದ್ಧೆಯ ಯೋಗಾಸನದ ನಂತರ ದೇಹಕ್ಕೆ ವಿಶ್ರಾಂತಿ ನೀಡಲು ಈ ಆಸನವನ್ನು ಮಾಡಬಹುದು. ಶವಾಸನದಿಂದ ತಾತ್ಕಾಲಿಕ ಆತಂಕ ಮತ್ತು ಒತ್ತಡ ನಿವಾರಣೆ (stress control)ಮಾಡಬಹುದು. ಮನಸಿಗೆ ಶಾಂತಿ ಸಿಗುವಂತೆ ಮಾಡಲು ಈ ಯೋಗ ಸಹಕಾರಿಯಾಗಿದೆ.
ಕಚೇರಿ ಅಥವಾ ಹೊರಗಿನ ಆಯಾಸವನ್ನು ನಿವಾರಿಸಲು ಬಯಸಿದರೂ, ಶವಾಸನವು ಸಾಕಷ್ಟು ಪ್ರಯೋಜನಕಾರಿಯಾಗಿದೆ.
1010
ಆಸನಗಳನ್ನು ಮಾಡುವಾಗ ಈ ಮುನ್ನೆಚ್ಚರಿಕೆಗಳನ್ನು ಇರಿಸಿ: ಬೆನ್ನಿನ ಕೆಳಭಾಗದ ಸ್ನಾಯುಗಳು ಅಥವಾ ಹ್ಯಾಮ್ ಸ್ಟ್ರಿಂಗ್ಸ್ (thigh muscles) ಕಠಿಣವಾಗಿದ್ದರೆ, ಶವಾಸನದ ಅಭ್ಯಾಸವು ಯಾವುದೇ ಸಮಯದಲ್ಲಿ ಬೆನ್ನು ನೋವನ್ನು ಉಂಟುಮಾಡಬಹುದು, ಈ ಸ್ಥಿತಿಯನ್ನು ತಪ್ಪಿಸಲು ಶವಾಸನ ಮಾಡುವಾಗ ನಿಮ್ಮ ಕಾಲುಗಳನ್ನು ಸ್ವಲ್ಪ ಎತ್ತಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.