ಸಂಶೋಧನೆಯೊಂದು ದಿನಕ್ಕೆ ಮೂರು ಕಪ್ ಕಾಫಿ ಕುಡಿಯುವುದರಿಂದ ಜೀವಿತಾವಧಿಯಲ್ಲಿ ಸರಾಸರಿ ಇಷ್ಟು ವರ್ಷಗಳ ಹೆಚ್ಚಳವಾಗಬಹುದು ಎಂದು ಹೇಳಿದೆ. ಈ ಅಧ್ಯಯನವು 85 ಅಧ್ಯಯನಗಳನ್ನು ಪರಿಶೀಲಿಸಿ, ಮರಣ ಪ್ರಮಾಣ ಮತ್ತು ಆರೋಗ್ಯ ಸೂಚಕಗಳ ಮೇಲೆ ಕಾಫಿಯ ಪರಿಣಾಮವನ್ನು ವಿಶ್ಲೇಷಿಸಿದೆ.
ಕಾಫಿ ಕುಡಿಯುವುದರಿಂದ ಜೀವಿತಾವಧಿಯಲ್ಲಿ ಎರಡು ವರ್ಷ ಏರಿಕೆಯಾಗಲಿದೆ ಎಂದು ಸಂಶೋಧನೆಯೊಂದು ಹೇಳಿದೆ. ಆದ್ರೆ ದಿನಕ್ಕೆ ಎಷ್ಟು ಕಪ್ ಕಾಫಿ ಸೇವನೆ ಮಾಡಬೇಕು ಎಂಬುದರ ಮಾಹಿತಿಯನ್ನು ಸಂಶೋಧನೆಯಲ್ಲಿ ಹೇಳಲಾಗಿದೆ.
25
coffee
ಪೋರ್ಚುಗಲ್‌ನ ಕೊಯಿಂಬ್ರಾ ವಿಶ್ವವಿದ್ಯಾನಿಲಯದ ಸಮಗ್ರ ಅಧ್ಯಯನ ನಿಯಮಿತ ಕಾಫಿ ಸೇವನೆಯ ಲಾಭಗಳನ್ನು ಹೇಳಿದೆ. ನಿಯಮಿತ ಕಾಫಿ ಸೇವನೆಯಯಿಂದ ಜೀವಿತಾವಧಿ ಹೆಚ್ಚಾಗಲಿದೆ. ದೀರ್ಘಾವಧಿ ಜೀವನಕ್ಕೆ ಕಾಫಿ ಸೇವನೆ ಸಹಾಯ ಮಾಡುತ್ತದೆ.
35
ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸಂಶೋಧನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಒಟ್ಟು 85 ಅಧ್ಯಯನದ ವರದಿಗಳನ್ನು ಆಧರಿಸಿ ದಿನಕ್ಕೆ ಎಷ್ಟು ಕಾಫಿ ಕುಡಿಯಬೇಕೆಂದು ಸೂಚಿಸಲಾಗಿದೆ.
45
85 ಅಧ್ಯಯನಗಳನ್ನು ಪರಿಶೀಲಿಸಿದ ಬಳಿಕ ದಿನಕ್ಕೆ ಮೂರು ಕಪ್ ಕಾಫಿ ಕುಡಿಯುವುದರಿಂದ ಸರಾಸರಿ ವ್ಯಕ್ತಿಯ ಜೀವನಕ್ಕೆ ಹೆಚ್ಚುವರಿ 1.84 ವರ್ಷಗಳು ಹೆಚ್ಚಾಗುತ್ತದೆ ಎಂದು ಈ ಅಧ್ಯಯನ ಹೇಳಿದೆ. ಇದು ಮರಣ ಪ್ರಮಾಣ ಮತ್ತು ಇತರ ಆರೋಗ್ಯ ಸೂಚಕಗಳ ಮೇಲೆ ಕಾಫಿಯ ಪರಿಣಾಮದ ಪರೀಕ್ಷೆಯನ್ನು ಆಧರಿಸಲಾಗಿದೆ.
55
ಕಾಫಿ ಉತ್ತೇಜಕ ಕೆಫೀನ್‌ನಲ್ಲಿ ಸಮೃದ್ಧವಾಗಿದೆ. ಮಧ್ಯಮವಾಗಿ ತೆಗೆದುಕೊಂಡಾಗ ಕೆಫೀನ್ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಏಕೆಂದರೆ ಅದು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯ ಬಿಡುಗಡೆಗೆ ಕಾರಣವಾದ ಮೆದುಳಿ (Brain)ನಲ್ಲಿರುವ ಹಾರ್ಮೋನ್ ಅಡ್ರಿನಾಲಿನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ.