ಈಗಿನ ಬ್ಯುಸಿ ಲೈಫನಲ್ಲಿ ಡಯಾಬಿಟಿಸ್ ತುಂಬಾನೇ ಕಾಮನ್ ಆಗಿದೆ. ಡಯಾಬಿಟಿಸ್ ಜೀವನದ ಒಂದು ಭಾಗವಾಗಿಬಿಟ್ಟಿದೆ. ಆದ್ರೆ ಶುಗರ್ ಕಂಟ್ರೋಲ್ ಮಾಡದಿದ್ರೆ ಆರೋಗ್ಯಕ್ಕೆ ತುಂಬ ಅಪಾಯಕಾರಿ. ಹಾಗಾಗಿ ಓಟ್ಸ್ ಸೇವನೆ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೇದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಓಟ್ಸ್ (Oats) ಆರೋಗ್ಯಕ್ಕೆ ಔಷಧಿಗಿಂತ ಕಡಿಮೆಯೇನಿಲ್ಲ. ಇದು ಫೈಬರ್, ವಿಟಮಿನ್-ಎ, ಬಿ, ಪ್ರೋಟೀನ್, ಕ್ಯಾಲ್ಸಿಯಂ ಖನಿಜಗಳಂತಹ ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತೂಕ ನಷ್ಟದಿಂದ ಹಿಡಿದು ಮಧುಮೇಹದವರೆಗೆ ಅನೇಕ ಕಾಯಿಲೆಗಳಲ್ಲಿ ಓಟ್ಸ್ ಸೇವನೆ ಪ್ರಯೋಜನಕಾರಿ. ಹಾಗಾಗಿ ಜನರು ಹಾಲು ಅಥವಾ ನೀರಿನೊಂದಿಗೆ ಬೆರೆಸಿದ ಓಟ್ಸ್ ಸೇವಿಸುತ್ತಾರೆ.
28
ಓಟ್ಸ್ ದೇಹಕ್ಕೆ ಅನೇಕ ಅಗತ್ಯ ಪೋಷಕಾಂಶಗಳನ್ನು(Nutrient) ನೀಡುತ್ತೆ. ಇದರ ಜೊತೆಗೆ ಓಟ್ಸ್ ನೀರು ಸಹ ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಲ್ಲಿದೆ. ಇದರ ಸೇವನೆ ಅನೇಕ ರೀತಿಯ ಕಾಯಿಲೆಗಳಲ್ಲಿ ಪ್ರಯೋಜನಕಾರಿ. ನೀವು ಮಧುಮೇಹ ರೋಗಿಯಾಗಿದ್ದರೆ ಮತ್ತು ಹೆಚ್ಚುತ್ತಿರುವ ಸಕ್ಕರೆಯನ್ನು ನಿಯಂತ್ರಿಸಲು ಬಯಸೋದಾದ್ರೆ, ನೀವು ಪ್ರತಿದಿನ ಓಟ್ಸ್ ನೀರನ್ನು ಸೇವಿಸಬಹುದು. ಓಟ್ಸ್ ನೀರಿನ ಪ್ರಯೋಜನಗಳನ್ನು ತಿಳಿದುಕೊಳ್ಳೋಣ-
38
ಸಕ್ಕರೆ ನಿಯಂತ್ರಣದಲ್ಲಿಡುತ್ತೆ
ಓಟ್ಸ್ ನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತೆ. ಇದು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ. ಇನ್ಸುಲಿನ್ (Insulin) ಸ್ಪೈಕ್ಸ್ ತಡೆಗಟ್ಟಲು ಸಹ ಇದು ಸಹಾಯಕವಾಗಿದೆ. ಇದಕ್ಕಾಗಿ, ಮಧುಮೇಹ ರೋಗಿಗಳು ಪ್ರತಿದಿನ ಓಟ್ಸ್ ನೀರನ್ನು ಸೇವಿಸಬಹುದು. ಇದಕ್ಕಾಗಿ, ನೀವು ವೈದ್ಯರನ್ನು ಸಂಪರ್ಕಿಸಿ ನಂತರ ಸೇವಿಸಿ.
48
ಕೊಲೆಸ್ಟ್ರಾಲ್(Cholestrol) ನಿಯಂತ್ರಿಸಲು ಸಹಾಯ ಮಾಡುತ್ತೆ
ಓಟ್ಸ್ ನೀರನ್ನು ಕುಡಿಯುವುದರಿಂದ ಉತ್ತಮ ಕೊಲೆಸ್ಟ್ರಾಲ್ ಸುಧಾರಿಸುತ್ತೆ ಎಂದು ಅನೇಕ ಸಂಶೋಧನೆಗಳು ಹೇಳಿಕೊಂಡಿವೆ. ಇದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಸಹ ಕಡಿಮೆ ಮಾಡುತ್ತೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ.
58
ತೂಕ(Weight) ನಿಯಂತ್ರಿಸಲು ಸಾಧ್ಯ
ಓಟ್ಸ್ ನೀರನ್ನು ನಿಯಮಿತವಾಗಿ ಸೇವಿಸೋದರಿಂದ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹ ಓಟ್ಸ್ ನೀರು ಸಹಾಯಕ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಆಹಾರದಲ್ಲಿ ಓಟ್ಸ್ ನೀರನ್ನು ಸೇರಿಸಬಹುದು. ಏಕೆಂದರೆ ಇದು ಹೊಟ್ಟೆ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್ ನೀರಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಟ್ಸ್ ನೀರನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ, ಇದು ದೀರ್ಘಕಾಲದವರೆಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
68
ಜೀರ್ಣಾಂಗ ವ್ಯವಸ್ಥೆಯನ್ನು(Digestive system) ಬಲಪಡಿಸುತ್ತೆ
ಓಟ್ಸ್ ನೀರನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಕರಗುವ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಕರುಳಿನ ಚಲನೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ, ಅಲ್ಲದೇ ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಇದರೊಂದಿಗೆ, ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಿಗೆ ಪ್ರಯೋಜನ ಪಡೆಯಬಹುದು.
78
ದೇಹವನ್ನು ನಿರ್ವಿಷಗೊಳಿಸುತ್ತದೆ
ಇದು ಉತ್ತಮ ಡಿಟಾಕ್ಸ್ ಪಾನೀಯವಾಗಿದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಟ್ಸ್ ನೀರನ್ನು ಸೇವಿಸಿದಾಗ, ಅದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತವೆ. ಓಟ್ಸ್ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೇಟ್(Hydrate) ಆಗಿರುತ್ತದೆ.
88
ಓಟ್ಸ್ ನೀರನ್ನು ತಯಾರಿಸೋದು ಹೇಗೆ?
ಇದಕ್ಕಾಗಿ, ರಾತ್ರಿ ಮಲಗುವ ಮೊದಲು ಎರಡು ಲೋಟ ನೀರು ಮತ್ತು ಅರ್ಧ ಬಟ್ಟಲು ಓಟ್ಸ್ ಒಂದು ಪಾತ್ರೆಯಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಮಿಕ್ಸರ್ ಸಹಾಯದಿಂದ ಓಟ್ಸ್ ನೀರನ್ನು ತಯಾರಿಸಿ. ನಂತರ, ಓಟ್ಸ್ ನೀರು, ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಒಂದು ಲೋಟದಲ್ಲಿ ಬೆರೆಸಿ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಪ್ರಯೋಜನವಿದೆ. ನೀವು ಮಧುಮೇಹ ರೋಗಿಗಳಾಗಿದ್ರೆ(Diabetic patients) ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.