ತೂಕ ಇಳಿಸಲು ಜೀರಿಗೆ ನೀರು: ಕುಡಿಯೋಕೆ ಈ ಟೈಂ ಬೆಸ್ಟ್

First Published Aug 12, 2021, 10:28 AM IST

ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಜನರು ಮನೆಯಲ್ಲಿ ಉಳಿಯುವಂತಾಗಿದೆ. ಇದರಿಂದ ಹೆಚ್ಚಿನವರು ಹೆಚ್ಚುವರಿ ತೂಕವನ್ನು ಪಡೆಯುವಂತೆ ಮಾಡಿದೆ. ಮತ್ತು ಅಧಿಕ ತೂಕವು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ.

ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳುವಂತೆ ಮಾಡುವ ಭರವಸೆ ನೀಡುವ ಹಲವಾರು ಆಹಾರ ಕ್ರಮಗಳು ಮತ್ತು ತೂಕ ಇಳಿಸುವ ಯೋಜನೆಗಳಿದ್ದರೂ, ಅವುಗಳನ್ನು ಅನುಸರಿಸುವುದು ಮತ್ತು ಸ್ಥಿರವಾಗಿರಿಸುವುದು ಸುಲಭವಲ್ಲ.

ಹೆಚ್ಚುವರಿ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ, ಇಲ್ಲಿ ಕೆಲವು ಟಿಪ್ಸ್ ಗಳಿವೆ.  ಜೀರಿಗೆ ನೀರು ಒಂದು ಸರಳ ಮನೆಯಲ್ಲಿ ತಯಾರಿಸಿದ ಮಿಶ್ರಣವಾಗಿದ್ದು, ಇದು ತೂಕ ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಇಳಿಸಲು ಸಹಾಯ ಮಾಡುತ್ತದೆ.

ತೂಕ ಇಳಿಸಲು ಜೀರಿಗೆ ನೀರು: ಜೀರಿಗೆ ನೀರು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ, ಇದು ಅನಗತ್ಯ ತೂಕ ಹೆಚ್ಚಳದ ಹಿಂದಿನ ಪ್ರಮುಖ ಕಾರಣವಾಗಿರಬಹುದು. ಇಷ್ಟೇ ಅಲ್ಲ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಬೆಳಿಗ್ಗೆ ಜೀರಿಗೆ ನೀರನ್ನು ಸೇವಿಸುವುದು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಮತ್ತು ನಮಗೆಲ್ಲರಿಗೂ ತಿಳಿದಿರುವಂತೆ, ಉತ್ತಮ ಜೀರ್ಣಕ್ರಿಯೆಯು ತೂಕ ಕಳೆದುಕೊಳ್ಳುವ ಮೊದಲ ಹೆಜ್ಜೆಯಾಗಿದೆ. ತೂಕ ಇಳಿಸಲು ಆರೋಗ್ಯಕರ ಕರುಳು ಮುಖ್ಯವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
 

ತೂಕ ಇಳಿಸಲು ಜೀರಿಗೆ  ನೀರು ಸೇವಿಸುವ ಸರಿಯಾದ ಮಾರ್ಗ: ಒಂದು ಕಪ್ ನೀರಿನಲ್ಲಿ 1 ಟೀ ಚಮಚ ಜೀರಿಗೆ ಹಾಕಿ ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ 5 ನಿಮಿಷಗಳ ಕಾಲ ಇದನ್ನು ಕುದಿಸಿ, ಸೋಸಿ ಮತ್ತು ಅದನ್ನು ಸೇವಿಸಿ. ಅದನ್ನು ಕುದಿಸದೇ ಸಹ ಸೇವಿಸಬಹುದು.

ತೂಕ ಇಳಿಸಲು ಜೀರಾ ನೀರನ್ನು ಸೇವಿಸಲು ಸರಿಯಾದ ಸಮಯ: ತೂಕ ಇಳಿಸಲು ಜೀರಾ ನೀರು ಸೇವಿಸಲು ಸರಿಯಾದ ಸಮಯ ವೆಂದರೆ ಬೆಳಗ್ಗೆ ಖಾಲಿ ಹೊಟ್ಟೆ. ಉಪಾಹಾರದ ನಂತರ ಸಹ ಇದನ್ನು ಸೇವಿಸಬಹುದು. 

ಇದನ್ನು ಎಷ್ಟು ಸಮಯದವರೆಗೆ ಸೇವಿಸಬೇಕು?: ಜೀರಿಗೆನೀರನ್ನು ದೀರ್ಘಾವಧಿಗೆ ಮುಂದುವರಿಸುವುದರಿಂದ ಯಾವುದೇ ಹಾನಿಯಿಲ್ಲ.

ತಪ್ಪುಗಳು : ಜೀರಿಗೆ ನೀರು ಗುಣದಲ್ಲಿ ಬೆಚ್ಚಗಿರುತ್ತದೆ ಮತ್ತು ಆದ್ದರಿಂದ ಏಪ್ರಿಲ್, ಮೇ ಮತ್ತು ಜೂನ್ ನಂತಹ ಬಿಸಿ ತಿಂಗಳುಗಳಲ್ಲಿ ಸೇವಿಸಬಾರದು.

click me!