ಮುಖ ತೊಳೆಯೋಕೆ ಸೋಪ್ ಬಳಸ್ತೀರಾ? ಇಷ್ಟೆಲ್ಲಾ ತೊಂದರೆಯಾಗುತ್ತೆ ತಿಳ್ಕೊಳ್ಳಿ

First Published | Jun 11, 2023, 2:44 PM IST

ಮುಖದ ಸೌಂದರ್ಯ ಚೆನ್ನಾಗಿರಬೇಕು. ಫೇಸ್ ಯಾವಾಗ್ಲೂ ಕಾಂತಿಯುತವಾಗಿ ಹೊಳಿತೀರಬೇಕು ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಆ ಬಗ್ಗೆ ಕಾಳಜಿ ಮಾತ್ರ ವಹಿಸೋದಿಲ್ಲ. ಬಹುತೇಕರು ಮುಖಕ್ಕೆ ಸೋಪ್ ಹಚ್ಚುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದ್ರೆ ಇದು ಎಷ್ಟರ ಮಟ್ಟಿಗೆ ಒಳ್ಳೆಯದು?

ಅನೇಕ ಜನರು ತಮ್ಮ ಮುಖವನ್ನು ಸ್ವಚ್ಛಗೊಳಿಸಲು ಮುಖಕ್ಕೆ ಸೋಪು ಹಚ್ಚುತ್ತಾರೆ. ಆದರೆ ಹೀಗೆ ಮಾಡುವುದರಿಂದ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು. ಮುಖಕ್ಕೆ ಸೋಪ್ ಹಚ್ಚುವುದರಿಂದ ಸ್ಕಿನ್‌ನ ನೈಸರ್ಗಿಕ ಹೊಳಪು ಇಲ್ಲವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಉಂಟಾಗುತ್ತದೆ.  ಮುಖದ ಮೇಲೆ ಸೋಪ್ ಅನ್ನು ನಿರಂತರವಾಗಿ ಬಳಸುವುದರಿಂದ ಮುಖದ ಮೇಲೆ ಕೆಂಪು, ಶುಷ್ಕತೆ, ತುರಿಕೆ ಮತ್ತು ಸುಕ್ಕುಗಳಂತಹ ಸಮಸ್ಯೆಗಳು ಉಂಟಾಗಬಹುದು.
 

ಚರ್ಮ ಒಣಗುವ ಸಮಸ್ಯೆ
ಮುಖವನ್ನು ತೊಳೆಯುವಾಗ ಸೋಪ್ ಬಳಸುವ ಅಭ್ಯಾಸ ಚರ್ಮವನ್ನು ಒಣಗಿಸಬಹುದು. ಸೋಪಿನಲ್ಲಿರುವ ರಾಸಾಯನಿಕಗಳು ವಿಷಕಾರಿ ಅಂಶಗಳ ಕಾರಣದಿಂದಾಗಿ ಮುಖದ ಮೇಲೆ ಬ್ಯಾಕ್ಟೀರಿಯಾವನ್ನು ಚರ್ಮದ ಪದರಕ್ಕೆ ಆಳವಾಗಿ ತೂರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಮುಖದ ಮೇಲೆ ಮೊಡವೆಗಳನ್ನು ಉಂಟುಮಾಡಬಹುದು.

Latest Videos


ಚರ್ಮದ ರಂಧ್ರಗಳು ಬ್ಲಾಕ್ ಆಗುತ್ತವೆ
ಮುಖವನ್ನು ತೊಳೆಯುವಾಗ ಸೋಪ್ ನಿಯಮಿತವಾಗಿ ಬಳಸುವುದರಿಂದ ಚರ್ಮದ ರಂಧ್ರಗಳು ಬ್ಲಾಕ್‌ ಆಗುತ್ತವೆ. ಸೋಪುಗಳು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಚರ್ಮದ ರಂಧ್ರಗಳಲ್ಲಿ ಸಂಗ್ರಹಗೊಳ್ಳುತ್ತದೆ. ಇದು ಚರ್ಮದ ರಂಧ್ರಗಳನ್ನು ನಿರ್ಬಂಧಿಸುತ್ತದೆ. ಬ್ಲಾಕ್ ಹೆಡ್ ಗಳು, ಇನ್ ಫೆಕ್ಷನ್ ಗಳಂತಹ ಸಮಸ್ಯೆಗಳು ತ್ವಚೆಯ ರಂಧ್ರಗಳು ಬ್ಲಾಕ್ ಆಗುವುದರಿಂದ ಬರಲು ಶುರುವಾಗುತ್ತದೆ.

ಚರ್ಮದ ವಿಟಮಿನ್ ಇಲ್ಲವಾಗುತ್ತದೆ
ಚರ್ಮವು ಕೆಲವು ನೈಸರ್ಗಿಕ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ತಾಜಾವಾಗಿರಿಸುತ್ತದೆ. ಸೋಪ್ ಪ್ರಬಲ ರಾಸಾಯನಿಕಗಳನ್ನು ಹೊಂದಿರುತ್ತದೆ. ಈ ರಾಸಾಯನಿಕಗಳಿಂದಾಗಿ ಚರ್ಮದಲ್ಲಿ ವಿಟಮಿನ್ ಡಿ ನಷ್ಟವಾಗುತ್ತದೆ. ಹಾಗಾಗಿ ಚರ್ಮದ ಮೇಲಿನ ಹೊಳಪು ಹೋಗುತ್ತದೆ.

ಸೋಪ್ ಅನ್ನು ಬಳಸುವುದರಿಂದ ಮಾಲಿನ್ಯದಿಂದ ಉಂಟಾಗುವ ಸ್ವತಂತ್ರ ರಾಡಿಕಲ್ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಹೀಗಾಗಿ ಮುಖ ತೊಳೆಯಲು ಸೋಪ್ ಬಳಸುವುದನ್ನು ತಪ್ಪಿಸಬೇಕು. ಸ್ನಾನ ಮಾಡುವಾಗ ದೇಹಕ್ಕೆ ಸೋಪ್ ಅನ್ನು ಅನ್ವಯಿಸಬಹುದು. ಆದರೆ ಮುಖವನ್ನು ಸ್ವಚ್ಛಗೊಳಿಸಲು ಫೇಸ್ ವಾಶ್ ಬಳಸಬೇಕು. 

ಫೇಸ್ ವಾಶ್ ಬಳಸಿ 
ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಫೇಸ್ ವಾಶ್ ಆಯ್ಕೆ ಮಾಡಿಕೊಳ್ಳಬೇಕು. ಫೇಸ್ ವಾಶ್‌ನ ವಿಧಗಳೆಂದರೆ ಕ್ರೀಮ್ ಫೇಸ್ ವಾಶ್, ಫೋಮ್ ಫೇಸ್ ವಾಶ್, ಕ್ಲೇ ಫೇಸ್ ವಾಶ್, ಜೆಲ್ ಆಧಾರಿತ ಫೇಸ್ ವಾಶ್ ಇತ್ಯಾದಿ. ಫೇಸ್ ವಾಶ್ ಬಳಸುವುದರಿಂದ ಬೆವರಿನಿಂದ ಮುಖದ ಮೇಲೆ ಅಂಟಿಕೊಂಡಿರುವ ಧೂಳು ಸುಲಭವಾಗಿ ನಿವಾರಣೆಯಾಗುತ್ತದೆ ಮತ್ತು ಮುಖ ಸ್ವಚ್ಛವಾಗಿರುತ್ತದೆ. ನೀವು ಕ್ಲೆನ್ಸಿಂಗ್ ಕ್ರೀಮ್‌ಗಳು, ವಿಟಮಿನ್ ಸಿ ಸೀರಮ್‌ಗಳು ಮತ್ತು ಹೈಡ್ರೇಟಿಂಗ್ ಫೇಸ್ ಮಾಸ್ಕ್‌ಗಳನ್ನು ಮುಖಕ್ಕೆ ಅನ್ವಯಿಸಬಹುದು.

click me!