ಹೊಟ್ಟೆ ಉಬ್ಬರದ ಜೊತೆ ಈ ರೀತಿ ಆಗುತ್ತಿದ್ದರೆ, ಇರಲಿ ಎಚ್ಚರ

First Published | Feb 16, 2021, 4:35 PM IST

ಹೊಟ್ಟೆ ಉಬ್ಬರಿಸಿದಂತಾಗುವುದು ಸಾಮಾನ್ಯ ಸಮಸ್ಯೆ. ಆದರೆ ಇದನ್ನು ಇಗ್ನೋರ್ ಮಾಡುವಂತಿಲ್ಲ. ಯಾಕೆಂದರೆ ಈ ರೀತಿ ತುಂಬಾ ಸಲ ಆಗುತ್ತಿದ್ದರೆ, ಬೇರೆ ಬೇರೆ ಅರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಹೊಟ್ಟೆಯಲ್ಲಿ ಏನಾದರೂ ಶಬ್ಧವಾದರೆ ಅಂತಹ ಶಬ್ಧಗಳನ್ನು ಇಗ್ನೋರ್‌ ಮಾಡಬೇಡಿ. ಇದರಿಂದ ಸಮಸ್ಯೆ ಉಲ್ಬಣಿಸಿ ಬೇರೆನೋ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. 

ಹೊಟ್ಟೆಯಲ್ಲಿ ಶಬ್ದ ಯಾವೆಲ್ಲಾ ಕಾರಣದಿಂದ ಉಂಟಾಗಬಹುದು ಎಂಬ ಮಾಹಿತಿ ಇಲ್ಲಿದೆ. ಈ ಬಗ್ಗೆ ತಿಳಿದುಕೊಂಡು ವೈದ್ಯರ ಬಳಿ ಪರೀಕ್ಷಿಸಿದರೆ, ಸಮಸ್ಯೆ ನಿವಾರಣೆಯಾಗಬಹುದು. ಈ ಸಮಸ್ಯೆಗಳ ಬಗ್ಗೆ ತಿಳಿಯೋಣ....
undefined
ಹೊಟ್ಟೆಯಲ್ಲಿ ಟ್ಯೂಮರ್ :ಡಯಟ್‌ ಅಥವಾ ಎಕ್ಸರ್‌ಸೈಜ್‌ನಲ್ಲಿ ಏನಾದರೂ ಬದಲಾವಣೆಯಾದರೆ ಹೊಟ್ಟೆ ಉಬ್ಬರಿಸುವುದು ಅಥವಾ ಅಚಾನಕ್‌ ಆಗಿ ತೂಕ ಕಡಿಮೆಯಾಗುವ ಸಮಸ್ಯೆ ಉಂಟಾಗುತ್ತದೆ. ಇದು ಹೊಟ್ಟೆಯಲ್ಲಿ ಟ್ಯೂಮರ್‌ ಆಗಿರುವ ಸಂಕೇತವಾಗಿರುವ ಸಾಧ್ಯತೆ ಇದೆ.
undefined

Latest Videos


ಟ್ಯೂಮರ್‌ ಕ್ಯಾನ್ಸರ್‌:ಒಂದು ವೇಳೆ ಹೊಟ್ಟೆ ಉಬ್ಬರಿಸುವ ಜೊತೆಗೆ ಮಲ ವಿಸರ್ಜನೆ ಮಾಡುವಾಗ ರಕ್ತ ಬರುತ್ತಿದ್ದರೆ ಅಥವಾ ಮಲಬದ್ಧತೆ ಉಂಟಾದರೆ ಅದು ಕೊಲೋನ್‌ ಅಥವಾ ಯುಟರಸ್‌ ಕ್ಯಾನ್ಸರ್‌ಸಂಕೇತ.
undefined
ಹೆಪಟೈಟೀಸ್‌ :ಒಂದು ವೇಳೆ ಹಳದಿ ಕಣ್ಣು ಮತ್ತು ಸ್ಕಿನ್‌ ಹಳದಿಯಾಗುವುದರ ಜೊತೆಗೆ ಹೊಟ್ಟೆ ಉಬ್ಬರಿಸಿದಂತೆ ಆದರೆ ಅದು ಹೆಪಟೈಟೀಸ್‌ನ ಸಂಕೇತವಾಗಿದೆ.
undefined
ಕೊಲೋನ್‌ ಇನ್‌ಫೆಕ್ಷನ್‌ :ಹೊಟ್ಟೆ ಉಬ್ಬರಿಸುವ ಜೊತೆಗೆ ಹಸಿವು ಕಡಿಮೆಯಾದರೆ, ಮಲಬದ್ಧತೆ ಮತ್ತು ಜ್ವರ ಉಂಟಾದರೆ ಅದು ಕೊಲೋನ್‌ ಇನ್‌ಫೆಕ್ಷನ್‌ನ ಸಂಕೇತ ಎಂದು ಹೇಳಲಾಗುತ್ತದೆ.
undefined
ಲಿವರ್‌ ಸಮಸ್ಯೆ :ಅಚಾನಕ್‌ ಆಗಿ ಡಯಟ್ ಅಥವಾ ರುಟೀನ್‌ನಲ್ಲಿ ಏನಾದರೂಬದಲಾವಣೆ ಮಾಡದೆ ಇದ್ದರೂ ತೂಕ ಸಡನ್‌ ಆಗಿ ಹೆಚ್ಚಾದರೆ, ಇದು ಲಿವರ್‌ ಸಮಸ್ಯೆಯಾಗಿರಬಹುದು.
undefined
ಹರ್ನಿಯಾ :ಹೊಟ್ಟೆಯಲ್ಲಿ ನೀರು ತುಂಬುವುದರಿಂದಲೂ ಹೊಟ್ಟೆ ಉಬ್ಬರಿಸುತ್ತದೆ. ಜೊತೆಗೆ ಶೀತ- ಕೆಮ್ಮು ಉಂಟಾಗಿ - ತೂಕ ಕಡಿಮೆಯಾದರೆ ಇದು ಹರ್ನಿಯಾದ ಸಂಕೇತ.
undefined
ಹೊಟ್ಟೆಯ ಕ್ಯಾನ್ಸರ್:ಹೊಟ್ಟೆ ಉಬ್ಬರಿಸುವ ಜೊತೆಗೆ ಡೈಜೇಶನ್‌ ಸರಿಯಾಗಿ ಆಗದೆ ಇದ್ದರೆ ಹಾಗೂ ಹೊಟ್ಟೆಯ ಮೇಲಿನ ಭಾಗ ತುಂಬಿದಂತೆ ಆದರೆ ಅದು ಹೊಟ್ಟೆಯ ಕ್ಯಾನ್ಸರ್‌ನ ಸಂಕೇತವಾಗಿದೆ.
undefined
click me!