ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿನ್ನಲೇಬಾರದು!

First Published | Aug 19, 2024, 6:19 PM IST

ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನಬಾರದು. ಆ ಹಣ್ಣುಗಳ ಪಟ್ಟಿ ಇಲ್ಲಿದೆ.

ಅನಾರೋಗ್ಯದಿಂದ ಬಳಲುತ್ತಿದ್ದರೆ  ಹಣ್ಣುಗಳನ್ನು ಸೇವನೆ ಮಾಡುವಂತೆ  ಸಲಹೆ ನೀಡಲಾಗುತ್ತದೆ. ಕಾರಣ ಹಣ್ಣುಗಳಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ. ಆದ್ರೆ ಕೆಲವು ಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. 

fruits and vegetables

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಉಪವಾಸ ಸಂದರ್ಭದಲ್ಲಿ ಹಣ್ಣುಗಳ ಸೇವನೆಗೆ ಮಹತ್ವ ನೀಡಲಾಗುತ್ತದೆ. ಇಡೀ ದಿನ ಉಪವಾಸ ಮಾಡಿರುವ ದೇಹಕ್ಕೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಹಾಗಾಗಿ ಹಣ್ಣು ಸೇವನೆ ಮಾಡಲು ಸಲಹೆ ನೀಡುತ್ತಾರೆ. 

Latest Videos


ಕೆಲವು ಹಣ್ಣುಗಳನ್ನು ಊಟ ಆದ್ಮೇಲೆ ತಿನ್ನಬೇಕು. ಒಂದಿಷ್ಟು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸಿಟ್ರಸ್ ಹಣ್ಣುಗಳು

ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳು ಹೆಚ್ಚು ಆಮ್ಲೀಯ ಅಂಶವನ್ನು ಹೊಂದಿರುತ್ತವೆ. ಇವುಗಳನ್ನು ಬೆಳಗ್ಗೆ ಖಾಲಿ  ಹೊಟ್ಟೆಯಲ್ಲಿ ಸೇವಿಸುವುದರಿಂದ ಎದೆಯುರಿ, ಕಿರಿಕಿರಿ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗುತ್ತವೆ.

ಟೊಮೆಟೋ

ಟೊಮೆಟೋವನ್ನು ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ಟೊಮೆಟೋ ಸಹ ಆಮ್ಲೀಯ ಗುಣಗಳನ್ನು ಹೊಂದಿರುವ ಕಾರಣ ಮಿತವಾಗಿ ಬಳಸಬೇಕು. ಖಾಲಿ ಹೊಟ್ಟೆಯಲ್ಲಿ ತಿಂದರೆ ಹೊಟ್ಟೆಯ ಆಮ್ಲೀಯತೆ ಹೆಚ್ಚಾಗುತ್ತದೆ. ಈ ಆಮ್ಲೀಯತೆಯು ಕಿರಿಕಿರಿ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇವುಗಳನ್ನು ನಿತ್ಯವೂ ಸೇವಿಸಿದಾಗ ನಮ್ಮ ರಕ್ತದಲ್ಲಿರುವ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಸಮತೋಲನ ಹಾಳಾಗುತ್ತದೆ. ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಅನಾನಸ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದು ಬ್ರೋಮೆಲಿನ್ ಅನ್ನು ಹೊಂದಿರುತ್ತದೆ. ಇದು ಹೊಟ್ಟೆಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ.

ಪೇರಲ

ಪೇರಲದಲ್ಲಿ ಫೈಬರ್ ಮತ್ತು ಫ್ರಕ್ಟೋಸ್ ಅಧಿಕವಾಗಿದೆ. ಖಾಲಿ ಹೊಟ್ಟೆಯಲ್ಲಿ ಈ ಪೇರಲ ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಿನ ನೀರಿನ ಅಂಶವಿರುವ ಕಲ್ಲಂಗಡಿ ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆಯ ಮಟ್ಟವನ್ನು ಹೆಚ್ಚಿಸುತ್ತದೆ.

click me!