ಮಧ್ಯಾಹ್ನ ನಿದ್ದೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದಾ ? ಮಲಗಿದ್ರೆ ಎಷ್ಟು ಸಮಯ ನಿದ್ರಿಸಬೇಕು?

First Published | Aug 18, 2024, 1:25 PM IST

ನಿದ್ದೆ ತುಂಬಾ ಮುಖ್ಯವಾಗಿರುತ್ತದೆ. ರಾತ್ರಿ ಕನಿಷ್ಠ 8 ಗಂಟೆ ನಿದ್ದೆ ಮಾಡಬೇಕೆಂದು  ವೈದ್ಯರು ಸಲಹೆ ನೀಡುತ್ತಾರೆ. ಮಧ್ಯಾಹ್ನ ಊಟದ ನಂತರ ನಿದ್ರೆ ಮಾಡುವುದು ಒಳ್ಳೆಯದೇ? 

Afternoon Nap Benefits: Insights from Doctors and Researchers mrq

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ, ಅಷ್ಟೇ ಸರಿಯಾದ ನಿದ್ರೆ ಕೂಡ ಅತ್ಯಗತ್ಯ. ನಿದ್ರಾಹೀನತೆಯಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಮಧ್ಯಾಹ್ನದ ನಿದ್ರೆ ಎಂದು ಕೆಲವು ವೈದ್ಯರು ಹೇಳುತ್ತಾರೆ. ನಿದ್ರಾಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ವಿದೇಶಗಳಲ್ಲಿ ಕೆಲವು ವಿಶ್ವವಿದ್ಯಾಲಯಗಳು ಹಲವಾರು ಸಂಶೋಧನೆಗಳನ್ನು ನಡೆಸಿವೆ.

Afternoon Nap Benefits: Insights from Doctors and Researchers mrq
ನೌಕರರಿಗೆ ನಿದ್ರೆ ಬಹಳ ಮುಖ್ಯ

ಕಚೇರಿಗಳಲ್ಲಿ ಕೆಲಸ ಮಾಡೋರಿಗೆ ಮಧ್ಯಾಹ್ನ ಆಗುತ್ತಿದ್ದಂತೆ ಕಣ್ಣುಗಳು ಭಾರವಾದಂತೆ ಆಗುತ್ತದೆ. ಆ ಸಮಯದಲ್ಲಿ ಸಣ್ಣ ನಿದ್ರೆ ಮಾಡುವುದರಿಂದ ತುಂಬಾ ನಿರಾಳವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಇದೇ ವಿಷಯದ ಬಗ್ಗೆ ಹೆಚ್ಚಿನ ಜನರ ಮೇಲೆ ಪರೀಕ್ಷೆ ನಡೆಸಿದಾಗ, ಹೆಚ್ಚಿನವರಲ್ಲಿ ಉತ್ತಮ ಫಲಿತಾಂಶಗಳು ಬಂದಿವೆ.

Tap to resize

ಹಲವು ಸಂಶೋಧನೆಗಳು ಮಧ್ಯಾಹ್ನದ ನಿದ್ದೆ ಒಳ್ಳೆಯದು ಎಂದು ದೃಢಪಡಿಸಿವೆ. ವಿಶೇಷವಾಗಿ ಪಾಳಿಗಳಲ್ಲಿ ಕೆಲಸ ಮಾಡುವವರು, ದೀರ್ಘ ಡ್ರೈವ್ ಮಾಡುವವರು, ಮಧ್ಯದಲ್ಲಿ ಸ್ವಲ್ಪ ನಿದ್ದೆ ಮಾಡುವುದು ಎಲ್ಲ ರೀತಿಯಲ್ಲಿಯೂ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 

ಸದಾ ಒತ್ತಡದಲ್ಲಿ ಕೆಲಸ ಮಾಡುವ ಜನರು ಮಧ್ಯಾಹ್ನ ನಿದ್ದೆಗೆ ಸಮಯ ಮೀಸಲಿಡಬೇಕು. ನಿದ್ದೆ ಮಾಡದೇ ಕೆಲಸ ಮಾಡುತ್ತಿದ್ರೆ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಮಧ್ಯಾಹ್ನ ಸ್ವಲ್ಪ ಸಮಯ ಮಲಗಿದರೆ ಮನಸ್ಸು ನಿರಾಳವಾಗುವ ಮೂಲಕ ಕಾರ್ಯಕ್ಷಮತೆ ಹೆಚ್ಚಳವಾಗುತ್ತದೆ.

ಸಂಶೋಧಕಿ ವಿಕ್ಟೋರಿಯಾ ಗಾರ್ಫೀಲ್ಡ್ ಎಂಬವರು ವಿದ್ಯಾರ್ಥಿಗಳು, ಉದ್ಯೋಗಿಗಳು, ವೃದ್ಧರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರೋರ ಮೇಲೆ ಸಂಶೋಧನೆ ನಡೆಸಿದ್ದಾರೆ. ಇವರೆಲ್ಲಾ ಮಧ್ಯಾಹ್ನ ಕನಿಷ್ಠ ಅರ್ಧ ಗಂಟೆ ನಿದ್ದೆ ಮಾಡಿದ ಬಳಿಕ ವಿದ್ಯಾರ್ಥಿಗಳು ಗಣಿತ  ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿದ್ದಾರೆ. ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಳ, ವೃದ್ಧರಲ್ಲಿ ಆರೋಗ್ಯ ಸುಧಾರಣೆ ಕಂಡು ಬಂದಿದೆ.

ಮಧ್ಯಾಹ್ನ 20 ನಿಮಿಷಗಳ ಕಾಲ ನಿದ್ದೆ ಮಾಡಿದರೆ ಉತ್ತಮ ಫಲಿತಾಂಶ ಕಂಡುಬರುತ್ತದೆ ಎಂದು ವರ್ಜೀನಿಯಾ ಕಾಮನ್ವೆಲ್ತ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ನಟಾಲಿ ಡಾಟೊವಿಚ್ ತಂಡ ಬಹಿರಂಗಪಡಿಸಿದೆ.

sleep

ಒಂದು ಗಂಟೆಯಿಂದ ಒಂದೂವರೆ ಗಂಟೆಗಳ ಕಾಲ ನಿದ್ರೆ ಮಾಡಿದರೆ ಇನ್ನೂ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಆದರೆ ಮಧ್ಯದಲ್ಲಿ ಎದ್ದರೆ ಅಷ್ಟೊಂದು ಉತ್ತಮ ಪರಿಣಾಮ ಬೀರುವುದಿಲ್ಲ ಎಂದು ಗಮನಿಸಿದ್ದಾರೆ.

Latest Videos

click me!