ಉದ್ದವಾದ ಉಗುರು ಬಿಟ್ಟಿದ್ದೀರಾ? ನಿಮ್ ಆರೋಗ್ಯ ಹುಷಾರ್ ಕಣ್ರೀ…

First Published Aug 12, 2022, 5:26 PM IST

ಉದ್ದವಾದ ಉಗುರು ಬಿಟ್ಟು, ಅದಕ್ಕೆ ಬೇರೆ ಬೇರೆ ರೀತಿಯ ನೇಲ್ ಪೇಂಟ್ ಹಚ್ಚೋದು ಇದೀಗ ಫ್ಯಾಶನ್ ಆಗಿಬಿಟ್ಟಿದೆ. ನೀವು ಉದ್ದವಾದ ಉಗುರುಗಳನ್ನು ಇಟ್ಟುಕೊಳ್ಳಲು ಬಯಸಿದ್ದೀರಾ? ಅಥವಾ ನೀವು ಈ ಲಾಂಗ್ ನೇಲ್ ಟ್ರೆಂಡ್ ಫಾಲೋ ಮಾಡೋರಾ? ಹಾಗಿದ್ರೆ ನೀವಿದನ್ನು ಓದ್ಲೇ ಬೇಕು. ನೀವೂ ಉದ್ದ ಉಗುರು ಬೆಳೆಸಿದ್ರೆ, ಅವುಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ, ಇಲ್ಲದಿದ್ದರೆ ಅನೇಕ ಸೋಂಕುಗಳು ನಿಮ್ಮನ್ನು ಕಾಡಬಹುದು. ಅತಿಸಾರ ವಾಂತಿ ಮಾಡುವುದರ ಜೊತೆಗೆ ಇತರ ಅನೇಕ ಗಂಭೀರ ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಇದು ಹೇಗೆ, ಉದ್ದ ಉಗುರು ಬೆಳೆಸೋದ್ರಿಂದ ಏನಾಗುತ್ತೆ ತಿಳಿಯೋಣ. 

ಉದ್ದವಾಗಿ ಬೆಳೆಸಿದ ಉಗುರುಗಳು ಹುಡುಗಿಯರ ಸೌಂದರ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ, ಆದರೆ ಇದೇ ಉದ್ದವಾದ ಉಗುರುಗಳು  (long nails) ಅನೇಕ ರೀತಿಯ ರೋಗಗಳಿಗೆ ನೆಲೆಯಾಗಿವೆ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ತಿಳಿದುಕೊಳ್ಳಿ. 

ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯ ಉದ್ದವಾದ ಉಗುರುಗಳು 32 ಕ್ಕೂ ಹೆಚ್ಚು ಬ್ಯಾಕ್ಟೀರಿಯಾ ಮತ್ತು 28 ಕ್ಕೂ ಹೆಚ್ಚು ಶಿಲೀಂಧ್ರ ಪ್ರಭೇದಗಳಿಗೆ ನೆಲೆಯಾಗಬಹುದು. ಆದ್ದರಿಂದ, ನೀವು ಉದ್ದವಾದ ಉಗುರುಗಳನ್ನು ಇಟ್ಟುಕೊಂಡರೆ, ಅವುಗಳನ್ನು ಸರಿಯಾಗಿ ಕ್ಲೀನ್ ಮಾಡೋದು ಮುಖ್ಯ. ಉದ್ದವಾದ ಉಗುರುಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ.

ಸೋಂಕು ಉಂಟಾಗಬಹುದು
ನಿಮ್ಮ ಉಗುರುಗಳು ಉದ್ದವಾಗಿದ್ದರೆ ಮತ್ತು ನೀವು ಅವುಗಳನ್ನು ಕ್ಲೀನ್ ಆಗಿಟ್ಟುಕೊಳ್ಳದೇ ಇದ್ರೆ ಅದು ತುಂಬಾ ಗಂಭೀರ ಸೋಂಕಿಗೆ ಕಾರಣವಾಗಬಹುದು. ವಾಸ್ತವವಾಗಿ, ಉದ್ದವಾದ ಉಗುರುಗಳು ಪಿನ್ ವರ್ಮ್ ಗಳಿಗೆ (pin worm) ಕಾರಣವಾಗಬಹುದು. ಇವು ಆರೋಗ್ಯಕ್ಕೆ ಮಾರಕವಾಗಿವೆ.

ಪಿನ್ ವರ್ಮ್ ಗಳು ಬಿಳಿ ಬಣ್ಣ ಹೊದಿದ್ದು ಮತ್ತು ತೆಳುವಾಗಿರುತ್ತೆ, ಅವು ಒಂದು ಅಂಗುಲಕ್ಕಿಂತ ಕಡಿಮೆ ಗಾತ್ರವನ್ನು ಹೊಂದಿರುತ್ತೆ. ಇವು ಉಗುರುಗಳ ಮೂಲಕ ಹೊಟ್ಟೆಯನ್ನು ಪ್ರವೇಶಿಸಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. ಆದುದರಿಂದ ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿದರೆ ಉತ್ತಮ.
 

ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ
ಬ್ಯಾಕ್ಟೀರಿಯಾ, ವೈರಸ್ ಗಳ ವಿರುದ್ಧ ಹೋರಾಡುವುದು ಪ್ರತಿರಕ್ಷಣಾ ವ್ಯವಸ್ಥೆಯ ಕೆಲಸವಾಗಿದೆ. ನಿಮ್ಮ ಉದ್ದನೆಯ ಉಗುರುಗಳನ್ನು ನೀವು ಪ್ರತಿದಿನ ಸ್ವಚ್ಛವಾಗಿಡದಿದ್ದರೆ, ಉಗುರುಗಳ ಒಳಗೆ ಬ್ಯಾಕ್ಟೀರಿಯಾ, ಕೀಟಾಣುಗಳಿಂದ ಆಗಾಗ್ಗೆ ಸೋಂಕು ಉಂಟಾಗುತ್ತದೆ ಮತ್ತು ಇದು ರೋಗನಿರೋಧಕ ಶಕ್ತಿಯನ್ನು (immunity power) ದುರ್ಬಲಗೊಳಿಸುತ್ತದೆ.

ವಾಂತಿ ಮತ್ತು ಅತಿಸಾರ
ನಿಮ್ಮ ಉಗುರುಗಳು ಉದ್ದವಾಗಿದ್ದರೆ, ಅವುಗಳಲ್ಲಿ ಹೆಪ್ಪುಗಟ್ಟಿದ ಬ್ಯಾಕ್ಟೀರಿಯಾಗಳು ಅಡುಗೆ ಮತ್ತು ತಿನ್ನುವ ಸಮಯದಲ್ಲಿ ಹೊಟ್ಟೆಯನ್ನು ಸೇರುತ್ತವೆ. ಇದಲ್ಲದೆ, ಅನೇಕ ಜನರು ಉಗುರುಗಳನ್ನು ಅಗಿಯುವ (nail biting) ಅಭ್ಯಾಸವನ್ನು ಸಹ ಹೊಂದಿದ್ದಾರೆ, ಆದ್ದರಿಂದ ಈ ಕೊಳಕು ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಸಂಗ್ರಹವಾಗುತ್ತಲೇ ಇರುತ್ತವೆ. ಇದರಿಂದಾಗಿ ಅತಿಸಾರ ಮತ್ತು ವಾಂತಿಯ ಸಮಸ್ಯೆಗಳು ಉಂಟಾಗಬಹುದು.

ಗರ್ಭಧಾರಣೆ ಕೂಡ ಅಪಾಯಕಾರಿ
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳಲ್ಲಿನ ಬದಲಾವಣೆಗಳಿಂದಾಗಿ, ಅನೇಕ ಬಾರಿ ಉಗುರುಗಳು ಬಹಳ ವೇಗವಾಗಿ ಬೆಳೆಯುತ್ತವೆ ಮತ್ತು ಅದೇ ಸಮಯದಲ್ಲಿ ದುರ್ಬಲವಾಗುತ್ತವೆ. ಆದ್ದರಿಂದ ಉಗುರುಗಳಲ್ಲಿನ ಕೊಳೆಯಿಂದಾಗಿ ಯಾವುದೇ ರೀತಿಯ ಬ್ಯಾಕ್ಟೀರಿಯಾದ ಸೋಂಕು ಇದ್ದರೆ, ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. 
 

click me!