ಸಮ್ಮರ್‌ಗೆ ತಂಪು ತಂಪು ಕೂಲ್ ಕೂಲ್ ಡ್ರಿಂಕ್ಸ್ ಕುಡಿದು ಕೂಲ್ ಆಗಿ!
First Published | Mar 17, 2020, 12:30 PM ISTದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಅಂಶ ಮತ್ತು ಎಲೆಕ್ಟ್ರೋಲೈಟ್ಸ್‌ಗಳು ಬೆವರಿನ ಮೂಲಕ ಖಾಲಿಯಾಗಿ ಡೀಹೈಡ್ರೇಷನ್‌ಗೆ ಕಾರಣ ವಾಗುತ್ತದೆ. ಸಮ್ಮರ್‌ನಲ್ಲಿ ನಾವು ಪದೇ ಪದೇ ನೀರು ಕುಡಿಯುವ ಮೂಲಕ ಹೈಡ್ರೇಟ್ ಆಗಿರುವುದು ಅಗತ್ಯ. ಆದರೆ ಬರೀ ನೀರೇ ಕುಡಿಯೋಕ್ಕೆ ಬೋರ್ ಅಲ್ವಾ? ಪ್ಲೇವರ್ ಚೆಂಜ್ ಮಾಡಿ ಕುಡಿಯುವುದರಿಂದ ನೀರು ಕುಡಿಯಲು ಮಜಾ ಇರುತ್ತೆ ಜೊತೆಗೆ ನಾವು ಆರೋಗ್ಯವಾಗಿರುವುದು ಖಂಡಿತ.